Breaking News

ಚೆನ್ನೈ: ದಸರಾ ಹಬ್ಬದ ಉಡುಗೊರೆಯಾಗಿ ಸಿಬ್ಬಂದಿಗೆ ಬೆಂಜ್ ಕಾರು, ಬೈಕ್ ಗಿಫ್ಟ್

 

ಚೆನ್ನೈ:  ಟೀಮ್ ಡಿಟೇಲಿಂಗ್ ಸೊಲೂಷನ್ಸ್ ಕಂಪನಿ ತನ್ನ ಉದ್ಯೋಗಿಗಳಿಗೆ ದಸರಾ ಹಬ್ಬದ ಉಡುಗೊರೆಯಾಗಿ 28 ಮಂದಿಗೆ ಬೆಂಜ್ ಕಾರು ಮತ್ತು  ಬೈಕ್‌  ಗಿಫ್ಟ್ ನೀಡಿದ್ದಾರೆ .

ಉದ್ಯೋಗಿಗಳಿಗೆ ದಸರಾ ಹಬ್ಬಕ್ಕೆ ಬೋನಸ್ ರೂಪದಲ್ಲಿ ಕೊಡುಗೆ ನೀಡುವ ಮೂಲಕ ಕೆಲಸದಲ್ಲಿ ಕಾರ್ಯಕ್ಷಮತೆ ಹೆಚ್ಚಿಸುವ ಗುರಿ ಹೊಂದಲಾಗಿದೆ. 2005 ರಲ್ಲಿ ಆರಂಭಗೊಂಡಿರುವ ಟೀಂ ಡಿಟೇಲಿಂಗ್ ಸೊಲೂಷನ್ಸ್ ರಚನಾತ್ಮಕ ಉಕ್ಕಿನ ವಿನ್ಯಾಸ ಮತ್ತು ಡಿಟೇಲಿಂಗ್ ಸೇವೆ ನೀಡುತ್ತಿದೆ.

ಕಂಪನಿ ಉದ್ಯೋಗಿಗಳ ಕೊಡುಗೆಯನ್ನು ಅವರ ಕಾರ್ಯಕ್ಷಮತೆ, ವರ್ಷಗಳ ಸೇವೆ ಆಧಾರದ ಮೇಲೆ ಮೌಲ್ಯಮಾಪನ ಮಾಡಿದೆ. ನಮ್ಮ ಉದ್ಯೋಗಿಗಳು ಅಸಾಧಾರಣ ಬದ್ಧತೆ ಮತ್ತು ಸಮರ್ಪಣೆ ಪ್ರದರ್ಶನ ಮಾಡಿದ್ದಾರೆ. ಅವರ ಸಾಧನೆಗಳನ್ನು ಗುರುತಿಸಲು ಹೆಮ್ಮೆ ಆಗುತ್ತದೆ. ಅವರಿಗೆ ನೀಡುವ ಕೊಡುಗೆ ಖುಷಿ ತಂದಿದೆ ಎಂದು ಕಂಪನಿ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ಕಣ್ಣನ್ ತಿಳಿಸಿದ್ದಾರೆ.

  1.  

Leave a Reply

Your email address will not be published. Required fields are marked *