Breaking News
KARAVALIDAILYNEWS

ಉಡುಪಿಕಾರವಾರಕುಂದಾಪುರಜಿಲ್ಲೆಪುತ್ತೂರುಮಂಗಳೂರುಶಿರಸಿ

ಹಿರಿಯ ಸಾಹಿತಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಎಸ್.ಎಲ್.ಭೈರಪ್ಪ ನಿಧನ, ಕಳಚಿದ ಸಾಹಿತ್ಯ ಕೊಂಡಿ

 

ಬೆಂಗಳೂರು: ಹಿರಿಯ ಸಾಹಿತಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಎಸ್.ಎಲ್.ಭೈರಪ್ಪ (94) ಅವರು ಬುಧವಾರ ಮಧ್ಯಾಹ್ನ 2. 38 ಗಂಟೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟ್ರೋತ್ತಾನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೈಸೂರಿನಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದು, ನಿವೃತ್ತಿ ಜೀವನನ್ನು ನಡೆಸುತ್ತಿದ್ದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.

ವಂಶ ವೃಕ್ಷ, ನಾಯಿ ನೆರಳು, ಪರ್ವ, ಗೃಹಭಂಗ, ಗ್ರಹಣ, ಉತ್ತರಾಖಂಡ ಸೇರಿದಂತೆ 25 ಕಾದಂಬರಿಗಳನ್ನು ಬರೆದಿರುವ ಭೈರಪ್ಪನವರು, ಪದ್ಮಭೂಷಣ, ನಾಡೋಜ ಪ್ರಶಸ್ತಿ, ಪಂಪ ಪ್ರಶಸ್ತಿ, ಸರಸ್ವತಿ ಸಮ್ಮಾನ್ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ಭೈರಪ್ಪರ ಕೃತಿಗಳು ಭೀಮಕಾಯ, ಬೆಳಕು ಮೂಡಿತು, ಧರ್ಮಶ್ರೀ, ದೂರ ಸರಿದರು, ಮತದಾನ, ವಂಶವೃಕ್ಷ, ಜಲಪಾತ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ, ಗೃಹಭಂಗ, ನಿರಾಕರಣ, ಗ್ರಹಣ, ದಾಟು, ಅನ್ವೇಷಣ, ಪರ್ವ, ನೆಲೆ, ಸಾಕ್ಷಿ, ಅಂಚು, ತಂತು, ಸಾರ್ಥ, ಮಂದ್ರ, ಆವರಣ, ಕವಲು, ಯಾನ, ಉತ್ತರಕಾಂಡ.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸರಸ್ವತಿ ಸಮ್ಮಾನ್‌, ಪದ್ಮಭೂಷಣ, ಪದ್ಮಶ್ರೀ ಹಾಗೂ ನಾಡೋಜ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

  1.  

Senior writer and Padma Bhushan awardee S.L. Bhairappa (94) passed away at 2.38 pm on Wednesday at Rashtrottana Private Hospital in Rajarajeshwari Nagar, Bengaluru due to a heart attack.
He was living with his family in Mysore and was leading a retired life. He was suffering from age-related ailments and was admitted to a private hospital in Bengaluru for treatment.

Bhairappa, who has written 25 novels including Vamsa Vriksha, Nai Nelu, Parva, Grihabhanga, Grahana, Uttarakhand, was the recipient of many awards including Padma Bhushan, Nadoja Award, Pampa Award, Saraswati Samman Award, and Kendra Sahitya Akademi Award.
Bhyrappa’s works include Bhimakaya, Lektu Mudithu, Dharmashri, Dora Sarde, Voting, Vamshavriksha, Waterfall, Dog Shadow, Tabbaliyu Neenaade Magane, Grihabhanga, Nirakaran, Eclipse, Crossing, Discovery, Parva, Nele, Sakshi, Angu, Tantu, Sartha, Mandra, Varanasi, Kavalu, Yana, Uttarakanda.
He was the recipient of several awards including the Central Sahitya Academy Award, Saraswati Samman, Padma Bhushan, Padma Shri and Nadoja.

  1.  

Related posts

ಚುನಾವಣೆ ವೇಳೆ ನೀಡಿದ ವಾಗ್ದಾನ ಗ್ಯಾರಂಟಿ ಮೂಲಕ ಈಡೇಸಿದ್ದೇವೆ: ಮಮತಾ ಗಟ್ಟಿ

Karavalidailynews

ಜೋಕಟ್ಟೆ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಕತ್ತು ಹಿಸುಕಿ ಕೊಲೆ, ಆರೋಪಿ ಬಂಧನ

Karavalidailynews

ನಿಮ್ಮ ಸೇವೆ, ಕ್ಷೇತ್ರದ ಅಭಿವೃದ್ಧಿಗೆ ಮತ್ತೇ ಅವಕಾಶ ನೀಡಿ: ರೂಪಾಲಿ ನಾಯ್ಕ್

This website uses cookies to improve your experience. We'll assume you're ok with this, but you can opt-out if you wish. Accept Read More

Privacy & Cookies Policy
WP Twitter Auto Publish Powered By : XYZScripts.com