Close Menu
KARAVALIDAILYNEWS
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ

Subscribe to Updates

Get the latest creative news from FooBar about art, design and business.

What's Hot

ರಾಯಚೂರು ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳ ಅಗತ್ಯ ಸಿದ್ಧತೆ ಮಾಡಿಕೊಳ್ಳಿ: ಡಿಸಿ ನಿತೀಶ್

February 19, 2026

ಖರೀದಿ ಕೇಂದ್ರಗಳು ರೈತರಿಗೆ ಉಪಯುಕ್ತ ಆಗುವಂತೆ ಕಾರ್ಯನಿರ್ವಹಿಸಬೇಕು: ಡಿಸಿ ಸ್ನೇಹಲ್

February 19, 2026

ವಿಬಿ ಜಿ ರಾಮ್ ಜಿ ಕಾಯ್ದೆ ಕುರಿತು ಬಜೆಪಿಯಿಂದ ಜನಜಾಗೃತಿ ಪಾದಯಾತ್ರೆ, ಕಾಯ್ದೆ ವಿರುದ್ಧ ಅಪಪ್ರಚಾರ: ಶಾಸಕ ಕಾಮತ್

February 19, 2026
Facebook X (Twitter) Instagram
Trending
  • ರಾಯಚೂರು ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳ ಅಗತ್ಯ ಸಿದ್ಧತೆ ಮಾಡಿಕೊಳ್ಳಿ: ಡಿಸಿ ನಿತೀಶ್
  • ಖರೀದಿ ಕೇಂದ್ರಗಳು ರೈತರಿಗೆ ಉಪಯುಕ್ತ ಆಗುವಂತೆ ಕಾರ್ಯನಿರ್ವಹಿಸಬೇಕು: ಡಿಸಿ ಸ್ನೇಹಲ್
  • ವಿಬಿ ಜಿ ರಾಮ್ ಜಿ ಕಾಯ್ದೆ ಕುರಿತು ಬಜೆಪಿಯಿಂದ ಜನಜಾಗೃತಿ ಪಾದಯಾತ್ರೆ, ಕಾಯ್ದೆ ವಿರುದ್ಧ ಅಪಪ್ರಚಾರ: ಶಾಸಕ ಕಾಮತ್
  • ಕೆಇಆರ್‌ಸಿ ಸಭೆ: ದರ ಏರಿಕೆ ಪ್ರಸ್ತಾವ ಮಂಡಿಸಿದ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯ್ ಕುಮಾರ್
  • ಉ.ಕ ಜಿಲ್ಲೆಯಲ್ಲಿ ಹೊಸ ನ್ಯಾಯಬೆಲೆ ಅಂಗಡಿ ಪ್ರಾರಂಭಕ್ಕೆ ಪ್ರಸ್ತಾವ ಸಲ್ಲಿಸಿ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ
  • ದ.ಕ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ನಗುಮುಖದಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ, ಆಪ್ತ ಸಲಹೆ : ಡಿಸಿ ದರ್ಶನ್
  • ಸಿದ್ದಾಪುರ ವೃದ್ಧ ಮಹಿಳೆ ಕೊಲೆ ಪ್ರಕರಣ: ಆರೋಪಿ ದೋಷಿ ಎಂದು ನ್ಯಾಯಾಲಯ ಆದೇಶ, ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದ ಪೊಲೀಸರು
  • ಪಕ್ಷನಿಷ್ಠೆ, ಕರ್ತವ್ಯ ಶ್ರದ್ಧೆ, ಸಂಘಟನಾ ಶಕ್ತಿ, ರೈತಪರ ಕಾಳಜಿ ವಹಿಸುವೆ: ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ
Facebook X (Twitter) Instagram
KARAVALIDAILYNEWSKARAVALIDAILYNEWS
Demo
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ
KARAVALIDAILYNEWS
Home»ಜಿಲ್ಲೆ»ಉಡುಪಿ»ಕರ್ಣಾಟಕ ಬ್ಯಾಂಕ್ 102 ನೇ ಸಂಸ್ಥಾಪಕರ ದಿನ: ನೀತಿ ಸುಧಾರಕ ದೇಬಾಶೀಷ್‌ ಪಾಂಡೆ ಉಪನ್ಯಾಸ

ಉಡುಪಿ

ಕರ್ಣಾಟಕ ಬ್ಯಾಂಕ್ 102 ನೇ ಸಂಸ್ಥಾಪಕರ ದಿನ: ನೀತಿ ಸುಧಾರಕ ದೇಬಾಶೀಷ್‌ ಪಾಂಡೆ ಉಪನ್ಯಾಸ

KaravalidailynewsBy KaravalidailynewsFebruary 19, 2026No Comments0 Views
Facebook WhatsApp Twitter Email Telegram Copy Link
Share
Facebook Twitter Email WhatsApp Copy Link

 

ಮಂಗಳೂರು: ದೇಶದ ವಿಕಸಿತ್‌ ಭಾರತ್‌ ಸಾಕಾರಕ್ಕೆ ಬ್ಯಾಂಕ್‌ಗಳ ಪಾತ್ರ ಮಹತ್ವದ್ದಾಗಿದ್ದು, ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕ್‌ಗಳು ಪ್ರಮುಖ ಪಾತ್ರ ವಹಿಸಬೇಕಿದೆ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಹಾಗೂ ನೀತಿ ಸುಧಾರಕ ದೇಬಾಶೀಷ್‌ ಪಾಂಡೆ ಅವರು ಹೇಳಿದರು.

ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬ್ಯಾಂಕ್ ಸಂಸ್ಥಾಪಕರ ದಿನದ ಕಾರ್ಯಕ್ರಮದಲ್ಲಿ ವಿಕಸಿತ್‌ ಭಾರತ್‌- 2047, ಹಣಕಾಸು ಸೇವೆಗಳ ಪಾತ್ರದ ಕುರಿತು ಅವರು ಉಪನ್ಯಾಸ ನೀಡಿ ಮಾತನಾಡಿದರು.

ದೇಶವು ವಿಶ್ವದ 4 ನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ದೇಶ ಆಗಿದೆ, ಈ ದೇಶ ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಆಗಲಿದೆ ಎಂದು ಹಿಂದೆ ನಾವು ಊಹಿಸಿರಲಿಲ್ಲ. ಆದರೆ, ಈ ಸಾಧನೆ ಆಗಿದೆ. ನಾವು ವಿಕಸಿತ್‌ ಭಾರತ್‌ ಎಂಬ ಮಹಾ ದೃಷ್ಟಿಯತ್ತ ಸಾಗುತ್ತಿದ್ದೇವೆ. ಈ ಪರಿಕಲ್ಪನೆ ಸಾಕಾರ ಮಾಡುವುದು ಸಂಘ ಸಂಸ್ಥೆಗಳು, ಉದ್ಯಮ ಕ್ಷೇತ್ರ, ಅಧಿಕಾರಿಗಳು ಮಾತ್ರವಲ್ಲದೆ, ಪ್ರತಿಯೊಬ್ಬ ನಾಗರಿಕರು ಸರಕಾರದ ಜತೆಗೆ ಕೈ ಜೋಡಿಸಬೇಕು ಎಂದರು.

ಇದಕ್ಕೆ ದೀರ್ಘಕಾಲಿಕ, ಉನ್ನತ ವೇಗದ ಕಾರ್ಯೋನ್ಮುಖತೆಯೊಂದಿಗೆ ಉತ್ಪಾದಕತೆ, ಬಂಡವಾಳದ ದಕ್ಷತೆ ಮತ್ತು ಕಾರ್ಯಗತ ಸಾಮರ್ಥ್ಯ ಹೆಚ್ಚಳ, ಆರ್ಥಿಕ ಸ್ಥಿರತೆ, ಶಕ್ತಿಶಾಲಿಯಾದ ಹಣಕಾಸು ವ್ಯವಸ್ಥೆ ಮತ್ತು ಜಾಗತಿಕ ಆಘಾತಗಳನ್ನು ಎದುರಿಸುವ ಸಾಮರ್ಥ್ಯ ಬೇಕಾಗುತ್ತದೆ. ಈ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದರು.

ಬ್ಯಾಂಕ್‌ಗಳು ಗುರಿ ಕೇವಲ ಲಾಭ ಗಳಿಕೆಯಲ್ಲ, ತನ್ನ ಮೂಲ ಧ್ಯೇಯ ಸಾಮಾಜಿಕ ಪರಿವರ್ತನೆ ಕೆಲಸ ಆಗಬೇಕಿವೆ. ದೇಶದ ಬೆಳವಣಿಗೆ ಮತ್ತು ಆರ್ಥಿಕ ಸ್ಥಿರತೆ ಆಧಾರ ಸ್ತಂಭಗಳಾದ ಈ ಹಣಕಾಸು ಸಂಸ್ಥೆಗಳು ಈ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ. ಏಕರೂಪದ ಕಾರ್ಯ ವಿಧಾನವನ್ನು ಪರಿವರ್ತಿಸಿ, ಹಣಕಾಸಿನ ವಿವಿಧ ಮಾದರಿಗಳ ಕಾರ್ಯಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು ಎಂದರು.

ಡಿಜಿಟಲ್ ಯುಗದಲ್ಲಿ ಚೆಕ್‌ಬುಕ್ ಇತಿಹಾಸ ಪುಟ ಸೇರಿದೆ. ಟೆಲಿಫೋನ್ ಡಯಲ್ ಮಾಡುವ ಕಾಲದಿಂದ ಇಂದಿನ ಮೊಬೈಲ್ ಮತ್ತು ವಿಡಿಯೊ ಸಂವಹನದ ಯುಗದವರೆಗೆ ತಲೆಮಾರುಗಳ ಪರಿವರ್ತನೆ ಆಗಿದೆ, ಕೃತಕ ಬುದ್ಧಿ ಮತ್ತೆ ಬಾಗಿಲು ತಟ್ಟುತ್ತಿದೆ. ಇಂತಹ ತಂತ್ರಜ್ಞಾನ ಹೇಗೆ ಬಳಕೆ ಮಾಡಬೇಕು ಎಂಬುದು ನಮ್ಮ ವಿವೇಚನೆ ಮೇಲಿದೆ. ಈ ಕಾಲಘಟ್ಟದಲ್ಲಿ ತಂತ್ರಜ್ಞಾನ ಅನಿವಾರ್ಯ; ಅದಕ್ಕೆ ಹೊಂದಿ ಕೊಳ್ಳ‌ ಬೇಕಾಗಿದೆ ಎಂದು ಅವರು ಹೇಳಿದರು.

ಕರ್ಣಾಟಕ ಬ್ಯಾಂಕ್‌ 102 ವರ್ಷಗಳ ಪಯಣ, ಮೈಲುಗಲ್ಲುಗಳ ಕಾಲಘಟ್ಟದಲ್ಲಿ ನಡೆದ ಬದಲಾವ ಪ್ರೇರಣಾದಾಯಕ. ಸಂಸ್ಥಾಪಕರ ದಿನವನ್ನು ನಾನು ಕೇವಲ ಒಂದು ಆಚರಣೆ ಮೈಲುಗಲ್ಲು ಎಂದು ನೋಡುವುದಲ್ಲ. ಇದು ಸಂಸ್ಥೆಯ ಬಗ್ಗೆ ಒಂದು ಕ್ಷಣಕಾಲ ನಿಂತು ಚಿಂತನೆ ಮಾಡುವ ದಿನ. ಈ ಮೂಲಕ ಒಂದು ಪರಂಪರೆ ಗೌರವಿಸುತ್ತಿದ್ದೀರಿ. ಕರ್ಣಾಟಕ ಬ್ಯಾಂಕ್‌ನ ಮ್ಯೂಸಿಯಂಗೆ ಭೇಟಿ ನೀಡಿದಾಗ ಸ್ಥಾಪಕ ಮಹನೀಯರ ಜೀವನಯಾನ, ಅವರ ಮೌಲ್ಯ ವ್ಯವಸ್ಥೆ ಮತ್ತು ಬ್ಯಾಂಕ್ ಆರಂಭದಿಂದ ಇಂದಿನ ಮಹತ್ತರ ಸಾಧನೆವರೆಗೆ ನಡೆದ ಬೆಳವಣಿಗೆ ನೋಡುವ ಅವಕಾಶ ದೊರೆಯಿತು ಎಂದು ಸ್ಮರಿಸಿದರು.

ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪಿ. ಪ್ರದೀಪ್‌ ಕುಮಾರ್‌ ಮಾತನಾಡಿ, ವಿಕಸಿತ್‌ ಭಾರತ್‌ ದೃಷ್ಟಿಕೋನವು ಬ್ಯಾಂಕ್‌ಗಳಿಗೆ ಅನೇಕ ಅವಕಾಶಗಳನ್ನು ಸೃಷ್ಟಿಸಲಿದೆ. ಈ ಬೆಳವಣಿಗೆಯಲ್ಲಿ ಕೈಜೋಡಿಸುವ ನಿಟ್ಟಿನಲ್ಲಿ ಕರ್ಣಾಟಕ ಬ್ಯಾಂಕ್‌ ಬದ್ಧತೆಯಿಂದ ಕಾರ್ಯ ನಿರ್ವಹಿಸಲಿದೆ. ಬ್ಯಾಂಕಿನ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವ ಜತೆಗೆ ವಿಕಸಿತ್‌ ಭಾರತ್‌ ಕಾರ್ಯ ಸಾಧನೆಯಲ್ಲಿ ಸಕ್ರಿಯ ಪಾತ್ರ ವಹಿಸಲಿದ್ದೇವೆ ಎಂದರು.

ಬ್ಯಾಂಕ್‌ನ ಎಂಡಿ ಮತ್ತು ಸಿಇಒ ರಾಘವೇಂದ್ರ ಎಸ್‌. ಭಟ್‌ ಅವರು ಮಾತನಾಡಿ, ಕರ್ಣಾಟಕ ಬ್ಯಾಂಕ್‌ ಭವಿಷ್ಯದ ಲ್ಲಿ ಇನ್ನಷ್ಟು ತಂತ್ರಜ್ಞಾನದ ಅಳವಡಿಕೆಯೊಂದಿಗೆ ಸಾಗಲಿದೆ. ಬ್ಯಾಂಕಿನ ಆರ್ಥಿಕ ಸ್ಥಿರತೆ ಮತ್ತು ಅಭಿವೃದ್ಧಿಯಲ್ಲಿ ಉನ್ನತ ಸ್ಥಾನಕ್ಕೇರಲು ಬ್ಯಾಂಕ್‌ ಸಂಸ್ಥಾಪಕರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆ ಕಾರಣ ಎಂದು ಹೇಳಿದರು.

ಕರ್ಣಾಟಕ ಬ್ಯಾಂಕ್‌ ಸಂಸ್ಥಾಪಕರ ಭಾವಚಿತ್ರಗಳಿಗೆ ಗೌರವ ಸಲ್ಲಿಸಿ, ಸಮಾರಂಭದಲ್ಲಿ ದೇಬಾಶೀಷ್‌ ಪಾಂಡ ಅವರನ್ನು ಸನ್ಮಾನಿಸಲಾಯಿತು. ನಾರಿ ತರಂಗಿಣಿ ಸಂಗೀತ ಕಚೇರಿ ನಡೆಯಿತು.

  1.  

Share. Facebook Twitter Telegram Email WhatsApp Copy Link
Karavalidailynews
  • Dribble

Related Posts

ರಾಯಚೂರು ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳ ಅಗತ್ಯ ಸಿದ್ಧತೆ ಮಾಡಿಕೊಳ್ಳಿ: ಡಿಸಿ ನಿತೀಶ್

February 19, 2026

ಖರೀದಿ ಕೇಂದ್ರಗಳು ರೈತರಿಗೆ ಉಪಯುಕ್ತ ಆಗುವಂತೆ ಕಾರ್ಯನಿರ್ವಹಿಸಬೇಕು: ಡಿಸಿ ಸ್ನೇಹಲ್

February 19, 2026

ವಿಬಿ ಜಿ ರಾಮ್ ಜಿ ಕಾಯ್ದೆ ಕುರಿತು ಬಜೆಪಿಯಿಂದ ಜನಜಾಗೃತಿ ಪಾದಯಾತ್ರೆ, ಕಾಯ್ದೆ ವಿರುದ್ಧ ಅಪಪ್ರಚಾರ: ಶಾಸಕ ಕಾಮತ್

February 19, 2026
Leave A Reply Cancel Reply

ALVAS
SCDDC BANK
Dharmsthal
ಮಂಗಳೂರು ಕಂಬಳ
ಕ್ರಿಸ್ಮಸ್
Recent Posts
  • ರಾಯಚೂರು ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳ ಅಗತ್ಯ ಸಿದ್ಧತೆ ಮಾಡಿಕೊಳ್ಳಿ: ಡಿಸಿ ನಿತೀಶ್
  • ಖರೀದಿ ಕೇಂದ್ರಗಳು ರೈತರಿಗೆ ಉಪಯುಕ್ತ ಆಗುವಂತೆ ಕಾರ್ಯನಿರ್ವಹಿಸಬೇಕು: ಡಿಸಿ ಸ್ನೇಹಲ್
  • ವಿಬಿ ಜಿ ರಾಮ್ ಜಿ ಕಾಯ್ದೆ ಕುರಿತು ಬಜೆಪಿಯಿಂದ ಜನಜಾಗೃತಿ ಪಾದಯಾತ್ರೆ, ಕಾಯ್ದೆ ವಿರುದ್ಧ ಅಪಪ್ರಚಾರ: ಶಾಸಕ ಕಾಮತ್
  • ಕೆಇಆರ್‌ಸಿ ಸಭೆ: ದರ ಏರಿಕೆ ಪ್ರಸ್ತಾವ ಮಂಡಿಸಿದ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯ್ ಕುಮಾರ್
  • ಉ.ಕ ಜಿಲ್ಲೆಯಲ್ಲಿ ಹೊಸ ನ್ಯಾಯಬೆಲೆ ಅಂಗಡಿ ಪ್ರಾರಂಭಕ್ಕೆ ಪ್ರಸ್ತಾವ ಸಲ್ಲಿಸಿ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ
INDIANNA
kmc
ಸಾಯಿ ಮೀಡಿಯಾ ನ್ಯೂಸ್ ನೆಟ್ ವರ್ಕ್
Categories
  • Asia (5)
  • Auto Shows (4)
  • Business (11)
  • Car Reviews (4)
  • Concepts (4)
  • Editor's Picks (10)
  • Ent & Arts (2)
  • Europe (5)
  • Fashion (9)
  • Film & Drama (2)
  • Finance (4)
  • Fitness (12)
  • Football (1)
  • Gadgets (1)
  • Health Science (6)
  • Home Decor (6)
  • Lifestyle (2)
  • Lifestyle (13)
  • Luxury (7)
  • Media & Culture (6)
  • News (3)
  • Photography (1)
  • Politics (22)
  • Recipes (3)
  • Science (4)
  • Sport (1)
  • Sports (9)
  • Stars (1)
  • Tech (10)
  • Technology (1)
  • Travel (11)
  • Uncategorized (117)
  • US & Canada (5)
  • Videos (2)
  • World (5)
  • ಅಪರಾಧ (718)
  • ಆರೋಗ್ಯ (238)
  • ಇ-ಪೇಪರ್ (8)
  • ಉಡುಪಿ (3,649)
  • ಎಜುಕೇಶನ್ (623)
  • ಓದುಗರ ಅಂಕಣ (33)
  • ಕಾರವಾರ (4,020)
  • ಕುಂದಾಪುರ (3,615)
  • ಕ್ರೀಡೆ (320)
  • ಚುನಾವಣೆ (507)
  • ಜಿಲ್ಲೆ (6,659)
  • ಜ್ಯೋತಿಷ್ಯ- ರಾಶಿಫಲ (281)
  • ದೇಗುಲ ದರ್ಶನ (61)
  • ದೇಶ ವಿದೇಶ (457)
  • ಪಾಡಕಾಸ್ಟ್ (12)
  • ಪುತ್ತೂರು (5,280)
  • ಮಂಗಳೂರು (5,352)
  • ರಾಜಕೀಯ (1,165)
  • ರಾಜ್ಯ (4,556)
  • ವಿಶೇಷ ವರದಿ (55)
  • ಶಿರಸಿ (3,954)
  • ಸಿನಿಮಾ (216)
Recent Post
  • ರಾಯಚೂರು ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳ ಅಗತ್ಯ ಸಿದ್ಧತೆ ಮಾಡಿಕೊಳ್ಳಿ: ಡಿಸಿ ನಿತೀಶ್
  • ಖರೀದಿ ಕೇಂದ್ರಗಳು ರೈತರಿಗೆ ಉಪಯುಕ್ತ ಆಗುವಂತೆ ಕಾರ್ಯನಿರ್ವಹಿಸಬೇಕು: ಡಿಸಿ ಸ್ನೇಹಲ್
  • ವಿಬಿ ಜಿ ರಾಮ್ ಜಿ ಕಾಯ್ದೆ ಕುರಿತು ಬಜೆಪಿಯಿಂದ ಜನಜಾಗೃತಿ ಪಾದಯಾತ್ರೆ, ಕಾಯ್ದೆ ವಿರುದ್ಧ ಅಪಪ್ರಚಾರ: ಶಾಸಕ ಕಾಮತ್
  • ಕೆಇಆರ್‌ಸಿ ಸಭೆ: ದರ ಏರಿಕೆ ಪ್ರಸ್ತಾವ ಮಂಡಿಸಿದ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯ್ ಕುಮಾರ್
Demo
Top Posts

ದ.ಕ ಜಿಲ್ಲೆಯಲ್ಲಿ ಕೊಂಚ ತಗ್ಗಿದ ಮಳೆ ಅಬ್ಬರ, ಶಾಲೆ, ಕಾಲೇಜು ಎಂದಿನಂತೆ ಪ್ರಾರಂಭ: ಡಿಸಿ ಮುಲ್ಲೈ

July 17, 20244

ಬೆಳ್ತಂಗಡಿ ವನ್ಯಜೀವಿ ವಲಯ ಪ್ರದೇಶದಲ್ಲಿ ಅಧಿಕಾರಿಗಳನ್ನು ಕಾಡಿದ ಕಾಳ್ಗಿಚ್ಚು

February 23, 20232

ಸಾನಿಧ್ಯ ಮಡಿಲಿಗೆ ವಿಶೇಷ ಶಿಕ್ಷಕಿಯರ ಥ್ರೋಬಾಲ್ ಚಾಂಪಿಯನ್‌ ಷಿಪ್ ಪಟ್ಟ

September 23, 20232

ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ನಾಲ್ವರು ನೀರುಪಾಲು, ಅವಘಡಕ್ಕೆ ಹೊಣೆ ಯಾರು?

December 11, 20240
Don't Miss
ಎಜುಕೇಶನ್

ರಾಯಚೂರು ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳ ಅಗತ್ಯ ಸಿದ್ಧತೆ ಮಾಡಿಕೊಳ್ಳಿ: ಡಿಸಿ ನಿತೀಶ್

By KaravalidailynewsFebruary 19, 20263

ರಾಯಚೂರು: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಿಸಿ, ರಾಜ್ಯದಲ್ಲಿ ರಾಯಚೂರು ಜಿಲ್ಲೆ ಉತ್ತಮ ಸ್ಥಾನಕ್ಕೆ ಬರುವ ಹಾಗೇ ಅಗತ್ಯ ಸಿದ್ಧತೆ…

ಖರೀದಿ ಕೇಂದ್ರಗಳು ರೈತರಿಗೆ ಉಪಯುಕ್ತ ಆಗುವಂತೆ ಕಾರ್ಯನಿರ್ವಹಿಸಬೇಕು: ಡಿಸಿ ಸ್ನೇಹಲ್

February 19, 2026

ವಿಬಿ ಜಿ ರಾಮ್ ಜಿ ಕಾಯ್ದೆ ಕುರಿತು ಬಜೆಪಿಯಿಂದ ಜನಜಾಗೃತಿ ಪಾದಯಾತ್ರೆ, ಕಾಯ್ದೆ ವಿರುದ್ಧ ಅಪಪ್ರಚಾರ: ಶಾಸಕ ಕಾಮತ್

February 19, 2026

ಕೆಇಆರ್‌ಸಿ ಸಭೆ: ದರ ಏರಿಕೆ ಪ್ರಸ್ತಾವ ಮಂಡಿಸಿದ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯ್ ಕುಮಾರ್

February 19, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

Demo
© 2026 Karavali Daily News. Designed by WebBrahma.
  • Home
  • Politics
  • Lifestyle
  • Science
  • Buy Now

Type above and press Enter to search. Press Esc to cancel.