ಮಂಗಳೂರು: ಜಾನಪದದ ಜೋಗುಳ, ಸ್ವಾತಂತ್ರ್ಯ ಹೋರಾಟದ ಪ್ರೇರಣೆ, ಹಾಗೂ ಇನ್ನಿತರ ಸಾಮಾಜಿಕ ಭದ್ದತೆಯ ವಿವಿಧ ವಿಷಯಗಳ ಜೊತೆಗಿನ ಕವಿ ಅನುಭವದ ಅಂಶಗಳನ್ನು ಹೊತ್ತುಕೊಂಡು ಕವಿತೆಗಳು ರೂಪುಗೊಳ್ಳುತ್ತವೆ ಎಂದು ರೇಮಂಡ್ ಡಿಕೂನಾ ತಾಕೊಡೆ ಹೇಳಿದರು.

ಸೋಮೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಆಯ್ದ ಹಿರಿಯ ಕವಿಗಳ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೊದಲಿಗೆ ಅರ್ಚಕ ಶ್ರೀಶ ಅವರು ದೀಪ ಬೆಳಗಿಸಿದರು. ಸೋಮೇಶ್ವರ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ನಾಯ್ಗರು ಸಮಾಜದ ಮುಖಂಡರಾದ ಹರಿಶ್ಚಂದ್ರ ಗಟ್ಟಿ ವೇದಿಕೆಯಲ್ಲಿ ಇದ್ದರು.
ಮೊದಲಿಗೆ ಕವಿಗೋಷ್ಟಿ ಸಂಯೋಜಕ ಆದ ಎಂ ಎಸ್ ವೆಂಕಟೇಶ ಗಟ್ಟಿ ಸ್ವಾಗತಿಸಿದರು. ಕವಿಗೋಷ್ಟಿಯ ಚಾಲನಾ ಕವಿತೆ ಗಝಲ್ ಓದಿ ಡಾ ಸುರೇಶ್ ನೆಗಳಗುಳಿ ಮಾಡಿದರು.
ಕವಿಗಳಾದ ವಿಜಯಲಕ್ಷ್ಮಿ ಕಟೀಲ್,ಅನಾರ್ಕಲಿ ಸಲಿಂ,ಸುಮಂಗಲ ದಿನೇಶ್, ಗಣೇಶ್ ಪ್ರಸಾದ್ ಜಿ,ಹರಿ ಪ್ರಸಾದ್ ಶೆಟ್ಟಿ ಗಾರ್, ವೆಂಕಟೇಶ ಗಟ್ಟಿ, ರಶ್ಮಿ ಸನಿಲ್, ರೇಮಂಡ್ ಡಿಕೂನಾ ತಾಕೊಡೆ ಕವಿಗಳು ಸಾಧರ ಪಡಿಸಿದರು.
ಮೊದಲಿಗೆ ಸಂಯೋಜಕ ಎಂಎಸ್ ವೆಂಕಟೇಶ ಗಟ್ಟಿ ಸ್ವಾಗತಿಸಿದರು, ರಶ್ಮಿ ಸನಿಲ್ ನಿರೂಪಿಸಿ, ವಂದಿಸಿದರು.



