Close Menu
KARAVALIDAILYNEWS
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ

Subscribe to Updates

Get the latest creative news from FooBar about art, design and business.

What's Hot

ಸ್ತ್ರೀ ವಿನೂತನ ಪರಿಕಲ್ಪನೆ ಸಂಗೀತ ಕಾರ್ಯಕ್ರಮ: ಸಂಗೀತ ಗುರುಗಳಿಂದ ಚಾಲನೆ, ಗಮನ ಸೆಳೆದ ಕೆಂಪು ದಿರಿಸು

February 22, 2026

450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಉದ್ಘಾಟನೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಜೆಟ್‌ನಲ್ಲಿ ಘೋಷಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ

February 22, 2026

ಉತ್ತರ ಕನ್ನಡ ಜಿಲ್ಲೆಯ ಮಂಜುಗುಣಿಯ . 34. 21 ಕೋಟಿ ವೆಚ್ಚದ ಸೇತುವೆ ಲೋಕಾರ್ಪಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ

February 22, 2026
Facebook X (Twitter) Instagram
Trending
  • ಸ್ತ್ರೀ ವಿನೂತನ ಪರಿಕಲ್ಪನೆ ಸಂಗೀತ ಕಾರ್ಯಕ್ರಮ: ಸಂಗೀತ ಗುರುಗಳಿಂದ ಚಾಲನೆ, ಗಮನ ಸೆಳೆದ ಕೆಂಪು ದಿರಿಸು
  • 450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಉದ್ಘಾಟನೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಜೆಟ್‌ನಲ್ಲಿ ಘೋಷಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ
  • ಉತ್ತರ ಕನ್ನಡ ಜಿಲ್ಲೆಯ ಮಂಜುಗುಣಿಯ . 34. 21 ಕೋಟಿ ವೆಚ್ಚದ ಸೇತುವೆ ಲೋಕಾರ್ಪಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ
  • ಲಂಚದ ಆಸೆ, ಲೋಕಾ ಬಲೆಗೆ ಬಿದ್ದ ಶಿರಹಟ್ಟಿ ಬಿಜೆಪಿ ಶಾಸಕ ಡಾ, ಚಂದ್ರು ಲಮಾಣಿ, ಇಬ್ಬರು ಆಪ್ತ ಕಾರ್ಯದರ್ಶಿಗಳ ವಿಚಾರಣೆ
  • ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಆಲ್ಫಾ ಚಿತ್ರದ ಡಾಮಿನೇಶನ್ ಹೇಮಂತ್ ಹವಾ!
  • ಶಿವಾಜಿ ಮೆರವಣಿಗೆ ವೇಳೆ ಕಲ್ಲು ಎಸೆದ ವ್ಯಕ್ತಿ ಬಂಧನ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿ, 7 ಮಂದಿ ಆರೆಸ್ಟ್, ಪರಿಸ್ಥಿತಿ ಹತೋಟಿ: ಜಿಲ್ಲಾ ಎಸ್ಪಿ ಸಿದ್ದಾರ್ಥ ಗೋಯಲ್
  • ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಬಿಗುವಿನ ವಾತಾವರಣ ನಿಷೇಧಾಜ್ಞೆ, ಪರಿಸ್ಥಿತಿ ತಹಬದಿಗೆ ಎಂದ ಎಸ್ಪಿ ಸಿದ್ಧಾರ್ಥ ಗೋಯಲ್
  • ಕಾರ್ಕಳ: ಯುವಕ ಏಕಾಏಕಿ ಕುಸಿದು ಬಿದ್ದು ಸಾವು, ದೂರು ದಾಖಲು
Facebook X (Twitter) Instagram
KARAVALIDAILYNEWSKARAVALIDAILYNEWS
Demo
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ
KARAVALIDAILYNEWS
Home»ಜಿಲ್ಲೆ»ಉಡುಪಿ»450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಉದ್ಘಾಟನೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಜೆಟ್‌ನಲ್ಲಿ ಘೋಷಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಉಡುಪಿ

450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಉದ್ಘಾಟನೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಜೆಟ್‌ನಲ್ಲಿ ಘೋಷಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ

KaravalidailynewsBy KaravalidailynewsFebruary 22, 2026No Comments27 Views
Facebook WhatsApp Twitter Email Telegram Copy Link
Share
Facebook Twitter Email WhatsApp Copy Link

 

ಕಾರವಾರ: ಇಲ್ಲಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭ ಮಾಡುವ ಕುರಿತಂತೆ ಈ ಬಾರಿ ಬಜೆಟ್ ನಲ್ಲಿ ಮಂಜೂರಾತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಭಾನುವಾರ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ರೂ.198.27 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಉದ್ಘಾಟನೆ ಮತ್ತು ಯಲ್ಲಾಪುರ ತಾಲ್ಲೂಕಿನ ಖಾನಾಪುರ ತಾಳಗುಪ್ಪಾ ರಾಜ್ಯ ಹೆದ್ದಾರಿ-93 ರಲ್ಲಿ ರೂ. 720.81 ಲಕ್ಷ ರೂ ವೆಚ್ಚದ ಸೇತುವೆ ಕಾಮಗಾರಿ, ಯಲ್ಲಾಪುರ ಪಟ್ಟಣದಲ್ಲಿ
ರೂ.202.89 ಲಕ್ಷ ವೆಚ್ಚದ ನಿರೀಕ್ಷಣಾ ಮಂದಿರದ ಹೊಸ ಕಟ್ಟಡ ನಿರ್ಮಾಣ ಹಾಗೂ ಮುಂಡಗೋಡ ತಾಲ್ಲೂಕಿನಲ್ಲಿ ರೂ.248.18 ಲಕ್ಷ ಮೊತ್ತದ ಹೊಸ ಪ್ರವಾಸಿ ಮಂದಿರ ನಿರ್ಮಾಣ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರವಾರಕ್ಕೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಆಗಬೇಕು ಎಂದು ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕರು ಹಲವು ಬಾರಿ ಬೇಡಿಕೆ ಸಲ್ಲಿಸಿದ್ದಾರೆ ಹಾಗೂ ಒತ್ತಾಯಿಸಿದ್ದಾರೆ ಮತ್ತು ಇದು ಈ ಭಾಗದ ಜನರ ಪ್ರಮುಖ ಬೇಡಿಕೆ ಕೂಡ ಆಗಿದ್ದು, ಈ ಬಾರಿಯ ಆಯವ್ಯಯದಲ್ಲಿ ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ನೀಡಲಾಗುವುದು ಎಂದರು.

ಇಲ್ಲಿನ ಬಡ ಮತ್ತು ಸಾಮಾನ್ಯ ವರ್ಗದ ಸಾರ್ವಜಿನಕರು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ, ಉಡುಪಿ, ಮಂಗಳೂರಿಗೆ ಹೋಗಬೇಕಾಗಿತ್ತು. ಪ್ರಸ್ತುತ ನಿರ್ಮಿಸಿರುವ 450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಈ ಸಮಸ್ಯೆ ನಿವಾರಣೆಯಾಗಿದ್ದು, ಇಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಕೂಡ ಯೂನಿಟ್ ಆರಂಭಗೊಳ್ಳುತ್ತಿದೆ. ಕಾರವಾರದಲ್ಲಿ ಬಾಕಿ ಇರುವ ಉಳಗಾ-ಕೆರವಡಿ ಸೇತುವೆ ಕಾಮಗಾರಿಯನ್ನು ಆದ್ಯತೆಯಲ್ಲಿ ಕೈಗೊಳ್ಳಲಾಗುವುದು, ಕಾಮಗಾರಿಗೆ ಅಗತ್ಯವಿರುವ ಸಂಪೂರ್ಣ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಲಾಗುವುದು ಎಂದ ಅವರು, ಈ ಕಾರ್ಯ ಆಯಿತು ಎಂದು ತಿಳಿದುಕೊಳ್ಳಿ ಎಂದರು.

ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮೆಡಿಕಲ್ ಕಾಲೇಜು ಆರಂಭಿಸುವ ಉದ್ದೇಶ ಹೊಂದಿದ್ದು, ಈಗಾಗಲೇ 22 ಜಿಲ್ಲೆಗಳಲ್ಲಿ ಸರಕಾರಿ ಮೆಡಿಕಲ್ ಕಾಲೇಜುಗಳಿದ್ದು, ಉಳಿದ ಜಿಲ್ಲೆಗಳಲ್ಲೂ ಶೀಘ್ರದಲ್ಲಿ ಆರಂಭಿಸುವ ಮೂಲಕ ರಾಜ್ಯದ ಜನರಿಗೆ ಆರೋಗ್ಯ ಸೇವೆ ಒದಗಿಸಲಾಗುವುದು ಎಂದರು.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ದಿ ಯೋಜನೆಗಳೂ ನಡೆಯುತ್ತಿಲ್ಲ ಎಂಬ ವಿರೋಧ ಪಕ್ಷಗಳ ಟೀಕೆಗೆ, ರಾಜ್ಯದ್ಯಾಂತ ನಡೆಯುತ್ತಿರುವ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಗಳೇ ಸೂಕ್ತ ಉತ್ತರ ನೀಡುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಗ್ಯಾರೆಂಟಿ ಯೋಜನೆಗಳ ಮೂಲಕ ಸಾರ್ವಜನಿಕರಿಗೆ ಇದುವರೆಗೆ ರೂ. 2,954 ಕೋಟಿ ನೀಡಿದ್ದು, ರಾಜ್ಯದಲ್ಲಿ 1 .18 ಲಕ್ಷ ಕೋಟಿ ನೆರವು ನೀಡಲಾಗಿದೆ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಮಾತನಾಡಿ, ರಾಜ್ಯದ ಜನರು ನಮಗೆ ದೊಡ್ಡ ಶಕ್ತಿ ನೀಡಿದ್ದೀರಿ ಅದರ ಪ್ರತಿಯಾಗಿ ನಾವು ಜನರ ಹಿತಕ್ಕಾಗಿ ಈ ಎಲ್ಲಾ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದೇವೆ. ನಮ್ಮ ರಾಜ್ಯದ ವೈದ್ಯರು ಅತ್ಯಂತ ಬುದ್ದಿವಂತರಿದ್ದಾರೆ, ಹೊರ ದೇಶಗಳ ರೋಗಿಗಳು ಇಲ್ಲಿ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದ ಅನೇಕ ವೈದ್ಯರು ವಿದೇಶಗಳಲ್ಲಿ ಉತ್ತಮ ಹೆಸರು ಗಳಿಸಿ, ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು

ನಮ್ಮ ಸರಕಾರ ನುಡಿದಂತೆ ನಡೆದು ಎಲ್ಲ ಗ್ಯಾರಂಟಿಗಳನ್ನು ಜನರಿಗೆ ತಲುಪಿಸುವ ಅತ್ಯಂತ ಪ್ರಾಮಾಣಿಕ ಪ್ರಯತ್ನ ನಮ್ಮ ಸರಕಾರ ಮಾಡಿದೆ. ಪಂಚ ಗ್ಯಾರಂಟಿ ಜೊತೆಗೆ ಭೂಮಿ ಗ್ಯಾರಂಟಿ, ನೀರು ಗ್ಯಾರಂಟಿ, ಮನೆ ಗ್ಯಾರಂಟಿ, ಇ-ಖಾತೆ ಗ್ಯಾರಂಟಿ, ಆರೋಗ್ಯ ಗ್ಯಾರಂಟಿ ನೀಡಲಾಗುತ್ತಿದೆ. ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ಹೊಸ ನೀತಿ ರೂಪಿಸಲು ಮಂಗಳೂರಿನಲ್ಲಿ ಎಲ್ಲಾ ಶಾಸಕರು ಮತ್ತು ಬಂಡವಾಳ ಹೂಡಿಕೆದಾರರೊಂದಿಗೆ ಸಭೆ ನಡೆಸಲಾಗಿದ್ದು, ಪ್ರವಾಸೋದ್ಯಮ ಅಭಿವೃದ್ದಿ ಮೂಲಕ ಇಲ್ಲಿನ ಯುವಕರಿಗೆ ಇಲ್ಲಿಯೇ ಉದ್ಯೋಗ ಒದಗಿಸಲಾಗುವುದು ಎಂದರು.

ವೈದ್ಯಕೀಯ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಅವರು ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸರ್ಕಾರಿ ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರೋಮಾ ಕೇರ್ ಸೆಂಟರ್ ಮತ್ತು ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣದ ಉದ್ದೇಶ ಹೊಂದಲಾಗಿದ್ದು, ಈ ಗುರಿಯನ್ನು ಪೂರ್ಣಗೊಳಿಸಲಾಗುವುದು ಎಂದರು.

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಅವರು ಮಾತನಾಡಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವಾಗ ನಾವು ಏನು ಹೇಳಿದ್ದೇವೋ ಅದನ್ನು ನಾವು ಜನರಿಗೆ ಈಡೇರಿಸುತ್ತಾ ಬಂದಿದ್ದೇವೆ. ಸರ್ಕಾರ 5 ಗ್ಯಾರಂಟಿಗಳನ್ನು ಅತ್ಯಂತ ಸಮರ್ಪಕವಾಗಿ ತಲುಪಿಸಿ ಜನಪರವಾಗಿ ಹೊರ ಹೊಮ್ಮಿದೆ. ರಾಜ್ಯದ ಕರಾವಳಿಯಯನ್ನು ಸಮಗ್ರವಾಗಿ ಅಭಿವೃಧ್ದಿಪಡಿಸಲು ಪ್ರವಾಸೋದ್ಯಮ ಅಭಿವೃಧ್ದಿ ಮೂಲಕ ಜಿಲ್ಲೆಯ ಜನರಿಗೆ ಉದ್ಯೋಗ
ನೀಡಲು, ಹೂಡಿಕೆದಾರರ ಸಭೆ ನಡೆಸಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂಸಿಎ ಅಧ್ಯಕ್ಷ ಹಾಗೂ ಕಾರವಾರ -ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಮಾತನಾಡಿ, ಈ ಹಿಂದೆ ನಾನು ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡದಿದ್ದರೆ ನನ್ನ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಹೇಳಿದ್ದೆ, ಆದರೆ, ಮುಖ್ಯಮಂತ್ರಿ ಸೂಪರ್ ಸ್ಪೆಷಾಲಿಟಿ ಈ ಘೋಷಣೆ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿ, ಈ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉದ್ದಿಮೆದಾರರಿಗೆ ವಿಶೇಷ ರಿಯಾಯತಿಗಳನ್ನು ನೀಡುವ ಮೂಲಕ ಕೈಗಾರಿಕೆಗಳನ್ನು
ಅರಂಭಿಸಲು ಅವಕಾಶ ನೀಡಿ, ಇಲ್ಲಿನ ಯುವಜನತೆಗೆ ಉದ್ಯೋಗ ಸೃಷ್ಠಿಸಬೇಕಿದೆ ಎಂದರು.

ಮುಖ್ಯಮಂತ್ರಿಗಳು ಶಾಸಕರ ನಿಧಿಗೆ ನೀಡಿದ್ದ ಮೊತ್ತದಲ್ಲಿ ರೂ.25 ಕೋಟಿಯನ್ನು ದೇವಸ್ಥಾನಗಳ ಅಭಿವೃದ್ದಿಗೆ ನೀಡಿದ್ದು, ಇಲ್ಲಿನ ಶೇಜೇಶ್ವರ ದೇವಸ್ಥಾನವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಮೂಲಕ ಕಾರವಾರಕ್ಕೆ ಭಕ್ತಾದಿಗಳನ್ನು ಹಾಗೂ ಪ್ರವಾಸಿಗರನ್ನು ಆಕರ್ಷಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಆರ್.ವಿ. ದೇಶಪಾಂಡೆ, ಶಿವರಾಮ ಹೆಬ್ಬಾರ್, ಭೀಮಣ್ಣ ನಾಯ್ಕ, ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೂಹಮ್ಮದ್ ಮೊಹಸಿನ್, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ.ಬಿ.ಎಲ್. ಸುಜಾತಾ ರಾಥೋಡ್, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿ.ಪಂ ಸಿಇಒ ದಿಲೀಪ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಕ್ರಿಮ್ಸ್ ಡೀನ್ ಡಾ.ಪೂರ್ಣಿಮಾ ಇದ್ದರು.

 

  1.  

Share. Facebook Twitter Telegram Email WhatsApp Copy Link
Karavalidailynews
  • Dribble

Related Posts

ಸ್ತ್ರೀ ವಿನೂತನ ಪರಿಕಲ್ಪನೆ ಸಂಗೀತ ಕಾರ್ಯಕ್ರಮ: ಸಂಗೀತ ಗುರುಗಳಿಂದ ಚಾಲನೆ, ಗಮನ ಸೆಳೆದ ಕೆಂಪು ದಿರಿಸು

February 22, 2026

ಉತ್ತರ ಕನ್ನಡ ಜಿಲ್ಲೆಯ ಮಂಜುಗುಣಿಯ . 34. 21 ಕೋಟಿ ವೆಚ್ಚದ ಸೇತುವೆ ಲೋಕಾರ್ಪಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ

February 22, 2026

ಲಂಚದ ಆಸೆ, ಲೋಕಾ ಬಲೆಗೆ ಬಿದ್ದ ಶಿರಹಟ್ಟಿ ಬಿಜೆಪಿ ಶಾಸಕ ಡಾ, ಚಂದ್ರು ಲಮಾಣಿ, ಇಬ್ಬರು ಆಪ್ತ ಕಾರ್ಯದರ್ಶಿಗಳ ವಿಚಾರಣೆ

February 21, 2026
Leave A Reply Cancel Reply

ALVAS
SCDDC BANK
Dharmsthal
ಮಂಗಳೂರು ಕಂಬಳ
ಕ್ರಿಸ್ಮಸ್
Recent Posts
  • ಸ್ತ್ರೀ ವಿನೂತನ ಪರಿಕಲ್ಪನೆ ಸಂಗೀತ ಕಾರ್ಯಕ್ರಮ: ಸಂಗೀತ ಗುರುಗಳಿಂದ ಚಾಲನೆ, ಗಮನ ಸೆಳೆದ ಕೆಂಪು ದಿರಿಸು
  • 450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಉದ್ಘಾಟನೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಜೆಟ್‌ನಲ್ಲಿ ಘೋಷಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ
  • ಉತ್ತರ ಕನ್ನಡ ಜಿಲ್ಲೆಯ ಮಂಜುಗುಣಿಯ . 34. 21 ಕೋಟಿ ವೆಚ್ಚದ ಸೇತುವೆ ಲೋಕಾರ್ಪಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ
  • ಲಂಚದ ಆಸೆ, ಲೋಕಾ ಬಲೆಗೆ ಬಿದ್ದ ಶಿರಹಟ್ಟಿ ಬಿಜೆಪಿ ಶಾಸಕ ಡಾ, ಚಂದ್ರು ಲಮಾಣಿ, ಇಬ್ಬರು ಆಪ್ತ ಕಾರ್ಯದರ್ಶಿಗಳ ವಿಚಾರಣೆ
  • ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಆಲ್ಫಾ ಚಿತ್ರದ ಡಾಮಿನೇಶನ್ ಹೇಮಂತ್ ಹವಾ!
INDIANNA
kmc
ಸಾಯಿ ಮೀಡಿಯಾ ನ್ಯೂಸ್ ನೆಟ್ ವರ್ಕ್
Categories
  • Asia (5)
  • Auto Shows (4)
  • Business (11)
  • Car Reviews (4)
  • Concepts (4)
  • Editor's Picks (10)
  • Ent & Arts (2)
  • Europe (5)
  • Fashion (9)
  • Film & Drama (2)
  • Finance (4)
  • Fitness (12)
  • Football (1)
  • Gadgets (1)
  • Health Science (6)
  • Home Decor (6)
  • Lifestyle (13)
  • Lifestyle (2)
  • Luxury (7)
  • Media & Culture (6)
  • News (3)
  • Photography (1)
  • Politics (22)
  • Recipes (3)
  • Science (4)
  • Sport (1)
  • Sports (9)
  • Stars (1)
  • Tech (10)
  • Technology (1)
  • Travel (11)
  • Uncategorized (117)
  • US & Canada (5)
  • Videos (2)
  • World (5)
  • ಅಪರಾಧ (719)
  • ಆರೋಗ್ಯ (238)
  • ಇ-ಪೇಪರ್ (8)
  • ಉಡುಪಿ (3,655)
  • ಎಜುಕೇಶನ್ (624)
  • ಓದುಗರ ಅಂಕಣ (33)
  • ಕಾರವಾರ (4,026)
  • ಕುಂದಾಪುರ (3,621)
  • ಕ್ರೀಡೆ (320)
  • ಚುನಾವಣೆ (507)
  • ಜಿಲ್ಲೆ (6,666)
  • ಜ್ಯೋತಿಷ್ಯ- ರಾಶಿಫಲ (281)
  • ದೇಗುಲ ದರ್ಶನ (61)
  • ದೇಶ ವಿದೇಶ (457)
  • ಪಾಡಕಾಸ್ಟ್ (12)
  • ಪುತ್ತೂರು (5,285)
  • ಮಂಗಳೂರು (5,357)
  • ರಾಜಕೀಯ (1,166)
  • ರಾಜ್ಯ (4,565)
  • ವಿಶೇಷ ವರದಿ (55)
  • ಶಿರಸಿ (3,960)
  • ಸಿನಿಮಾ (217)
Recent Post
  • ಸ್ತ್ರೀ ವಿನೂತನ ಪರಿಕಲ್ಪನೆ ಸಂಗೀತ ಕಾರ್ಯಕ್ರಮ: ಸಂಗೀತ ಗುರುಗಳಿಂದ ಚಾಲನೆ, ಗಮನ ಸೆಳೆದ ಕೆಂಪು ದಿರಿಸು
  • 450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಉದ್ಘಾಟನೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಜೆಟ್‌ನಲ್ಲಿ ಘೋಷಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ
  • ಉತ್ತರ ಕನ್ನಡ ಜಿಲ್ಲೆಯ ಮಂಜುಗುಣಿಯ . 34. 21 ಕೋಟಿ ವೆಚ್ಚದ ಸೇತುವೆ ಲೋಕಾರ್ಪಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ
  • ಲಂಚದ ಆಸೆ, ಲೋಕಾ ಬಲೆಗೆ ಬಿದ್ದ ಶಿರಹಟ್ಟಿ ಬಿಜೆಪಿ ಶಾಸಕ ಡಾ, ಚಂದ್ರು ಲಮಾಣಿ, ಇಬ್ಬರು ಆಪ್ತ ಕಾರ್ಯದರ್ಶಿಗಳ ವಿಚಾರಣೆ
Demo
Top Posts

ದ.ಕ ಜಿಲ್ಲೆಯಲ್ಲಿ ಕೊಂಚ ತಗ್ಗಿದ ಮಳೆ ಅಬ್ಬರ, ಶಾಲೆ, ಕಾಲೇಜು ಎಂದಿನಂತೆ ಪ್ರಾರಂಭ: ಡಿಸಿ ಮುಲ್ಲೈ

July 17, 20244

ಬೆಳ್ತಂಗಡಿ ವನ್ಯಜೀವಿ ವಲಯ ಪ್ರದೇಶದಲ್ಲಿ ಅಧಿಕಾರಿಗಳನ್ನು ಕಾಡಿದ ಕಾಳ್ಗಿಚ್ಚು

February 23, 20232

ಸಾನಿಧ್ಯ ಮಡಿಲಿಗೆ ವಿಶೇಷ ಶಿಕ್ಷಕಿಯರ ಥ್ರೋಬಾಲ್ ಚಾಂಪಿಯನ್‌ ಷಿಪ್ ಪಟ್ಟ

September 23, 20232

ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ನಾಲ್ವರು ನೀರುಪಾಲು, ಅವಘಡಕ್ಕೆ ಹೊಣೆ ಯಾರು?

December 11, 20240
Don't Miss
ಉಡುಪಿ

ಸ್ತ್ರೀ ವಿನೂತನ ಪರಿಕಲ್ಪನೆ ಸಂಗೀತ ಕಾರ್ಯಕ್ರಮ: ಸಂಗೀತ ಗುರುಗಳಿಂದ ಚಾಲನೆ, ಗಮನ ಸೆಳೆದ ಕೆಂಪು ದಿರಿಸು

By KaravalidailynewsFebruary 22, 20260

ಮಂಗಳೂರು: ನಗರದ ಸಂಗೀತ ಭಾರತಿ ಫೌಂಡೇಷನ್ ಆಶ್ರಯದಲ್ಲಿ ಉರ್ವ ಅಂಬೇಡ್ಕರ್ ಸಭಾಂಗಣದಲ್ಲಿ  ನಡೆದ ಸ್ತ್ರೀ ವಿಶಿಷ್ಟ ಪರಿಕಲ್ಪನೆಯ ಸಂಗೀತ ಕಾರ್ಯಕ್ರಮವನ್ನು…

450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಉದ್ಘಾಟನೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಜೆಟ್‌ನಲ್ಲಿ ಘೋಷಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ

February 22, 2026

ಉತ್ತರ ಕನ್ನಡ ಜಿಲ್ಲೆಯ ಮಂಜುಗುಣಿಯ . 34. 21 ಕೋಟಿ ವೆಚ್ಚದ ಸೇತುವೆ ಲೋಕಾರ್ಪಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ

February 22, 2026

ಲಂಚದ ಆಸೆ, ಲೋಕಾ ಬಲೆಗೆ ಬಿದ್ದ ಶಿರಹಟ್ಟಿ ಬಿಜೆಪಿ ಶಾಸಕ ಡಾ, ಚಂದ್ರು ಲಮಾಣಿ, ಇಬ್ಬರು ಆಪ್ತ ಕಾರ್ಯದರ್ಶಿಗಳ ವಿಚಾರಣೆ

February 21, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

Demo
© 2026 Karavali Daily News. Designed by WebBrahma.
  • Home
  • Politics
  • Lifestyle
  • Science
  • Buy Now

Type above and press Enter to search. Press Esc to cancel.