[t4b-ticker]
KARAVALIDAILYNEWS

ಉಡುಪಿಕಾರವಾರಕುಂದಾಪುರಜಿಲ್ಲೆಪುತ್ತೂರುಮಂಗಳೂರುರಾಜ್ಯಶಿರಸಿಸಿನಿಮಾ

ಡಾ.ಲೀಲಾ ಮೋಹನ್ ವೃತ್ತಿಯಲ್ಲಿ ವೈದ್ಯ, ಬಿಡದ ಬಣ್ಣದ ನಂಟು, ಪ್ರವೃತ್ತಿಯಲ್ಲಿ ನಟ, ಲೇಖಕ, ಮ್ಯಾರಾಥಾನ್ ರನ್ನರ್

ಬೆಂಗಳೂರು: ಜೀವನದಲ್ಲಿ ಆಸೆ , ಆಕಾಂಕ್ಷೆ , ಶ್ರದ್ಧೆ , ಗುರಿ ಇದ್ದರೆ, ಉನ್ನತ ಮಟ್ಟಕ್ಕೆ ಸಾಗಬಹುದು ಎಂಬುದಕ್ಕೆ ನಿದರ್ಶನ ಆಗಿದ್ದಾರೆ ವೈದ್ಯ, ನಟ, ಲೇಖಕ, ಮ್ಯಾರಾಥಾನ್ ರನ್ನರ್, ಸಾಂಸ್ಕೃತಿಕ ರಾಯಭಾರಿ ಆಗಿರುವ ಡಾ. ಲೀಲಾ ಮೋಹನ್ ಪಿ.ವಿ.ಆರ್.

ಮೂಲತಃ ಬೆಂಗಳೂರಿನವರು, ಎಂ.ಬಿ.ಬಿ.ಎಸ್ ಮತ್ತು ಎಂ.ಡಿ ಪದವಿ ಪಡೆದು ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ಆರಂಭಿಸಿ, 18 ವರ್ಷಗಳಿಗಿಂತ ಹೆಚ್ಚು ಅನುಭವದೊಂದಿಗೆ ಫ್ಯಾಮಿಲಿ ಮೆಡಿಸಿನ್, ಪಿಡಿಯಾಟ್ರಿಕ್ಸ್ , ಪಬ್ಲಿಕ್ ಹೆಲ್ತ್, ಲೈಫ್ ‌ಸ್ಟೈಲ್ ಮೆಡಿಸಿನ್ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ್ದಾರೆ.

ಪೇನ್ ಕಿಲ್ಲರ್‌ಗಳ ಬದಲು ನ್ಯೂಟ್ರಾಸ್ಯೂಟಿಕಲ್ಸ್ ಮೂಲಕ ನೋವು ನಿರ್ವಹಣೆಗೆ ಆದ್ಯತೆ ನೀಡುವ ವೈದ್ಯರಾಗಿ ಪರಿಚಿತರು. ಸರ್ಜಾಪುರ ಬಳಿ ಇರುವ ರೇನ್‌ಬೋ ಆಸ್ಪತ್ರೆ , ಮದರ್‌ಹುಡ್ ಆಸ್ಪತ್ರೆ ಹಾಗೂ ಮಣಿಪಾಲ್ ಆಸ್ಪತ್ರೆಯಲ್ಲಿ ಪರಾಮರ್ಶಕ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಎಚ್‌ ಎಸ್‌ ಆರ್ ಲೇಔಟ್‌ನಲ್ಲಿ ಪಡಿತೇಮ್ ಹೆಲ್ತ್ ಕೇರ್ ಎಂಬ ಡೇ ಕೇರ್ ವೈದ್ಯಕೀಯ ಕೇಂದ್ರದ ಸಂಸ್ಥಾಪಕ ಕೂಡ ಹೌದು. ಕೋವಿಡ್ ಮಹಾಮಾರಿ ವೇಳೆ ನೀಡಿದ ಅಭೂತಪೂರ್ವ ಸೇವೆಗೆ ಕೋವಿಡ್ ವಾರಿಯರ್ ಅವಾರ್ಡ್ ಸೇರಿದಂತೆ ಹಲವು ಗೌರವ ಅವರನ್ನು ಹುಡುಕಿ ಬಂದಿವೆ.

ವೈದ್ಯಕೀಯ ಕ್ಷೇತ್ರದ ಜತೆಗೆ ಕನ್ನಡ ಚಿತ್ರರಂಗದಲ್ಲೂ ನಟ, ಸಾಹಿತ್ಯ, ಕವನ-ಸಾಹಿತಿ ಹಾಗೂ ಸೃಜನಾತ್ಮಕ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಬಾಲ್ಯದಿಂದಲೇ ಅಭಿನಯ, ಬರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಡಾ. ಲೀಲಾ ಮೋಹನ್ ಪಿ.ವಿ.ಆರ್. ಅವರು 2016 ರಲ್ಲಿ ಗಿರಿರಾಜ. ಬಿ.ಎಂ. , ಪರಮೇಶ್, ಕಲಾಮಧ್ಯಮ ಶಿಕ್ಷಕರಿಂದ ಅಭಿನಯ ಮತ್ತು ರಂಗಭೂಮಿ ತರಬೇತಿ ಪಡೆದ ನಂತರ ಕಿರು ಚಿತ್ರಗಳಾದ ಡೌಂಟ್ ಬಿ ಫ್ಯೂಲಿಸ್, ಆ್ಯಕ್ಸಿಡೆಂಟ್, ಓ ಎಸ್ ಟಿ, ಹೈವೇ , ಟ್ರಕ್ ಚಿತ್ರಗಳಲ್ಲಿ ಅನುಭವ ಪಡೆದು, 2018 ರಿಂದ ಆಲ್ಬಂ ಹಾಡುಗಳಲ್ಲೂ ಕಾಣಿಸಿಕೊಂಡಿದ್ದಾರೆ. ನಂತರ ಪೂರ್ಣ ಪ್ರಮಾಣದಲ್ಲಿ ಕನ್ಯಾ, ಗಡಿಯಾರ ಚಿತ್ರಗಳಲ್ಲಿ ಅಭಿನಯಿಸಿದ ನಂತರ ಈಗ “ನಾಯಿ ಇದೆ ಎಚ್ಚರಿಕೆ” ಚಿತ್ರ ಕೂಡ ಬಿಡುಗಡೆಗೆ ಸಿದ್ಧವಿದೆ. ಈ ಚಿತ್ರ ನಿರ್ಮಾಣದ ಜತೆಗೆ ನಾಯಕನಾಗಿ ಕೂಡ ಅಭಿನಯಿಸಿದ್ದಾರೆ. ಇದಲ್ಲದೆ ಸಾಲುಸಲಾಗಿ ಕೌರವ ವೆಂಕಟೇಶ್ ನಿರ್ದೇಶನದ PYNA ನೂತನ ಚಿತ್ರದ ಜತೆಗೆ ಉಗ್ರಾವತಾರ ಚಿತ್ರದಲ್ಲಿ ಸೈಕೋ ಪಾತ್ರ , ರೇ 1 ರಲ್ಲಿ ಖಳನಾಯಕನಾಗಿ , ಪುಟಾಣಿ ಪಂಟ್ರೂ ಹಾಗೂ ತೆಲುಗಿನಲ್ಲಿ ಕಲ್ಯಾಣ ಮಸ್ತು , ಕಾಲಾನಿಕಿ ಭೈರವಡು ಚಿತ್ರಗಳಲ್ಲಿ ಅಭಿನಯಿಸಿದ್ದು , ಸದ್ಯ ಕನ್ನಡದಲ್ಲಿ ರಾಕ್ಷಸ , ಬಾರ್ಬಿ , ದಯಂಡ್ ಚಿತ್ರಗಳು ಬಿಡುಗಡೆಗೆ ಹಂತದಲ್ಲಿದೆ.

ಡಾ. ಲೀಲಾ ಮೋಹನ್ ಆರೋಗ್ಯ ಜಾಗೃತಿ ಬಗ್ಗೆOne More Puff – A Guide on Smoking and Quitting ಧೂಮಪಾನ ಮತ್ತು ನಿಕೋಟಿನ್ ವ್ಯಸನದಿಂದ ಹೊರಬರುವುದು ಹೇಗೆ ಎಂಬುದನ್ನು ಪುಸ್ತಕ ಮೂಲಕ ಹೊರ ತಂದಿದ್ದಾರೆ. ಕ್ರೀಡೆ ಮತ್ತು ಮ್ಯಾರಾಥಾನ್ ಓಟದಲ್ಲಿ ದೀರ್ಘಕಾಲದ ಮ್ಯಾರಾಥಾನ್ ರನ್ನರ್ ಆಗಿರುವ ಅವರು ಕರ್ನಾಟಕ ಹಾಗೂ ಭಾರತದ ಅನೇಕ ಮ್ಯಾರಾಥಾನ್‌ಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದ್ದಾರೆ.

ಹೃದಯ ಆರೋಗ್ಯ, ಫಿಟ್‌ನೆಸ್ ಮತ್ತು ಲೈಫ್‌ಸ್ಟೈಲ್ ಸುಧಾರಣೆಗೆ ಉತ್ತೇಜನ ನೀಡುತ್ತಿದ್ದಾರೆ. ಇವರ ಹಲವು ಸಾಧನೆಗಳನ್ನು ಗಮನಿಸಿ ವೈದ್ಯಕೀಯ, ಸಂಸ್ಕೃತಿ, ಸಿನಿಮಾ, ಶಿಕ್ಷಣ, ಸಾಮಾಜಿಕ ಸೇವೆಗಳಲ್ಲಿ ನೀಡಿದ ಕೊಡುಗೆಗಾಗಿ 40 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅದರಲ್ಲೂ ಪ್ರಮುಖವಾಗಿ ನಾಡಪ್ರಭು ಕೇಂಪೇಗೌಡ ಪ್ರಶಸ್ತಿ , ವಿಕೆ ಹೆಲ್ತ್ ಎಕ್ಸಲೆನ್ಸ್ ಅವಾರ್ಡ್, ಡಾ. ರಾಜ್ ಕುಮಾರ್ ಕಲಾ ರತ್ನ ಪ್ರಶಸ್ತಿ , ಎಸ್.ಎಸ್. ಕಲೆ ಸಂಗಮ ಪ್ರಶಸ್ತಿ, ಕಲೆ ಸಂಗಮ ರಾಜ್ಯ ಪ್ರಶಸ್ತಿ , ಕರ್ನಾಟಕ ರತ್ನ (ಕಲೆ ಸಂಗಮ), ಮದರ್ ತೆರೆಸಾ ಅವಾರ್ಡ್, ವಿದ್ಯಾ ರತ್ನ ಪ್ರಶಸ್ತಿ, ಕಾವ್ಯಕ ಯೋಗಿ ಬಸವಶ್ರೀ ಪ್ರಶಸ್ತಿ, ಗ್ಲೋಬಲ್ ವೆಲ್ಫೇರ್ ಪ್ರೊಟೆಕ್ಷನ್ ಗೌರವ , ಐಕಾನ್ಸ್ ಆಫ್ ಇಂಡಿಯನ್ ಬಿಸಿನೆಸ್ ಲೀಡರ್‌ಶಿಪ್ ಅವಾರ್ಡ್, ನವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವಿಶ್ವವಾಣಿ ಗ್ಲೋಬಲ್ ಫೋರಂ ಗೌರವ, ಕೋವಿಡ್ ವಾರಿಯರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ, ನಾಟಕ, ಮಕ್ಕಳ ಪ್ರತಿಭಾ ಸ್ಪರ್ಧೆಗಳು, ಮಾದರಿಂಗ್ ಶೋಗಳು, ಚಾರಿಟಿ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿ ಸಹಕಾರ ನೀಡುವುದರ ಜತೆಗೆ ಹೆಜ್ಜೆ ಹೆಜ್ಜೆ ರಂಗ ತಂಡ , ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ, ಶಿಕ್ಷಣ ಟ್ರಸ್ಟ್ , ದೇವಸ್ಥಾನೋತ್ಸವಗಳು ಮತ್ತು ಸಮುದಾಯ ಚಟುವಟಿಕೆಗಳಿಗೆ ಸಾಥ್ ನೀಡಿದ್ದಾರೆ.

ಡಾ. ಲೀಲಾ ಮೋಹನ್ ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಪರಿಣಿತಿ ಹೊಂದಿದ್ದು , ನಟನೆ ಮಾಡ್ಲಿಂಗ್ , ಮುದ್ರಣ ಜಾಹೀರಾತುಗಳು, ರ್ಯಾಂಪ್ ಶೋಗಳು, ಕ್ಯಾಲೆಂಡರ್ ಶೂಟ್ ಗಳಲ್ಲೂ ನಟಿಸಲು ಸಿದ್ಧರಿದ್ದು , ಭಾರತೀಯ, ಪಾಶ್ಚಾತ್ಯ, ಫಿಟ್‌ನೆಸ್ ಹಾಗೂ ಸ್ಟೈಲಿಷ್ ವೇಷಗಳಿಗೂ ಸಿದ್ಧರಿದ್ದಾರೆ. ಬಹುಮುಖ ವ್ಯಕ್ತಿತ್ವವಾಗಿ ಡಾ. ಲೀಲಾ ಮೋಹನ್ ಪಿ.ವಿ.ಆರ್. ಈಗಾಗಲೇ ಗುರುತಿಸಿಕೊಂಡಿದ್ದು , ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ನೆಲೆಯನ್ನ ಕಾಣಲು ಮುಂದಾಗಿದ್ದಾರೆ.

ಡಾ. ಲೀಲಾ ಮೋಹನ್ ಪಿ.ವಿ.ಆರ್. ತಾವೇ ನಿರ್ಮಾಣದ ಜತೆ ಮುಖ್ಯಭೂಮಿಯಲ್ಲಿ ಅಭಿನಯಿಸಿರುವ “ನಾಯಿ ಇದೆ ಎಚ್ಚರಿಕೆ” ಚಿತ್ರವನ್ನು ಇದೇ ನ, 28ರಂದು ರಾಜ್ಯದಾದ್ಯಂತ ಅದ್ದೂರಿಯಾಗಿ ಬಿಡುಗಡೆಗೆ ಸಿದ್ಧತೆ ನಡೆದಿದೆ. ಬಹಳಷ್ಟು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಸೇವೆ ಮಾಡುತ್ತಿರುವ ವೈದ್ಯ , ನಟ , ಡಾ. ಲೀಲಾ ಮೋಹನ್ ಪಿ.ವಿ.ಆರ್ ಸಿನಿಮಾ ಕ್ಷೇತ್ರದಲ್ಲಿ ಸಾಲು ಸಾಲು ಉತ್ತಮ ಚಿತ್ರಗಳ ನೀಡುವ ಬಯಕೆಯೊಂದಿಗೆ ಮುಂದೆ ಸಾಗಿದ್ದಾರೆ.

  1.  

Related posts

ರೋಹನ್ ನೆಸ್ಟ್ ಭೂಮಿಪೂಜೆ, ಗ್ರಾಹಕರ ಅಭಿರುಚಿಗೆ ತಕ್ಕಂತೆ ಕನಸಿನ ಸೂರು ನಿರ್ಮಾಣ: ಡಾ. ರಾಜೇಂದ್ರ ಕುಮಾರ್‌

Karavalidailynews

ಬಿಣಗಾ ಗ್ರಾಸಿಮ್ ಇಂಡಸ್ಟ್ರಿಯಲ್ಲಿ ಅನುಮಾನಾಸ್ಪದ ರೀತಿ ಕಾರ್ಮಿಕನ ಸಾವು, ಕಂಪನಿ ವಿರುದ್ಧ ಠಾಣೆಗೆ ದೂರು

Karavalidailynews

ಮಂಗಳೂರು ಉತ್ತರ ಕ್ಷೇತ್ರದಿಂದ ಬಿಜೆಪಿಯ ಡಾ. ಭರತ್ ಶೆಟ್ಟಿ ನಾಮಪತ್ರ ಸಲ್ಲಿಕೆ

Karavalidailynews

This website uses cookies to improve your experience. We'll assume you're ok with this, but you can opt-out if you wish. Accept Read More

Privacy & Cookies Policy