ಸಿರಸಿ: ರಾಜ್ಯದ ಪ್ರಮುಖ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಚುನಾವಣೆ ಘೋಷಣೆಯಾಗಿದ್ದು, 16 ಸ್ಥಾನಗಳಿಗೆ ಅಕ್ಟೋಬರ್ 25 ರಂದು ಚುನಾವಣೆ ನಡೆಸಲಾಗುತ್ತದೆ ಎಂದು ಸಿರಸಿ ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾ ಅಧಿಕಾರಿ ಆಗಿರುವ ಕಾವ್ಯರಾಣಿ ಅವರು ತಿಳಿಸಿದ್ದಾರೆ.
13 ರಿಂದ 17 ರವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಸಲಾಗುತ್ತದೆ. 18 ರಂದು ನಾಮಪತ್ರ ಪರಿಶೀಲನೆ ನಡೆಲಸಾಗುತ್ತದೆ, 19 ರಂದು ನಾಮಪತ್ರ ವಾಪಸ್ ಪಡೆಯಲು ದಿನಾಂಕ ನಿಗದಿ ಮಾಡಲಾಗಿದ್ದು, ಅದೇ ದಿನ ಚಿಹ್ನೆ ವಿತರಣೆ ಮಾಡಲಾಗುತ್ತದೆ ಎಂದರು.
25 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರಿಗೆ ಮತದಾನ ನಡೆಯಲಿದ್ದು, ಅದೇ ದಿನ ಮತ ಏಣಿಕೆ ನಂತರ ಫಲಿತಾಂಶ ಘೋಷಣೆ ಮಾಡಲಾಗುತ್ತದೆ. ನಾಮಪತ್ರವನ್ನು ಉಮೇದುದಾರರು ಬೆಳಿಗ್ಗೆ 11 ಗಂಟೆಯಿಂದ 3 ಗಂಟೆಯವರೆಗೆ ಸಲ್ಲಿಸಬಹುದಾಗಿದೆ ಎಂದರು.
ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಭಟ್ಟ, ಸಹಕಾರಿ ಅಧಿಕಾರಿ ಅಜಿತ್ ಶಿರಹಟ್ಟಿ, ಕಂದಾಯ ಅಧಿಕಾರಿ ಡಿ.ಆರ್. ಬೆಳ್ಳಿಮನೆ ಇದ್ದರು.
Sirsi: The state’s major district intermediary bank elections have been announced and elections will be held for 16 seats on October 25, said Sirsi Deputy Divisional Officer and Election Officer Kavyarani.
The nomination process will be conducted from 13 to 17. The scrutiny of nominations will be done on the 18th, the date has been fixed for withdrawal of nominations on the 19th, and the symbols will be distributed on the same day, he said.
Voting will be held from 9 am to 4 pm on the 25th, and the results will be declared after counting of votes on the same day. Candidates can submit their nominations from 11 am to 3 pm, he said.
KDCC Bank Managing Director Srikanth Bhatta, Cooperative Officer Ajit Shirahatti, Revenue Officer D.R. Bellimane were present.