
ಕಾರವಾರ: ಕರಾವಳಿ ಉತ್ಸವ ಕಾರ್ಯಕ್ರಮ ಇದೇ 22 ರಿಂದ 28 ರವರೆಗೆ 7 ದಿನಗಳವರೆಗೆ ಹಮ್ಮಿಕೊಳ್ಳಲಾಗಿದ್ದು, ಕರಾವಳಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತ ಕಲಾವಿದರು ಡಿ. 11 ರೊಳಗೆ ತಮ್ಮ ಅರ್ಜಿಯೊಂದಿಗೆ, ಕಾರ್ಯಕ್ರಮ ನೀಡಿದ ದಾಖಲೆಗಳನ್ನು ಲಗತ್ತಿಸಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉತ್ತರ ಕನ್ನಡ ಜಿಲ್ಲೆ, ಕಾರವಾರ ಅವರ ಕಚೇರಿಗೆ ನೀಡುವುದು. ಮತ್ತು ಕಚೇರಿಯ ಇ ಮೇಲ್ ವಿಳಾಸ dkc.karwar@gmali.com ಗೆ ಕಳಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ.13 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಆಯ್ಕೆ ಸಮಿತಿ ಮೂಲಕ, ಸಾಮಾಜಿಕ ಅರಣ್ಯ ವಿಭಾಗದ ಸಭಾಂಗಣ, ಕೋಡಿಭಾಗ, ಕಾರವಾರ ಇಲ್ಲಿ ಅಡಿಷನ್ ಮೂಲಕ ಅರ್ಹ ಕಲಾವಿದರನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.


