Breaking News

ಶಾರದೆಯ ಅಂಗಳ ಶಾರದಾ ವಿದ್ಯಾನಿಕೇತನದಲ್ಲಿ ಶಾರದೋತ್ಸವ ಸಂಭ್ರಮ, ದಾಂಡಿಯಾ, ಗರ್ಭಾ ನೃತ್ಯಗಳ ಸೊಗಡು

 

ಮಂಗಳೂರು: ನಾಡ ಹಬ್ಬ ದಸರಾದ ಶುಭ ಗಳಿಗೆಯಲ್ಲಿ ಶಾರದಾ ಪೂಜೆ ಭಕ್ತಿ ಭಾವಗಳೊಂದಿಗೆ ವಿಜೃಂಭಣೆಯಿಂದ ಆಚರಿಸುವುದು ಶಾರದಾ ವಿದ್ಯಾನಿಕೇತನದಲ್ಲಿ ನಡೆದುಕೊಂಡ ಬಂದ ಸಂಪ್ರದಾಯ.

ಶಾರದಾ ವಿದ್ಯಾನಿಕೇತನ ದೇವಿನಗರ ತಲಪಾಡಿ ಇಲ್ಲಿನ ಭೂ ವರಾಹ ಸಭಾಂಗಣದಲ್ಲಿ ತಾಯಿ ಶಾರದೆಗೆ ಹೂವಿನ ಮಂಟಪವನ್ನು ನಿರ್ಮಿಸಿ ಅದರ ಮಧ್ಯದಲ್ಲಿ ತಾಯಿ ಶಾರದೆಯ ಅಮೃತಶಿಲೆಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಸಂಭ್ರಮದಿಂದ ,ಭಕ್ತಿ ಭಾವದಿಂದ ಮನಪೂರ್ವಕವಾಗಿ ಪೂಜಿಸಿ ಭಕ್ತಿ ಸಾಗರದಲ್ಲಿ ವಿದ್ಯಾರ್ಥಿಗಳು ಮುಳುಗಿದರು.

ಶಾರದಾ ವಿದ್ಯಾನಿಕೇತನದ ವಸತಿ ನಿಲಯದ ಪ್ರೌಢಶಾಲಾ ವಿದ್ಯಾರ್ಥಿಗಳು ಪಿಯುಸಿ ಕಾಲೇಜು ವಿದ್ಯಾರ್ಥಿಗಳು ಮತ್ತು ಶಾರದಾ ಪದವಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಾರದಾ ನ್ಯಾಚುರೋಪತಿ ವಿದ್ಯಾರ್ಥಿಗಳು ಪ್ರತ್ಯೇಕ ಪ್ರತ್ಯೇಕವಾಗಿ ಭಜನಾ ತಂಡದೊಂದಿಗೆ ಈ ಕಾರ್ಯಕ್ರಮದಲ್ಲಿ ಶಾರದೆಯನ್ನು ವೈಶಿಷ್ಟ ಪೂರ್ಣವಾಗಿ ಪೂಜಿಸಿ ಭಕ್ತಿಯ ವಾತಾವರಣವನ್ನು ಇಮ್ಮಡಿಗೊಳಿಸಿದರು.

ಭಜನೆ ನಂತರ ತಾಯಿಗೆ ಮಂಗಳಾರತಿ ಬೆಳಗಿ ಪುಷ್ಪಾರ್ಚನೆಯನ್ನು ಸಲ್ಲಿಸಲಾಯಿತು. ಪಿಯುಸಿ ಕಾಲೇಜಿನ ವಿದ್ಯಾರ್ಥಿನಿಯರಿಂದ ಮತ್ತು ಉಪನ್ಯಾಸಕರಿಂದ ಗುಜರಾತಿನ ನವರಾತ್ರಿಯ ವಿಶೇಷ ನೃತ್ಯ ಗರ್ಭಾ , ದಾಂಡಿಯಾ ನೃತ್ಯವನ್ನು ಆಯೋಜಿಸಲಾಗಿತ್ತು.

ಬಹಳ ಸುಂದರವಾಗಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಗರ್ಭಾ ಹಾಗೂ ದಾಂಡಿಯಾ ನೃತ್ಯವನ್ನು ಮಾಡಿ ಪ್ರೇಕ್ಷಕರ ಮನ ಗೆದ್ದರು. ತಾಯಿ ಶಾರದೆಯ ಕೃಪೆಗೂ ಪಾತ್ರರಾದರು. ಗರ್ಭ ನೃತ್ಯವನ್ನು ಪಿಯುಸಿ ಕಾಲೇಜಿನ ಹಿರಿಯ ಗಣಿತ ಉಪನ್ಯಾಸಕ ವಿನೋದ್ ವ್ಯಾಸ್ ಮತ್ತು ಅವರ ಪತ್ನಿ ತರಬೇತುಗೊಳಿಸಿದ್ದರು. ವಿದ್ಯಾರ್ಥಿಗಳ ಜತೆಗೆ ಸಹೋದ್ಯೋಗಿಗಳೊಂದಿಗೆ ತಾವು ನೃತ್ಯ ಮಾಡಿದ್ದು, ಎಲ್ಲರೂ ಅಚ್ಚರಿಪಡುವಂತಿತ್ತು.

ಸಂಸ್ಥೆ ಅಧ್ಯಕ್ಷ ಡಾ. ಎಂ. ಬಿ. ಪುರಾಣಿಕ್ ಮತ್ತು ಅವರ ಪತ್ನಿ ಸುನಂದಾ ಪುರಾಣಿಕ್, ನಿರ್ದೇಶಕ ಸಮೀರ್ ಪುರಾಣಿಕ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೃತ್ಯ ಕಾರ್ಯಕ್ರಮಗಳನ್ನು ಮೆಚ್ಚಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ಸಂಸ್ಥೆಯ ಅಧಿಕಾರಿಗಳಾದ ವಿವೇಕ್ ತಂತ್ರಿ ಹಾಗೂ ಸಂಸ್ಥೆಗಳ ಪ್ರಾಂಶುಪಾಲರು ಉಪನ್ಯಾಸಕರು , ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

  1.  

Leave a Reply

Your email address will not be published. Required fields are marked *