Breaking News
KARAVALIDAILYNEWS

ಉಡುಪಿಕಾರವಾರಕುಂದಾಪುರಜಿಲ್ಲೆಪುತ್ತೂರುಮಂಗಳೂರುರಾಜ್ಯಶಿರಸಿ

ನಿವೃತ್ತ ಡಿಸಿಪಿ ಡಿ. ಧರ್ಮಯ್ಯ ಹೃದಯಾಘಾತದಿಂದ ನಿಧನ

 

ಮಂಗಳೂರು: ಮಂಗಳೂರಿನಲ್ಲಿ ಡಿಸಿಪಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಡಿ. ಧರ್ಮಯ್ಯ (71) ಅವರು ಮಂಗಳೂರು ಬೆಂದೂರುವೆಲ್‌ನ ತಮ್ಮ ನಿವಾಸದಲ್ಲಿ ಸೆ. 24 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರಿಗೆ ಪತ್ನಿ, ಪುತ್ರಿ, ಇಬ್ಬರು ಪುತ್ರರು, ನಾಲ್ಕು ಮಂದಿ ಮೊಮ್ಮಕ್ಕಳು ಇದ್ದಾರೆ.
ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ಹೊಸೂರಿನವರಾಗಿದ್ದಅವರು ಮೈಸೂರಿನಲ್ಲಿ ಎಸ್‌ ಐ ಆಗಿ ಸೇವೆ ಪ್ರಾರಂಭಿಸಿ, ಬಳಿಕ ಯಳಂದೂರು, ಚಾಮರಾಜನಗರ, ವಿರಾಜಪೇಟೆ, ಇನ್‌ಸ್ಪೆಕ್ಟರ್‌ ಆಗಿ ಬೆಳ್ತಂಗಡಿ, ಕಾರ್ಕಳ, ಉಡುಪಿ, ಸಿರಸಿಯಲ್ಲಿ ಡಿವೈಎಸ್‌ಪಿ ಆಗಿ ಕಾರ್ಯನಿರ್ವಹಿಸಿದ್ದರು. ನಂತರ ಬೆಂಗಳೂರಿನಲ್ಲಿ ಎಸಿಪಿಯಾಗಿ ಮತ್ತೆ ಮಂಗಳೂರಿನಲ್ಲಿ ಡಿಸಿಪಿ (ಅಪರಾಧ-ಸಂಚಾರ) ವಿಭಾಗದಲ್ಲಿ ಸೇವೆ ಸಲ್ಲಿಸಿ, 2013 ರಲ್ಲಿ ಸೇವಾ ನಿವೃತ್ತರಾಗಿದ್ದರು. ನಿವೃತ್ತರಾದ ಬಳಿಕ ಅವರು ಮಂಗಳೂರಿನಲ್ಲಿಯೇ ವಾಸವಿದ್ದರು.

  1.  

D. Dharmaiah (71), who had retired as a DCP in Mangalore, died of a heart attack on September 24 at his residence in Benduruvel, Mangalore.
He is survived by his wife, daughter, two sons and four grandchildren.
Originally from Sakleshpur, Hosur in Hassan district, he started his service as an SI in Mysore, then worked as an inspector in Yalandur, Chamarajanagar, Virajpet, and as a DySP in Belthangady, Karkala, Udupi and Sirsi. He later served as an ACP in Bangalore and again as a DCP (Crime-Traffic) in Mangalore, retiring in 2013. After retirement, he lived in Mangalore.

  1.  

Related posts

ಮಂಗಳೂರು ಪಿಲಿಕುಳ ಉದ್ಯಾನಕ್ಕೆ ಹೊಸ ಅತಿಥಿಗಳ ಸೇರ್ಪಡೆ

Karavalidailynews

ಕೆಐಓಸಿಎಲ್ ಲಿಮಿಟೆಡ್‌: ಇಂಟರ್ ಸ್ಕೂಲ್ ಸೈನ್ಸ್ ಫೆಸ್ಟ್ ಅವಿಷ್ಕಾರ್

Karavalidailynews

ಲೋಕ ಅದಾಲತ್, 9000 ಪ್ರಕರಣ ಇತ್ಯರ್ಥಪಡಿಸುವ ಗುರಿ: ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ

Karavalidailynews

This website uses cookies to improve your experience. We'll assume you're ok with this, but you can opt-out if you wish. Accept Read More

Privacy & Cookies Policy
WP Twitter Auto Publish Powered By : XYZScripts.com