ಮಂಗಳೂರು: ಮಂಗಳೂರು ಲೋಕಾಯುಕ್ತ ಎಸ್‍ಪಿ ಆಗಿ ಬಿ.ಪಿ. ದಿನೇಶ್ ಕುಮಾರ್ ಅವರನ್ನು ಸರಕಾರ ನೇಮಕ ಆದೇಶ ಮಾಡಿದ್ದು, ಅವರು ಅಧಿಕಾರ ಸ್ವೀಕರಿಸಿದ್ದಾರೆ.

ದಿನೇಶ್ ಕುಮಾರ್ ಅವರು ಈ ಹಿಂದೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿ ಅಪರಾಧ ಹಾಗೂ ಸಂಚಾರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಅವರು ವರ್ಗಾವಣೆ ಆಗಿ ಕೊಡುಗು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ ವರ್ಗಾವಣೆ ಆಗಿದ್ದರು. ಇದೀಗ ಬಡ್ತಿ ಹೊಂದಿದ್ದು ಮಂಗಳೂರು ಲೋಕಾಯುಕ್ತಎಸ್ಪಿ ಆಗಿ ನೇಮಕ ಆಗಿದ್ದಾರೆ.
ಮಡಿಕೇರಿಯಲ್ಲಿ ಡಿವೈಎಸ್ಪಿ ಆಗಿದ್ದ ದಿನೇಶ್ ಕುಮಾರ್ ಹೆಚ್ಚುವರಿ ಎಸ್ಪಿ ದರ್ಜೆಗೆ ಬಡ್ತಿ ಪಡೆದು ಮಂಗಳೂರು ಡಿಸಿಪಿ ಆಗಿ ನೇಮಕಗೊಂಡಿದ್ದರು. ಕುಂದಾಪುರದಲ್ಲಿಯೂ ಡಿವೈಎಸ್ಪಿ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.



