ಮಂಗಳೂರು: ವಿದ್ವಾನ್ ಡಾ. ಪಾವಗಡ ಪ್ರಕಾಶರಾಯ ಅವರಿಂದ ಶ್ರೀಮದ್ಭಗವದ್ಗೀತಾ ಪ್ರವಚನ ಮಾಲೆ 10 ಅನ್ನು ಮಂಗಳೂರಿನ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಭಾಂಗಣ ಇದೇ 22 ರಿಂದ ಮಾರ್ಚ್ 3 ನೇ ಭಾನುವಾರದ ತನಕ 8 ದಿನಗಳ ಕಾಲ ಪ್ರತಿದಿನ ಸಂಜೆ ಗಂಟೆ 6 ರಿಂದ 7. 30 ರ ತನಕ ನಡೆಸಲು ನಿರ್ಧರಿಸಿದೆ ಎಂದು ಟ್ರಸ್ಟ್ ಅಧ್ಯಕ್ಷ ವೈ. ರಾಘವೇಂದ್ರ ರಾವ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶಾರದಾ ಸೇವಾ ಟ್ರಸ್ಟ್ , ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿ, ಶಾರದಾ ಮಾತೃ ಮಂಡಳಿ ಸುರತ್ಕಲ್, ಅವರು ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳು, ಕರ್ಣಾಟಕ ಬ್ಯಾಂಕ್, ಮಂಗಳೂರು, ಕಲ್ಕೂರ ಪ್ರತಿಷ್ಠಾನ, ಕೃಷ್ಣ ಗೀತಾ ಜ್ಞಾನ ಸಮಿತಿ ಕದ್ರಿ, ಸಾಹಿತ್ಯ ಕೇಂದ್ರ, ಮಂಗಳೂರು ಧರ್ಮದರ್ಶಿ ಹರಿಕೃಷ್ಣ ಪುನರೂರು, ಎಸ್.ಎಲ್. ಶೇಟ್ ಜುವೆಲ್ಲರ್ಸ್ ಮತ್ತು ಡೈಮಂಡ್ ಹೌಸ್, ಬಲ್ಮಠ ಡಯಾಗೋಸ್ಟಿಕ್ ಅಂಡ್ ರಿಸರ್ಚ್ ಸೆಂಟರ್, ಬಲ್ಮಠ ಸ್ಕ್ಯಾನ್ ಸೆಂಟರ್, ಮಂಗಳೂರು, ಭಾರಧ್ವಾಜ ಫೌಂಡೇಶನ್ ಮಂಗಳೂರು ಆಶ್ರಯದಲ್ಲಿ ನಡೆಯಲಿದೆ ಎಂದರು.

ಫೆ. 22 ರಂದು ಸಂಜೆ 5ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಅಧ್ಯಕ್ಷತೆಯನ್ನು ಪ್ರದೀಪ್ ಕುಮಾರ್ ಕಲ್ಕೂರ, ಅವರು ವಹಿಸಲಿದ್ದಾರೆ. ಪ್ರವಚನ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ಣಾಟಕ ಬ್ಯಾಂಕ್ ನ ಆಡಳಿತ ನಿರ್ದೇಶಕ ರಾಘವೇಂದ್ರ ಎಸ್. ಭಟ್, ಅವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಎಸ್.ಎಲ್. ಶೇಟ್ ಡೈಮಂಡ್ ಜ್ಯುವೆಲ್ಲರ್ ನ ಮಾಲೀಕ ಪ್ರಶಾಂತ್ ಶೇಟ್ , ಕೆ. ಶ್ರೀಪತಿ ಭಟ್, ಸುಧಾಕರ ರಾವ್ ಪೇಜಾವರ ಭಾಗವಹಿಸಲಿದ್ದಾರೆ ಎಂದರು.

23 ರಿಂದ 28 ರವರೆಗೆ ಪ್ರತಿದಿನ ಸಂಜೆ 5. 45 ಕ್ಕೆ ಗಣ್ಯ ವ್ಯಕ್ತಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಿ, ದೀಪ ಬೆಳಗಿಸಿ ಶುಭ ಹಾರೈಸಲಿದ್ದಾರೆ. ಮಾರ್ಚ್ 1 ರಂದು ಸಮಾರೋಪ ನಡೆಯಲಿದೆ. ರತ್ನಾಕರ ಕುಳಾಯಿ ಅವರು ಅಧ್ಯಕ್ಷತೆ ವಹಿಸಲಿದ್ದು, ಸುಗುಣ ಎಂ. ರಾಘವೇಂದ್ರ ಭಟ್ ಹಾಗೂ ಎಂ. ಎಂ. ಪ್ರಭು ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಪ್ರದೀಪ್ ಕುಮಾರ್ ಕಲ್ಕೂರ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇದ್ದರು.



