ಸಿರಸಿ: ತಾಲೂಕಿನ ಮರ್ಕಿಕೊಡ್ಲು ಗ್ರಾಮದ ಹಲಗೆಯಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಯುವತಿ ದಾರುಣ ಸಾವು ಕಂಡಿರುವುದು ಆತಂಕಕ್ಕೆ ಕಾರಣ ಆಗಿದೆ.
ಮೃತ ಯುವತಿ ರಂಜನಾ ನಾಗಪ್ಪ ದೇವಾಡಿಗ (21) ಎಂದು ಗುರುತಿಸಲಾಗಿದೆ. ಪೋಷಕರು ಮನೆಯಲ್ಲಿ ಇಲ್ಲದೇ ಇದ್ದ ವೇಳೆ ಈ ಘಟನೆ ನಡೆದಿದೆ. ಯುವತಿ ಅನಾರೋಗ್ಯದಿಂದಾಗಿ ಕಾಲೇಜಿಗೆ ಹೋಗದೆ ಮನೆಯಲ್ಲೇ ಉಳಿದುಕೊಂಡಿದ್ದರು ಎಂದು ತಿಳಿದು ಬಂದಿದೆ.
ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ನಡೆದ ತಕ್ಷಣವೇ ಸಿರಸಿ ಗ್ರಾಮೀಣ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬಂದು ಪರಿಶೀಲನೆ ನಡೆಸಿದ್ದಾರೆ. ಸಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕಟಣ ದಾಖಲಾಗಿದೆ,