ಮಂಗಳೂರು: ಪ್ರೊಡಕ್ಟಿವಿಟಿ ಕೌನ್ಸಿಲ್ ಹಾಗೂ ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್ ಆಶ್ರಯದಲ್ಲಿ ರೆಡ್ ಕ್ರಾಸ್ ಪ್ರೇರಣಾ ಹಾಲ್‌ನಲ್ಲಿ ಮಂಗಳೂರಿನಲ್ಲಿ ಕೋಸ್ಟಲ್ ಎಂಎಸ್‌ಎಂಇ ಮತ್ತು ಸ್ಟಾರ್ಟ್‌ಅಪ್ ಕಾನ್ ಕ್ಲೇವ್ 2025 ಅನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಸ್ಪೀಕರ್ ಯು ಟಿ ಖಾದರ್ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರಿನ ಎಫ್‌ಐಸಿಸಿಐ ಅಧ್ಯಕ್ಷ ಸಿಎ ಕೆ ಉಲ್ಲಾಸ್ ಕಾಮತ್ ವಹಿಸಿದ್ದರು.
ಕರ್ಣಾಟಕ ಬ್ಯಾಂಕ್ ಸ್ವತಂತ್ರ ನಿರ್ದೇಶಕ ಜೀವನದಾಸ್ ನಾರಾಯಣ್ , ಆದಾಯ ತೆರಿಗೆ ಆಯುಕ್ತ ಎಸ್ ರೆಂಗಾ ರಾಜನ್, ಮಂಗಳೂರಿನ ಕೆನರಾ ಬ್ಯಾಂಕ್ ವೃತ್ತ ಕಚೇರಿ ಜನರಲ್ ಮ್ಯಾನೇಜರ್ ಮತ್ತು ವೃತ್ತ ಮುಖ್ಯಸ್ಥ ಮಂಜುನಾಥ್ ಬಿ. ಸಿಂಗೈ, ಕಾನ್ ಕ್ಲೇವ್ ನಿರ್ದೇಶಕ ಸಿಎ ಎಸ್.ಎಸ್. ನಾಯಕ್, ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಅಧ್ಯಕ್ಷ ಭಾಸ್ಕರ್ ರೈ ಕಟ್ಟಾ, ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ಅಧ್ಯಕ್ಷ ಯು. ರಾಮರಾವ್, ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಕಾರ್ಯದರ್ಶಿ ಆರ್.ಟಿ.ಎನ್. ವಿಕಾಸ್ ಕೋಟ್ಯಾನ್, ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಮುಖ್ಯ ಸಂಯೋಜಕ ಡಾ. ದೇವದಾಸ್ ರೈ ಮತ್ತು ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ಕಾರ್ಯದರ್ಶಿ ಪಿ. ತಾಂತ್ರಿಕ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸಿಎ ಕೆ ಉಲ್ಲಾಸ್ ಕಾಮತ್ , ಕಾರ್ತಿಕ್ ಎಸ್ ರೈ, ಡಾ. ಎ.ಪಿ. ಆಚಾರ್, ,ಸಿಎ ಜಿಬಿ ಮೋದಿ, ಸಿಎ ಸಂಕೇತ್ ಎಸ್ ನಾಯಕ್, ಸಿಎಸ್ ಚೇತನ್ ನಾಯಕ್ ಕೆ, ಸತೀಶ್ ಮಾಬೆನ್, ಮಹೇಶ್ ಕುಮಾರ್ ಯು, ಡಾ. ಶಿವಕುಮಾರ್ ಮಗದ, ಡಾ. ರಶ್ಮಿ ಆರ್ ಭಾಗವಹಿಸಿದ್ದರು.
ಎಂಆರ್‌ಪಿಎಲ್ ಜಿಎಂ ಗಣೇಶ್ ಭಂಡಾರಿ, , ಕರ್ಣಾಟಕ ಬ್ಯಾಂಕ್ ಡಿಜಿಎಂ ಶ್ರೀನಿವಾಸ್ ಎಸ್ ದಂಡಾಪುರ, ಬ್ಯಾಂಕ್ ಆಫ್ ಬರೋಡಾ ಡಿಜಿಎಂ ರಮೇಶ್ ಕಾನಡೆ, ಯೂನಿಯನ್ ಬ್ಯಾಂಕ್ ಡಿಜಿಎಂ ನರಸಿಂಹ ಕುಮಾರ್ ಆರ್, ಕೆನರಾ ಬ್ಯಾಂಕ್ ಎಜಿಎಂ ಸಂಜಯ್ ಕುಮಾರ್ ಸಿಂಗ್, ಬ್ಯಾಂಕ್ ಆಫ್ ಮಹಾರಾಷ್ಟ್ರದ ಜೆಡ್ ಎಂ ಸುಚೇತ್ ಡಿಸೋಜ ಹುಬ್ಬಳ್ಳಿ , ಎಸ್‌ಐಡಿಬಿಐ ಸಹಾಯಕ ವ್ಯವಸ್ಥಾಪಕ ವೈಸಾಗ್‌ಎಂ ನಾಯರ್, ಎನ್‌ಎಸ್‌ಐಸಿ -ಬೆಳಗಾವಿ ಎಚ್. ರುದ್ರಸ್ವಾಮಿ, ಎಸ್‌ವಿಸಿ ಬ್ಯಾಂಕ್ ಗಾಯತ್ರಿ ಅನಿಲ್ ಕುಮಾರ್ ಇದ್ದರು. 400ಕ್ಕೂ ಅಧಿಕ ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಾವೀನ್ಯತೆ, ನಾಯಕತ್ವ, ಸಮರ್ಪಣೆ ಮತ್ತು ಬದ್ಧತೆಯ ಮೂಲಕ ಆಯಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ 29 ಎಂಎಸ್‌ಎಂಇಗಳನ್ನು ಗುರುತಿಸಿ ಗೌರವಿಸಲಾಯಿತು. ಪ್ರಶಸ್ತಿಸಮಾರಂಭದಲ್ಲಿ ನಂದಗೋಕುಲ ನೃತ್ಯ ಅಕಾಡೆಮಿಯ ಶ್ವೇತಾ ಅರೆಹೊಳೆ ಮತ್ತು ತಂಡದಿಂದ ಅನೇಕ ಸಾಂಸ್ಕೃತಿಕ ಪ್ರದರ್ಶನಗಳು ನಡೆದವು.
ಕರ್ಣಾಟಕ ಬ್ಯಾಂಕ್ ನ ಸಿಬಿಒ ಚಂದ್ರಶೇಖರ್ ಮಯ್ಯ ಉದ್ಘಾಟಿಸಿದರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಡಿಜಿಎಂ ನರಸಿಂಹ ಕುಮಾರ್, ಎಂಆರ್‌ಪಿಎಲ್ ಗ್ರೂಪ್ ಜಿಎಂ ಡಾ. ಪ್ರಶಾಂತ್ ಶಂಕರ್ ಪೊದುವಾಲ್ , ಕೆನರಾ ಬ್ಯಾಂಕ್ ಡಿಜಿಎಂ ಶೈಲೇಂದ್ರ ನಾಥ್ ಶೇಟ್ , ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ, ಎಸ್ವಿಸಿ ಬ್ಯಾಂಕ್ ಕ್ಲಸ್ಟರ್ ಮುಖ್ಯಸ್ಥ ಸೂರಜ್ ಎಸ್ ಶೇಟ್ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರದ ವಲಯ ಮುಖ್ಯಸ್ಥ ಸುಚಿತ್ ಡಿಸೋಜ ಮುಖ್ಯ ಅತಿಥಿಗಳಾಗಿ ಇದ್ದರು.