Breaking News

ಸ್ಯಾಮ್‌ಸಂಗ್ ಚಾಂಪಿಯನ್ ಪ್ರಶಸ್ತಿ ಬಾಚಿಕೊಂಡ ಇಕೋ ಟೆಕ್ ಇನ್ನೋವೇಟರ್, ಮೆಟಲ್ ತಂಡ

 

ಉಡುಪಿ : ಸ್ಯಾಮ್‌ಸಂಗ್ ಇಂಡಿಯಾ ಕಂಪನಿ ಪ್ರಮುಖ ರಾಷ್ಟ್ರೀಯ ಶಿಕ್ಷಣ ಮತ್ತು ನಾವೀನ್ಯತೆಯ ಸ್ಪರ್ಧೆ ‘ಸಾಲ್ವ್ ಫಾರ್ ಟುಮಾರೋ ಈ ವರ್ಷದ 3ನೇ ಆವೃತ್ತಿ ವಿಜೇತರನ್ನು ಸ್ಯಾಮ್ ಸಂಗ್ ಘೋಷಿಸಿದ್ದು, ಇಕೋ ಟೆಕ್ ಇನ್ನೋವೇಟರ್ ಮತ್ತು ಮೆಟಲ್ ತಂಡಗಳು ಪ್ರಶಸ್ತಿ ಬಾಚಿಕೊಂಡಿವೆ.

ಅಸ್ಸಾಂನ ಗೋಲಾಘಾಟ್‌ ಇಕೋ ಟೆಕ್ ಇನ್ನೋವೇಟರ್ ತಂಡವು ಸ್ಕೂಲ್ ಟ್ರ್ಯಾಕ್‌ ವಿಭಾಗದಲ್ಲಿ ಕಮ್ಯೂನಿಟಿ ಸಮುದಾಯ ಚಾಂಪಿಯನ್ ಪ್ರಶಸ್ತಿ ಗಳಿಸಿದೆ. ಉಡುಪಿಯ ಮೆಟಲ್ ತಂಡವು ಯೂತ್ ಟ್ರ್ಯಾಕ್‌ ನಲ್ಲಿ ಎನ್ವಿರಾನ್‌ಮೆಂಟ್ ಚಾಂಪಿಯನ್ ಷಿಪ್‌ ಪ್ರಶಸ್ತಿ ಪಡೆದುಕೊಂಡಿದೆ. ಈ ಪ್ರಶಸ್ತಿಯು ಭಾರತೀಯ ನಗರಗಳಲ್ಲಿನ ಈ ಕಾರ್ಯಕ್ರಮದ ವಿಸ್ತಾರವನ್ನು ತೋರಿಸಲು ಯಶಸ್ವಿ ಆಗಿದೆ.

ಎಲ್ಲರಿಗೂ ಕಲುಷಿತ ಆಗಿರದ ಕುಡಿವ ನೀರಿನ ಲಭ್ಯತೆ ಕುರಿತ ಪರಿಕಲ್ಪನೆಯನ್ನು ಅಭಿವೃದ್ಧಿ ಪಡಿಸಿದ ಇಕೋ ಟೆಕ್ ಇನ್ನೋವೇಟರ್ ತಂಡವು ಮೂಲ ಮಾದರಿ ಅಭಿವೃದ್ಧಿಗಾಗಿ ರೂಪಾಯಿ 25 ಲಕ್ಷಗಳ ಅನುದಾನವನ್ನು ಪಡೆದುಕೊಂಡಿದೆ. ಅಂತರ್ಜಲದಿಂದ ಆರ್ಸೆನಿಕ್ ತೊಡೆಯುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ಮೆಟಲ್ ತಂಡವು ನವದೆಹಲಿ ಐಐಟಿಯಲ್ಲಿ ಇನ್ ಕ್ಯುಬೇಷನ್ ಗಾಗಿ ರೂ. 50 ಲಕ್ಷಗಳ ಅನುದಾನವನ್ನು ಪಡೆಯಿತು. ಸ್ಯಾಮ್‌ ಸಂಗ್ ಸೌತ್‌ ವೆಸ್ಟ್ ಏಷ್ಯಾದ ಅಧ್ಯಕ್ಷ ಮತ್ತು ಸಿಇೊ ಜೆಬಿ ಪಾರ್ಕ್ ಮತ್ತು ಭಾರತದಲ್ಲಿನ ವಿಶ್ವಸಂಸ್ಥೆಯ ರೆಸಿಡೆಂಟ್ ಕೋ ಆರ್ಡಿನೇಟರ್ ಶೋಂಬಿ ಶಾರ್ಪ್ ಅವರು ಈ ತಂಡಗಳಿಗೆ ಪ್ರಮಾಣ ಪತ್ರ ಮತ್ತು ಟ್ರೋಫಿ ಪ್ರದಾನ ಮಾಡಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com