
ಬೆಂಗಳೂರು: ಗಿಲ್ಲಿ ಇದೀಗ ದೊಡ್ಮನೆ ದೊರೆ ಆಗಿ ಹೊರಹೊಮ್ಮಿದ್ದಾರೆ. ಇಡೀ ರಾಜ್ಯವೇ ಮೆಚ್ಚುವ ಮನೆಮಗನಾಗಿ ಮಿಂಚಿದ್ದು, ಗ್ಯ್ರಾಂಡ್ ಫಿನಾಲೆಯಲ್ಲಿ ಮೊದಲಿಗರಾಗಿ ಹೊರಹೊಮ್ಮಿದ್ದು ಟ್ರೋಪಿಗೆ ಮುತ್ತಿಟ್ಟಿದ್ದಾರೆ. ಎಲ್ಲ ಕಡೆಗೂ ಗಿಲ್ಲಿ, ಗಿಲ್ಲಿ ಎಂಬ ಅಬ್ಬರದ ಮಾತು ಕೇಳಿ ಬರ್ತಿದೆ. ಗಿಲ್ಲಿಗೆ ಗೆಲುವಿಗೆ ಇಡೀ ಕರುನಾಡು ಸಂಭ್ರಮ ಪಟ್ಟಿದೆ.

ಬಿಗ್‌ಬಾಸ್ ಕನ್ನಡ ಸೀಸನ್ 12 ಆರಂಭವಾದಾಗಿನಿಂದಲೂ ವಿನ್ನರ್ ಆಗೋದು ಗಿಲ್ಲಿ ನಟ ಎಂಬ ಮಾತು ಕೇಳಿ ಬರುತ್ತಲೇ ಇತ್ತು. ಗಲ್ಲಿ ಗಲ್ಲಿಯಲ್ಲಿ ಗಿಲ್ಲಿ ನಟನ ಅಭಿಮಾನಿಹಗಳ ಪಡೆ ಜೋರಾಗಿತ್ತು. ಇದೀಗ ಗಿಲ್ಲಿ ಗೆದ್ದಿದ್ದಾರೆ. ಈ ಮೂಲಕ ವ್ಯಕ್ತಿತ್ವದ ಆಟದಲ್ಲಿ ಗೆದ್ದಿರುವ ಗಿಲ್ಲಿಗೆ ಕೋಟಿ ಕೋಟಿ ಲೆಕ್ಕದಲ್ಲಿ ಓಟಿಂಗ ಮಾಡಿದ್ದಾರೆ.
ಶುರುವಿನಿಂದಲೂ ಒನ್ ಸೈಡೆಡ್ ಆಗಿದ್ದ ಬಿಗ್‌ಬಾಸ್‌ನಲ್ಲಿ ಗಿಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಗಿಲ್ಲಿ ನಟನ ಕಾಮಿಡಿ ಟೈಮಿಂಗ್, ಸಂದರ್ಭೋಚಿತ ಹಾಸ್ಯದ ಪಂಚಿಂಗ್ ಮೂಲಕ ಸಿಕ್ಕಾಪಟ್ಟೆ ವರ್ಕೌಟ್ ಆಗಿತ್ತು. ತಮ್ಮ ಕಾಮಿಡಿಯಲ್ಲಿ ಮಿಂಚುವ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದಾರೆ. ಡಬಲ್ ಮೀನಿಂಗ್ ಅಥವಾ ಅಶ್ಲೀಲತೆಯನ್ನ ಸೋಕಿಸಲೂ ಇಲ್ಲ. ಇಡೀ ಫ್ಯಾಮಿಲಿ ಕೂತು. ಎಲ್ಲರೂ ಹೊಟ್ಟೆ ತುಂಬಾ ನಗುವಂತೆ ಮಾಡಿದವರು ಗಿಲ್ಲಿ ನಟ. ಇದೇ ಕಾರಣಕ್ಕೆ `ಗಿಲ್ಲಿ ಗೆಲ್ಲಬೇಕು’ ಅಂತ ಬಹುತೇಕರು ಬಯಸಿದ್ದರು. ವೀಕ್ಷಕರು ಅಂದುಕೊಂಡಂತೆ ಗಿಲ್ಲಿ ನಟ ಗೆಲುವಿನ ನಗೆ ಬೀರಿದ್ದಾರೆ. ನಿರೀಕ್ಷೆಯಂತೆ ಗಿಲ್ಲಿ ಬಿಗ್‌ಬಾಸ್ ವಿನ್ನರ್ ಆಗ್ತಿದ್ದಂತೆ ಇಡೀ ಕರುನಾಡೇ ಸಂಭ್ರಮಿಸಿದೆ. ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.


