
ಮಂಗಳೂರು: ಸರಕಾರಿ ಲೇಡಿಗೋಷನ್ ಆಸ್ಪತ್ರೆ ದೇಶದಲ್ಲಿಯೇ ಮಾದರಿ ಆಸ್ಪತ್ರೆ ಎಂಬುದು ನಮ್ಮ ಹೆಮ್ಮೆ ಆಗಿದೆ. ಗುರು ಬೆಳದಿಂಗಳು ಫೌಂಡೇಶನ್ ಸಮಾಜ ಸೇವಾ ಚಟುವಟಿಕೆಗಳ ಮೂಲಕ ಅಳಿಲು ಸೇವೆ ಮಾಡುತ್ತಿದೆ. ಸರಕಾರಿ ಲೇಡಿಗೋಷನ್ ಆಸ್ಪತ್ರೆ ಕಾರ್ಯಚಟುವಟಿಕೆಗಳ ಬಗ್ಗೆ ಅಭಿಮಾನ ಇದೇ ಎಂದು ವಕೀಲ ಹಾಗೂ ಗುರು ಬೆಳದಿಂಗಳು ಫೌಂಡೇಷನ್ ಅಧ್ಯಕ್ಷ ಪದ್ಮರಾಜ್ ಪೂಜಾರಿ ಹೇಳಿದರು.
ಮಂಗಳೂರಿನ ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಸಮಾಜ ಸೇವಕರು ಹಾಗೂ ಆಸ್ಪತ್ರೆಯ ಬೆಳವಣಿಗೆಯಲ್ಲಿ ವಿಶೇಷ ಪಾತ್ರ ವಹಿಸಿದ ಗಣ್ಯರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್.ಎಂ.ಆರ್ ಅವರು ಮಾತನಾಡಿ, ಸರಕಾರದ ಜತೆ ಸಾರ್ವಜನಿಕ ಸಂಘ ಸಂಸ್ಥೆಗಳು ಕೈ ಜೋಡಿಸಿದಾಗ ಅದ್ಭುತ ಕ್ರಾಂತಿಯನ್ನು ಆಯಾಯ ಕ್ಷೇತ್ರದಲ್ಲಿ ಸಾಧಿಸಲು ಸಹಾಯ ಆಗುತ್ತದೆ. ಸಾರ್ವಜನಿಕ ಸಹಭಾಗಿತ್ವದ ಸ್ಮರಣೆಗಾಗಿ ಇಂತಹ ಅಭಿನಂದನಾ ಕಾರ್ಯಕ್ರಮ ಅತ್ಯಗತ್ಯ ಎಂದರು.

ಗುರು ಬೆಳದಿಂಗಳು ಫೌಂಡೇಶನ್ ಕಾರ್ಯದರ್ಶಿ ರಾಜೇಶ್ , ವಿಭಾಗದ ಸ್ಥಾಪನೆಗೆ ಸಹಕರಿಸಿದ ಭಾರತ್ ಅಗ್ರೋವೆಟ್ ಡಾ. ಅರುಣ್ ಶೆಟ್ಟಿ,, ಕಾರ್ಡೋಲೈಟ್ ಜನರಲ್ ಮ್ಯಾನೇಜರ್ ದಿವಾಕರ್ , ಲಯನ್ ಗಣೇಶ್ ಶೆಟ್ಟಿ,ರೊಟೇರಿಯನ್ ನವೀನ್, ಜಯ ಶೆಟ್ಟಿ ಆರ್.ಜೆ.ಸೋಲಾರ್, ಶಂಕರ್ ಉಡುಪಿ ಅವರನ್ನೂ ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ನಿವಾಸಿ ವೈದ್ಯಾಧಿಕಾರಿ ಡಾ. ಜಗದೀಶ್, ಶುಶ್ರೂಷಾಧೀಕ್ಷಕಿ ತ್ರೇಸಿಯಮ್ಮ ,ಕೆ.ಎಂ.ಸಿ.ಸೂಪರ್ ವೈಸರ್ ಮಲ್ಲಿಕಾ ಇದ್ದರು.
ಅಪೂರ್ವ ಪ್ರಾರ್ಥನೆ ಮಾಡಿದರು. ಜ್ಯೋತಿ ಪ್ರಭಾ ಸ್ವಾಗತಿಸಿದರು. ಶುಶ್ರೂಷಕಿ ಸವಿತಾ ವಂದಿಸಿದರು. ಶುಶ್ರೂಷಾಧಿಕಾರಿ ಅಂಬಿಕಾ ಮತ್ತು ಜಯಲಕ್ಷ್ಮಿ ಅವರು ಕಾರ್ಯಕ್ರಮ ನಿರೂಪಿಸಿದರು.

6 ಲಕ್ಷದ ವೆಚ್ಚದಲ್ಲಿ ಹವಾನಿಯಂತ್ರಿತ ವ್ಯವಸ್ಥೆ: ಡಾ. ದುರ್ಗಾಪ್ರಸಾದ್
ಲೇಡಿಗೋಷನ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಪ್ರಾರಂಭಿಸಲಾದ ಕ್ರಿಟಿಕಲ್ ಕೇರ್ ವಿಭಾಗಕ್ಕೆ ಸುಮಾರು 72 ಲಕ್ಷ ಮೌಲ್ಯದ ಉಪಕರಣಗಳನ್ನು ರೋಟರಿ ಕ್ಲಬ್ ಮಂಗಳೂರು ಅವರು ತಮ್ಮ ಗ್ಲೋಬಲ್ ಗ್ರ್ಯಾಂಟ್ ಮೂಲಕ ನೀಡಿದ್ದಾರೆ. ಆದರೆ ಇದರ ರಚನೆಗೆ ಪೂರಕವಾದ ಹವಾನಿಯಂತ್ರಿತ ಉಪಕರಣದ ವ್ಯವಸ್ಥೆಯನ್ನು ಗುರು ಬೆಳದಿಂಗಳು ಫೌಂಡೇಷನ್ 6 ಲಕ್ಷ ರೂಪಾಯಿ ವೆಚ್ಚದಲ್ಲಿ ಅಳವಡಿಸಿಕೊಟ್ಟಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಹೇಳಿದರು.

