Breaking News
KARAVALIDAILYNEWS

ಉಡುಪಿಕಾರವಾರಕುಂದಾಪುರಜಿಲ್ಲೆಪುತ್ತೂರುಮಂಗಳೂರುರಾಜ್ಯಶಿರಸಿ

ನಿಗಮ ಮಂಡಳಿ ಅಧ್ಯಕ್ಷರ ಘೋಷಣೆ, ಮೆಸ್ಕಾಂ ಹರೀಶ್ ಕುಮಾರ್, ಗಾಣಿಗ ನಿಮಗಕ್ಕೆ ವಿಶ್ವಾಸ್ ಕುಮಾರ್ ದಾಸ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಗಫೂರ್

 

ಬೆಂಗಳೂರು: ಕಾಂಗ್ರೆಸ್ ಸರಕಾರ 34 ಮಂದಿಯನ್ನು ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇಮಕ ಪಟ್ಟಿಗೆ ಅಂತಿಮ ಮುದ್ರೆ ಹಾಕಿದ್ದಾರೆ. ಅಧಿಕೃತ ಅಂಕಿತ ಹಾಕಿದ್ದಾರೆ. ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಅವರಿಗೆ ಮೆಸ್ಕಾಂ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ಇನ್ನು ಬಹಳ ದಿನಗಳಿಂದ ಪಕ್ಷಕ್ಕಾಗಿ ದುಡಿದ ವಿಶ್ವಾಸ್ ಕುಮಾರ್ ದಾಸ್ ಅವರನ್ನು ರಾಜ್ಯ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷನ್ನಾಗಿ ನೇಮಕ ಮಾಡಲಾಗಿದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಎಂ. ಎ. ಗಫೂರ್ ಅವರನ್ನು ನೇಮಕ ಮಾಡಲಾಗಿದೆ.

  1.  

ವಿವರ ಈ ಕೆಳಗಿನಂತಿದೆ:
ಕರಾವಳಿ ಅಭಿವೃದ್ಧಿ ಪ್ರಾಧಿಕಾರ-ಎಂ.ಎ.ಗಫೂರ್, ಮೆಸ್ಕಾಂ -ಕೆ. ಹರೀಶ್ ಕುಮಾರ್, ಕೇಂದ್ರ ಪರಿಹಾರ ಸಮಿತಿ-ಆಗಾ ಸುಲ್ತಾನ್, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣೀಕರಣ ಸಂಸ್ಥೆ-ಲಾವಣ್ಯಾ ಬಲ್ಲಾಳ್ ಜೈನ್. ರಾಜ್ಯ ಗಾಣಿಗ ಅಭಿವೃದ್ಧಿ ನಿಗಮ-ವಿಶ್ವಾಸ್ ಕುಮಾರ್ ದಾಸ್, ರಾಜ್ಯ ಸಫಾಯಿ ಕರ್ಮಚಾರಿ ಆಯೋಗ-ಪಿ. ರಘು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ- ಶಿವಲೀಲಾ ವಿನಯ್ ಕುಲಕರ್ಣಿ, ಜೈವಿಕ ವೈವಿಧ್ಯ ಮಂಡಳಿ-ವಡ್ನಾಳ್ ಜಗದೀಶ್, ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ-ಮುರಳಿ ಅಶೋಕ್ ಸಾಲಪ್ಪ. ರಾಜ್ಯ ಎಸ್.ಸಿ. ಮತ್ತು ಎಸ್.ಟಿ. ಆಯೋಗ-ಡಾ. ಮೂರ್ತಿ, ಮಾಜಿ ಸೈನಿಕರ ಕಲ್ಯಾಣ ಮಂಡಳಿ-ಕರ್ನಲ್ ಮಲ್ಲಿಕಾರ್ಜುನ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ- ಡಾ. ಬಿ. ಸಿ. ಮುದ್ದುಗಂಗಾಧರ, ರಾಜ್ಯ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ-ಶಾಲೆಟ್ ಪಿಂಟೋ, ರಾಜ್ಯ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ-ಮಾರಿಯೋಜಿ ರಾವ್. ರಾಜ್ಯ ಗೋದಾಮು ನಿಗಮ-ಎನ್. ಸಂಪಂಗಿ, ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ಲಿ.-ವೈ. ಸಯೀದ್ ಅಹ್ಮದ್, ಕಾಡುಗೊಲ್ಲ ಅಭಿವೃದ್ಧಿ ನಿಗಮ-ಮಹೇಶ್ ಎಂ., ಬಯಲುಸೀಮೆ ಅಭಿವೃದ್ಧಿ ಮಂಡಳಿ (ಚಿತ್ರದುರ್ಗ)-ಎಚ್.ಬಿ.ಮಂಜಪ್ಪ, ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮ-ಭರಮಣ್ಣ ಉಪ್ಪಾರ. ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ-ಎಸ್.ಜಿ.ನಂಜಯ್ಯನಮಠ, ರಾಜ್ಯ ಬೀಜ ಅಭಿವೃದ್ಧಿ ನಿಗಮ-ಆಂಜನಪ್ಪ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ-ಅರುಣ್ ಕುಮಾರ್ ಪಾಟೀಲ್, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ (ಕಾಡಾ-ಕಲಬುರಗಿ)-ಬಾಬು ಹೊನ್ನ ನಾಯ್ಕ್, ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಯ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ(ಬೆಳಗಾವಿ)-ಯುವರಾಜ್ ಕದಂ. ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ-ಪ್ರವೀಣ್ ಕುಮಾರ್ ಪಾಟೀಲ್, ನಾರಾಯಣ ಗುರು ಅಭಿವೃದ್ಧಿ ನಿಗಮ-ಮಂಜುನಾಥ ಪೂಜಾರಿ, ರಾಜ್ಯ ಸವಿತಾ ಸಮಾಜ ಅಭಿವೃದ್ಧಿ ನಿಗಮ-ಎಂ.ಎಸ್. ಮುತ್ತುರಾಜ್. ರಾಜ್ಯ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ-ನಂಜಪ್ಪ, ರಾಜ್ಯ ರೇಷ್ಮೆ ಮಾರುಕಟ್ಟೆ ಮಂಡಳಿ-ಎಸ್.ಗಂಗಾಧರ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರ- ಪಟೇಲ್ ಶಿವಣ್ಣ, ಕುಂಬಾರ ಅಭಿವೃದ್ಧಿ ನಿಗಮ-ಡಾ.ಶ್ರೀನಿವಾಸ ವೇಲು, ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ-ಟಿ.ಎಂ.ಶಾಹಿದ್ ತೆಕ್ಕಿಲ್, ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ-ಚೇತನ್ ಕೆ. ಗೌಡ, ಎಚ್.ಡಿ.ಗಣೇಶ್- ಮೈಸೂರು ಪೆಯಿಂಟ್ಸ್ ಮತ್ತು ವಾರ್ನಿಷ್ ಲಿ., ನಿಕೇತ್ ರಾಜ್ ಎಂ.- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ.

  1.  

Related posts

ಜೆಡಿಎಸ್ ಮುಖಂಡ ಸುಶೀಲ್ ನರೋನ್ಹಾ ಹೃದಯಘಾತದಿಂದ ನಿಧನ

Karavalidailynews

ಗಣೇಶ್‌ ಹಬ್ಬಕ್ಕೆ ಮಂಗಳೂರು- ಮುಂಬೈಗೆ ವಿಶೇಷ ರೈಲು ಸಂಚಾರ

Karavalidailynews

ಉ. ಕ ಜಿಲ್ಲೆಯಲ್ಲಿ ಮಳೆ, ಅ. 3 ರಂದು 9 ತಾಲ್ಲೂಕಿನ ಶಾಲೆ, ಕಾಲೇಜಿಗೆ ರಜೆ ಘೋಷಣೆ: ಡಿಸಿ ಲಕ್ಷ್ಮೀಪ್ರಿಯಾ

Karavalidailynews

This website uses cookies to improve your experience. We'll assume you're ok with this, but you can opt-out if you wish. Accept Read More

Privacy & Cookies Policy
WP Twitter Auto Publish Powered By : XYZScripts.com