
ಕಾರವಾರ: ಕರಾವಳಿ ಉತ್ಸವವು 8 ವರ್ಷಗಳಿಂದ ಕಾರಣಾಂತರದಿಂದ ನಡೆಯಲಿಲ್ಲ, ಹಿಂದಿನಿಂದ ನಡೆದು ಬಂದ ನಮ್ಮ ಕಲೆ ಮತ್ತು ಸಂಸ್ಕೃತಿ ಉಳಿಸಲು, ಬೆಳೆಸಿ ಯುವ ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ಬಾರಿ ಪ್ರಪ್ರಥಮವಾಗಿ 7 ದಿನಗಳ ಕಾಲ ಕರಾವಳಿ ಉತ್ಸವ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ರವೀಂದ್ರನಾಥ ಟ್ಯಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ , ಕನ್ನಡ ಮತ್ತು ಸಂಸ್ಕೃತ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಹಾಗೂ ಜಿಲ್ಲಾಡಳಿತ ಉತ್ತರ ಕನ್ನಡದ ಆಶ್ರಯದಲ್ಲಿ ಆಯೋಜಿಸಿದ್ದ ಕರಾವಳಿ ಉತ್ಸವ 2025 ಅನ್ನು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರಾವಳಿ ಜನರ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳಸಿ ಪ್ರೋತ್ಸಾಹ ನೀಡಲು, ರಾಷ್ಟ್ರ ಮಟ್ಟದ ಕಲಾವಿದರ ಕಾರ್ಯ ಕ್ರಮದ ಮನರಂಜನೆಯ ಜೋತೆಗೆ ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸಿ ಅವರನ್ನು ರಾಜ್ಯ ಮತ್ತು ರಾಷ್ಟ್ರಟ್ಟದಲ್ಲಿ ಪ್ರದರ್ಶಿಸಲು ಎಲ್ಲಾ ರೀತಿಯ ಸಹಾಯ ಸಹಕರವನ್ನು ನೀಡಲಾಗುವುದು ಎಂದರು
ಕರಾವಳಿಯ ಜನರು ಉದ್ಯೋಗ ಬಯಸಿ ಹೊರ ರಾಜ್ಯಗಳಿಗೆ ತೆರಲುವುದನ್ನು ತಪ್ಪಿಸಲು ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಪಡೆಸಿ ಉದ್ಯೋಗ ಸೃಷ್ಠಿಸಲು ಪ್ರವಾಸೋದ್ಯಮಕ್ಕೆ ಪ್ರತ್ಯೇಕ ನೀತಿ ಜಾರಿ ಮಾಡಲಾಗುತ್ತದೆ. ನಿಸರ್ಗ ಮತ್ತು ಮೀನುಗಾರರಿಗೆ ಯಾವುದೇ ರೀತಿ ಹಾನಿಯಾಗದಂತೆ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು.


ಕರ್ನಾಟಕ ರಾಜ್ಯ ಮಾರ್ಕೇಟಿಂಗ್ ಕಮ್ಯೂನಿಕೇಷನ್ ಮತ್ತು ಅಡ್ವರ್ಟೈಸಿಂಗ್ ಲಿಮಿಟೆಡ್ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ಅವರು ಮಾತನಾಡಿ, 8 ವರ್ಷಗಳ ನಂತರ ಸಪ್ತಾಹ ಮೂಲಕ ಕಾರ್ಯಕ್ರಮ ಅಯೋಜನೆ ಮಾಡಲಾಗುತ್ತಿದೆ ಸರ್ಕಾರ ಪಂಚ ಗ್ಯಾರಂಟಿ ಯೋಜನೆ ಜನ ಸಮಾನ್ಯರ ಏಳಿಗೆಗೆ ಶ್ರಮಿಸುತ್ತಿದೆ. 7 ದಿನಗಳ ಸಪ್ತಾಹ ಮನರಂಜನಾ ಕಾರ್ಯಕ್ರಮಗಳ ಉತ್ಸಾಹವನ್ನು ವಿಜ್ರಂಬಣೆಯಿಂದ ಆಯೋಜಿಸಲಾಗಿದೆ ಅತ್ಯಾಕರ್ಷಕವಾಗಿ ವೇದಿಕೆ ಮೇಲೆ ಸ್ಥಳೀಯ ರಾಜ್ಯ, ರಾಷ್ಟ್ರಮಟ್ಟದ ಕಲಾವಿದರಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದ್ದು, ಈ ಏಳು ದಿನಗಳ ಮನರಂಜನಾ ಕಾರ್ಯಕ್ರಮವನ್ನು ಜಿಲ್ಲಾ ಜನತೆ ಆನಂದಿಸುವಂತೆ ಆಗಬೇಕು. ಕರಾವಳಿ ಉತ್ಸವದ ಸಪ್ತಾಹ ಕಾರ್ಯಕ್ರಮಗಳಲ್ಲಿ ಯಾವುದಾದರೂ ಒಂದು ದಿನ ಮುಖ್ಯಮಂತ್ರಿ ಸಿದ್ದ ರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಆಗಮಿಸಲು ಒಪ್ಪಿಗೆ ಸೂಚಿಸಿರುವುದರಿಂದ ರಾಮನ ಗುಳಿ ಸೇತುವೆ, ಮಂಜುಗುಣಿ ಸೇತುವೆ, 450 ಹಾಸಿಗೆಯ ಆಸ್ಪತ್ರೆ, ಪ್ರಜಾಸೌಧದ ಉದ್ಘಾಟನೆ ನೇರವೇರಿಸಲಿದ್ದಾರೆ. ಈಗಾಗಳೆ ಜಿಲ್ಲಾ ಆಸ್ಪತ್ರೆಯಲ್ಲಿ ಥಾರ್ಮ ಸೆಂಟರ್ ತೆರೆಯಲಾಗಿದೆ, ಮುಂದಿನ ದಿನಗಳಲ್ಲಿ ಖಂಡಿತವಾಗಿ ಕಾರಬಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಲಾಗುತ್ತದೆ ಎಂದರು.
ಜಿಲ್ಲೆಯ ಬಹುತೇಕ ಯುವಕರು ಉದ್ಯೋಗಕ್ಕಾಗಿ ಪ್ರತಿ ದಿನ ಗೋವಾಕ್ಕೆ ತೆರಲುತ್ತಿದ್ದಾರೆ ಜಿಲ್ಲೆಯಲ್ಲಿ ಅವರಿಗೆ ಉದ್ಯೋಗ ಸೃಷ್ಠಿಸುವ ದೃಷ್ಟಿಯಿಂದ ಪ್ರವಾಸೋದ್ಯಮ ಅಥವಾ ಕೈಗಾರಿಕೋದ್ಯಮಗಳನ್ನು ಪ್ರಾರಂಬಿಸಲು ಕ್ರಮ ಕೈಗೊಳ್ಳ ಲಾಗಿವುದು ಎಂದ ಅವರು ಕರಾವಳಿ ತೀರದ 380 ಕಿ.ಮೀ ಕರಾವಳಿ ತೀರ ಪ್ರದೇಶವನ್ನು ಅಭಿವೃದ್ಧಿ ಪಡಿಸಿದ್ದಾರೆ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬಹುದಾಗಿದೆ ಜಿಲ್ಲೆಯಲ್ಲಿ ಶರಾವಾತಿ, ಗಂಗಾವಳಿ, ಅಘನಾಶಿನಿ ಹಿನ್ನೀರಿನ ಸ್ಥಳಗಳು ಪ್ರವಾಸೋದ್ಯಮಕ್ಕೆ ಪೂರಕವಾಗಿದೆ ಎಂದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಪ್ರಾಸ್ತವಿಕವಾ ಅವರು ಮಾತನಾಡಿ, ಡಿ. 28 ರವರೆಗೆ ಕರಾವಳಿ ಉತ್ಸವ ನಡೆಯಲಿದ್ದು, ಎಲ್ಲರೂ ಕಾರವಾರದ ಕಡಲ ತೀರದಲ್ಲಿ ಸಮುದ್ರದ ಕಡಲಿನಲ್ಲಿ ತೇಲಲಿದ್ದು, ವೈವಿದ್ಯಮಯ ಸ್ಪರ್ಧೆಗಳಾದ ಚಿತ್ರಕಲೆ, ರಂಗೋಲಿ, ರೀಲ್ಸ್, ಗಾಳಿಪಟ ಹಾರಟ, ಅಡುಗೆ ಸ್ಪರ್ಧೆ, ಸ್ವಾನ ಪ್ರದರ್ಶನ, ದೋಣಿ ಸ್ಪರ್ಧೆ, ಕರಾವಳಿ ರನ್, ಮರಳು ಚಿತ್ರಕಲೆ ಹಾಗೂ ವಿವಿಧ ಕ್ರೀಡೆಗಳನ್ನು ಅಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ್, ಶಾಂತರಾಮ ಬುಡ್ನ ಸಿದ್ದಿ, ಜಿಲ್ಲಾ ಗ್ಯಾರಂಟಿ ಯೋಜನೆಯ ಪ್ರಾಧಿಕಾರದ ಅಧ್ಯಕ್ಷ ಸತೀಶ ಪಿ ನಾಯ್ಕ, ತಾಲೂಕು ಅಧ್ಯಕ್ಷ ರಾಜೇಂದ್ರ ರಾಣೆ, ಕರ್ನಾಟಕ ರಾಜ್ಯ ಮಾರ್ಕೇಟಿಂಗ್ ಕಮ್ಯೂನಿಕೇಷನ್ ಮತ್ತು ಅಡ್ವರ್ಟೈಸಿಂಗ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಅತೀಕುಲ್ಲಾ ಶರೀಫ್ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ, ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಉಪ ವಿಭಾಗಾಧಿಕಾರಿಗಳಾದ ಕಾವ್ಯರಾಣಿ, ಶ್ರವಣ ಕುಮಾರ, ತರಬೇತಿ ನಿರತ ಐಎಎಸ್ ಅಧಿಕಾರಿ ಝೂಫಿಷನ್ ಹಕ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ಎಂ. ನಾಯ್ಕ ಇದ್ದರು.


