Breaking News

ಸಿರಸಿ ನಗರ ಠಾಣೆಯ ಪೊಲೀಸರ ಮಿಂಚಿನ ಕಾರ್ಯಾಚರಣೆ, ಅಕ್ರಮ ಗಾಂಜಾ, ಚರಸ್ ಮಾರಾಟ, ವ್ಯಕ್ತಿಯ ಬಂಧನ

 

ಸಿರಸಿ: ಇಲ್ಲಿನ ಭೀಮನಗುಡ್ಡ ಅರಣ್ಯ ಪ್ರದೇಶದ ಹತ್ತಿರದಲ್ಲಿ ಅಕ್ರಮವಾಗಿ ಗಾಂಜಾ ಮತ್ತು ಚರಸ್  ಮಾರಾಟ ಮಾಡುತ್ತಿದ್ದ  ವ್ಯಕ್ತಿಯನ್ನು ಸಿರಸಿ ನಗರ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.

ಬಂಧಿತ ವ್ಯಕ್ತಿಯ ಮಂಗಳೂರು ಶಕ್ತಿನಗರದ ವಿಕ್ರಮ ದೇವದಾಸ್ ಶೆಟ್ಟಿ ಎಂದು ತಿಳಿದು ಬಂದಿದೆ.  ಇತನನ್ನು ಗಾಂಜಾ ಮತ್ತು ಚರಸ್ ಸಾಗಣೆ ಮಾಡಿ  ತಂದು ಭೀಮನಗುಡ್ಡದ ಅರಣ್ಯ ಪ್ರದೇಶದ ಬಳಿ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ಅತಿಥಿಯಾಗಿದ್ದಾನೆ. 12 ಸಾವಿರ ಮೌಲ್ಯದ 115 ಗ್ರಾಂ  ಗಾಂಜಾ ಹಾಗೂ  50,000 ರೂ ಮೌಲ್ಯದ 25 ಗ್ರಾಂ ಚರಸ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರುತಿ ಅಲ್ಟೊ ಕಾರು, ಚಿಲುಮೆ, ರೋಲಿಂಗ್ ಪೆಪರ್, ಗಾಂಜಾ ಕ್ರಷರ್ ಡಬ್ಬ ಮತ್ತು 4,450 ರೂ ನಗದು ಹಣವನ್ನು  ವಶಕ್ಕೆ ಪಡೆದು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿವೈಎಸ್ ಪಿ ಗಣೇಶ್ ಕೆ. ಎಲ್ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ್ , ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಟಿ ಜಯಕುಮಾರ್, ಜಗದೀಶ್ ಎಂ, ಸಿರಸಿ ಉಪ ವಿಭಾಗದ ಡಿಎಸ್ಪಿ ಗಣೇಶ ಕೆ ‌ಎಲ್, ಸಿರಸಿ ಇನ್ ಸ್ಪೆಕ್ಟರ್ ಶಶಿಕಾಂತ ವರ್ಮಾ ರವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸಿರಸಿ ನಗರ ಠಾಣೆಯ ಪಿಎಸ್ಐ ನಾಗಪ್ಪ ತಿಳಿಸಿದ್ದಾರೆ.

ಕಾರ್ಯಾಚರಣೆಯ ನೇತೃತ್ವವನ್ನು ನಗರ ಠಾಣೆ ಪಿಎಸ್ ಐ ನಾಗಪ್ಪ ವಹಿಸಿದ್ದರು.  ಸಿಬ್ಬಂದಿ ಹನುಮಂತ ಕಬಾಡಿ, ಮಲ್ಲಿಕಾರ್ಜುನ ಕುದರಿ, ಅರುಣ ಲಮಾಣಿ, ಮಂಜುನಾಥ ಕಾಶಿಕೋವಿ, ಸದ್ದಾಂ ಹುಸೇನ್, ಪ್ರವೀಣ್ ಎನ್, ರಾಜಶೇಖರ ಅವರು ಇದ್ದರು. ಪಿಎಸ್ಐ ಮಹಾಂತಪ್ಪ ಕುಂಬಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಸಿರಸಿ ನಗರ ಠಾಣೆಯ ಪೊಲೀಸರ ಕಾರ್ಯಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  1.  

Leave a Reply

Your email address will not be published. Required fields are marked *