ಯಾದಗಿರಿ: ಸಿಡಿಪಿಒ ವನಜಾಕ್ಷಿ ಅವರು ಅಂಗನವಾಡಿ ಸಹಾಯಕಿಯೊಬ್ಬರ ಗೈರು ಹಾಜರಾತಿ ಸಕ್ರಮಕ್ಕೆ ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು, ಇದಕ್ಕೆ ಸಂಬಂಧಿಸಿದಂತೆ 80 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ಬಂಧನ ಮಾಡಿದ್ದಾರೆ.
ಗೈರು ಹಾಜರಿ ಸರಿಪಡಿಸಿ ವೇತನ ಬಿಡುಗಡೆ ಮಾಡಲು ಸಿಡಿಪಿಒ ಲಂಚಕ್ಕೆ ಬೇಡಿಕೆ ಇಟ್ಟು, ಪಡೆಯುವಾಗ ಲೋಕಾ ಅಧಿಕಾರಿಗಳ ಕೆಡ್ಡಾಕ್ಕೆ ಬಿದ್ದಿದ್ದಾರೆ. ಯಾದಗಿರಿ ಬಸ್ ನಿಲ್ದಾಣದ ಸಮೀಪ ಲಂಚ ಪಡೆಯುವಾಗಲೇ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಯಾದಗಿರಿ ಲೋಕಾಯುಕ್ತ ಡಿವೈಎಸ್ಪಿ ಜೆ.ಎಚ್.ಇನಾಮದಾರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಇನ್ ಸ್ಪೆಕ್ಟರ್ ಸಿದ್ದರಾಯ, ಸಂಗಮೇಶ ಹಾಗೂ ಲೋಕಾಯುಕ್ತ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಇದ್ದರು.