ಮಂಗಳೂರು: ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆಯ ಕೋಶ ಮತ್ತು ವಾಣಿಜ್ಯ ಹಾಗೂ ನಿರ್ವಹಣಾ ವಿಭಾಗವು ಫೋರಮ್ ಆಫ್ ಬಿಸಿನೆಸ್ ಮ್ಯಾನೇಜ್ ಮೆಂಟ್ ಟೀಚರ್ಸ್ ಸಹಯೋಗದಲ್ಲಿ ಬಿ.ಬಿ.ಎ 4 ನೇ ಸೆಮಿಸ್ಟರ್ ಪಠ್ಯಕ್ರಮದ ಕುರಿತ ಕಾರ್ಯಾಗಾರವನ್ನು ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಆಯೋಜನೆ ಮಾಡಲಾಗಿತ್ತು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿವಿ ಪ್ರಭಾರ ಕುಲಸಚಿವ ಡಾ. ಗಣೇಶ್ ಸಂಜೀವ್ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯಕ್ರಮ ಉದ್ಯಮದ ಅಗತ್ಯತೆಗಳಿಗೆ ಪೂರಕ ಆಗಿರಬೇಕು. ಶೈಕ್ಷಣಿಕ ಸಹಯೋಗ ಮತ್ತು ನಿರಂತರ ಕಲಿಕೆಯಿಂದ ಮಾತ್ರ ಗುಣಮಟ್ಟದ ಶಿಕ್ಷಣ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಪಿ ಎ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸರ್ಫರಾಜ್ ಜೆ. ಹಾಸಿಂ ಅವರು ಮಾತನಾಡಿ, ಶಿಕ್ಷಕರ ಜ್ಞಾನಾರ್ಜನೆಗೆ ಇಂತಹ ಕಾರ್ಯಾಗಾರಗಳು ದಾರಿದೀಪ ಎಂದರು. ಅಧ್ಯಕ್ಷ ಡಾ. ಚಂದ್ರಶೇಖರ ಕೆ. ಅವರು ಪಠ್ಯಕ್ರಮದ ಹೊಸ ಬದಲಾವಣೆಗಳ ಕುರಿತು ಪೀಠಿಕೆ ನೀಡಿದರು. ಕಾರ್ಯದರ್ಶಿ ಪ್ರೊ. ನಂದಕಿಶೋರ್ ಕೆ., ಪಿ.ಎ ಪ್ರಥಮ ದರ್ಜೆ ಕಾಲೇಜಿನ ಸಂಯೋಜಕಿ ವಾಣಿಶ್ರೀ ವೈ, ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಶಿಜಿನ್ ಇದ್ದರು.
ವ್ಯವಸ್ಥಾಪನಾ ವಿಭಾಗದ ಮುಖ್ಯಸ್ಥೆ ದೀಪ್ತಿ ಉದ್ಯಾವರ್ ಸ್ವಾಗತಿಸಿದರು. ವಿವಿಧ ಕಾಲೇಜುಗಳ ಅಧ್ಯಾಪಕರು ಭಾಗವಹಿಸಿ, ಪಠ್ಯಕ್ರಮದ ಬಗ್ಗೆ ಚರ್ಚಿಸಿದರು. ಸಂಪನ್ಮೂಲ ವ್ಯಕ್ತಿಗಳಿಗೆ ಮತ್ತು ಭಾಗವಹಿಸಿದ ಪ್ರತಿನಿಧಿಗಳಿಗೆ ಪ್ರಮಾಣ ಪತ್ರ ವಿತರಿಸುವ ಮೂಲಕ ಕಾರ್ಯಕ್ರಮ ಸಂಪನ್ನ ಆಯಿತು.



