ಮಂಗಳೂರು: ಇಲ್ಲಿನ ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದಂತೆ ಹಾಗೂ ಅಬಕಾರಿ ಉಪ ಆಯುಕ್ತರು ದ. ಕ. ಜಿಲ್ಲೆ ಮಂಗಳೂರು ಅವರ ಮಾರ್ಗದರ್ಶನದಂತೆ, ಅಬಕಾರಿ ಉಪ ಅಧೀಕ್ಷಕರು, ಮಂಗಳೂರು, ಅಬಕಾರಿ ನಿರೀಕ್ಷರರು, ತಲಪಾಡಿ ತನಿಖಾ ಠಾಣೆ ಅಬಕಾರಿ ನಿರೀಕ್ಷಕರು ಮತ್ತು ಮಂಗಳೂರು ದಕ್ಷಿಣ ವಲಯ -1 ರ ಅಬಕಾರಿ ನಿರೀಕ್ಷಕರ ನೇತೃತ್ವದಲ್ಲಿ ವಲಯದ ಅಬಕಾರಿ ಉಪ ನಿರೀಕ್ಷಕರು-1 ಅವರು ಸಿಬ್ಬಂದಿ ಮಂಗಳೂರು ದಕ್ಷಿಣ ವಲಯ-1 ವ್ಯಾಪ್ತಿಯ, ಕದ್ರಿ, ಲೋಬೊ ಲೇನ್, ಎಂಬಲ್ಲಿ ಮೈಕಲ್, ಬ್ಲೈಸ್ ಮಿನೀಜಸ್ ಎಂಬುವವರ ಮನೆ ಮೇಲೆ ದಾಳಿ ಮಾಡಿ ಆರೋಪಿ ಮನೆಯಲ್ಲಿ ಸಂಗ್ರಹಿಸಿದ್ದ ನಕಲಿ ವೈನ್ – 238.500 ಲೀಟರ್, ವೈನ್ ತಯಾರಿಸುವ ಕೊಳೆ 1,500 ಲೀಟರ್, ಮದ್ಯ – 3.180 ಲೀಟರ್, ನಕಲಿ ವೈನ್ ತಯಾರಿಸುವ ಸಲಕರಣೆಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಆರೋಪಿ ವಿರುದ್ಧ ಅಬಕಾರಿ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಿಕೊಂಡು ಅಬಕಾರಿ ಉಪ ನಿರೀಕ್ಷಕ ಹರೀಶ್ ಪಿ. ಅವರು ದಾಖಲಿಸಿಕೊಂಡಿದ್ದಾರೆ. ವಶಕ್ಕೆ ಪಡೆದ ಸ್ವತ್ತಿನ ಅಂದಾಜು ಮೌಲ್ಯ ರೂ. 5,57 ಲಕ್ಷ ಆಗಿದೆ ಎಂದು ಪ್ರಕಟಣೆ ತಿಳಿಸಲಾಗಿದೆ.