Breaking News

ಮಂಗಳೂರು ಕೆಎಸ್ ಆರ್ ಟಿಸಿ ದಸರಾ ವಿಶೇಷ ಪ್ರವಾಸಕ್ಕೆ ಪ್ರಯಾಣಿಕರಿಂದ ಭರ್ಜರಿ ರೆಸ್ಪಾನ್ಸ್, 24 ಬಸ್ ಗಳ ಕಾರ್ಯಾಚರಣೆ: ಡಿಸಿ ರಾಜೇಶ್ ಶೆಟ್ಟಿ

 

ಮಂಗಳೂರು: ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ದಸರಾ ಅಂಗವಾಗಿ ಹಮ್ಮಿಕೊಂಡಿರುವ ದಸರಾ ವಿಶೇಷ ಪ್ರವಾಸದ ಪ್ಯಾಕೇಜ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 24 ಬಸ್‌ಗಳು ಕಾರ್ಯನಿರ್ವಹಣೆ ಮಾಡುತ್ತಿವೆ. 2022 ರಲ್ಲಿ ಒಂದೇ ದಿನದಲ್ಲಿ 22 ಬಸ್‌ಗಳ ಕಾರ್ಯನಿರ್ವಹಣೆ ಮಾಡುತ್ತಿದ್ದವು. ಆದರೆ ಹಿಂದಿನ ದಾಖಲೆಯನ್ನು ಮುರಿದಿದ್ದು, 1,119 ಪ್ರಯಾಣಿಕರು ದಸರಾ ಪ್ಯಾಕೇಜ್‌ ಅನ್ನು ಬಳಸಿಕೊಂಡು ವಿವಿಧ ಪ್ರವಾಸಿ ಸ್ಥಳಗಳಿಗೆ ಪ್ರಯಾಣ ಮಾಡಿದ್ದಾರೆ.

ಮಂಗಳೂರಿನಿಂದ ಮಡಿಕೇರಿಗೆ 350 ಪ್ರಯಾಣಿಕರಿದ್ದ ಏಳು ಬಸ್‌ಗಳು, ಮಂಗಳೂರು-ಕೊಲ್ಲೂರು ಪ್ಯಾಕೇಜ್‌ನಲ್ಲಿ 400 ಪ್ರಯಾಣಿಕರಿದ್ದ ಎಂಟು ಬಸ್‌, ಮಂಗಳೂರು-ಮುರ್ಡೇಶ್ವರ ಪ್ಯಾಕೇಜ್‌ನಲ್ಲಿ 150 ಪ್ರಯಾಣಿಕರಿರುವ ಮೂರು ಬಸ್‌ಗಳು ಮತ್ತು 120 ಪ್ರಯಾಣಿಕರೊಂದಿಗೆ ನಾಲ್ಕು ಬಸ್‌ಗಳು ಸಂಚಾರ ಮಾಡುತ್ತಿವೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ತಿಳಿಸಿದರು.

ಉಡುಪಿ- ಕೊಲ್ಲೂರು ಪ್ಯಾಕೇಜ್‌ನ ಒಂದು ಬಸ್‌ನಲ್ಲಿ 46 ಪ್ರಯಾಣಿಕರು ಪ್ರಯಾಣಿಸುತ್ತಿದ್ದರೆ, ಇನ್ನೊಂದು ಬಸ್‌ನಲ್ಲಿ 53 ಪ್ರಯಾಣಿಕರು ಉಡುಪಿ- ಇಡಗುಂಜಿ ಪ್ಯಾಕೇಜ್‌ನಲ್ಲಿ ಪ್ರಯಾಣ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

  1.  

ಮಂಗಳೂರು ದಸರಾ ನವದುರ್ಗ ದರ್ಶನ ಪ್ಯಾಕೇಜ್ : ಮಂಗಳೂರು ಬಸ್ ನಿಲ್ದಾಣದಿಂದ ಬೆಳಿಗ್ಗೆ 8 ಗಂಟೆಗೆ ಹೊರಟು, ಮಂಗಳಾದೇವಿ ದೇವಸ್ಥಾನ – ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ – ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ – ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – (ಮಧ್ಯಾಹ್ನದ ಊಟ) – ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ ಹಾಗೂ ಬೀಚ್ – ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಶ್ರೀ ಉರ್ವ ಮಾರಿಯಮ್ಮ ದೇವಸ್ಥಾನ (ಸಂಜೆ ಉಪಹಾರ) – ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ, ನವದುರ್ಗಾ ದರ್ಶನ ರಾತ್ರಿ 8 ಗಂಟೆಗೆ ಮಂಗಳೂರು ಬಸ್ಸ್ ನಿಲ್ದಾಣಕ್ಕೆ ಹಿಂದಿರುಗಲಾಗುತ್ತದೆ. – ಒಟ್ಟು ಪ್ರಯಾಣ ದರ (ಊಟ, ಉಪಹಾರ ಹೊರತುಪಡಿಸಿ) ವಯಸ್ಕರಿಗೆ ರೂ.400/- ಮಕ್ಕಳಿಗೆ (6 ವರ್ಷದಿಂದ 12 ವರ್ಷದವರಿಗೆ) ರೂ.300 ಪ್ರಯಾಣ ದರ ನಿಗದಿಪಡಿಸಲಾಗಿದೆ ಎಂದರು.

ಮಡಿಕೇರಿ ಪ್ಯಾಕೇಜ್ ಪ್ರವಾಸ : ಮಂಗಳೂರಿನಿಂದ ಬೆಳಿಗ್ಗೆ 7ಗಂಟೆಗೆ ಹೊರಟು -ಮಡಿಕೇರಿ-ರಾಜಾಸೀಟ್-ಅಬ್ಬಿಫಾಲ್ಸ್-ನಿಸರ್ಗಧಾಮ- ಗೋಲ್ಡನ್ ಟೆಂಪಲ್ ಪ್ರವಾಸ ಕೈಗೊಂಡು ರಾತ್ರಿ 9ಗಂಟೆಗೆ ಮಂಗಳೂರು ಬಸ್ಸ್‍ನಿಲ್ದಾಣಕ್ಕೆ ಹಿಂದಿರುಗಲಾಗುತ್ತದೆ. (ಊಟ, ಉಪಹಾರ ಹೊರತುಪಡಿಸಿ) ವಯಸ್ಕರಿಗೆ ರೂ.500 ಮಕ್ಕಳಿಗೆ (6ವರ್ಷದಿಂದ 12 ವರ್ಷದವರಿಗೆ) ರೂ.400 ರೂಪಾಯಿ ನಿಗದಿ ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಂಗಳೂರು-ಕೊಲ್ಲೂರು ಪ್ಯಾಕೇಜ್ ಪ್ರವಾಸ : ಮಂಗಳೂರು ಬಸ್ ನಿಲ್ದಾಣದಿಂದ ಬೆಳಿಗ್ಗೆ 8 ಗಂಟೆಗೆ ಹೊರಟು – ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ – ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ (ಮಧ್ಯಾಹ್ನದ ಊಟ) – ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ – ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಪ್ರವಾಸ ಕೈಗೊಂಡು ರಾತ್ರಿ 7ಗಂಟೆಗೆ ಮಂಗಳೂರು ಬಸ್ಸ್ ನಿಲ್ದಾಣಕ್ಕೆ ಹಿಂದಿರುಗಲಾಗುತ್ತದೆ. (ಊಟ, ಉಪಹಾರ ಹೊರತುಪಡಿಸಿ) ವಯಸ್ಕರಿಗೆ ರೂ.500/- ಮಕ್ಕಳಿಗೆ (6ವರ್ಷದಿಂದ 12 ವರ್ಷದವರಿಗೆ) ರೂ 400 ರೂಪಾಯಿ ದರ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಂಗಳೂರು-ಮುರುಡೇಶ್ವರ ಟೂರ್ ಪ್ಯಾಕೇಜ್ ಮಂಗಳೂರು ಬಸ್‍ನಿಲ್ದಾಣ ದಿಂದ ಬೆಳಿಗ್ಗೆ 7ಗಂಟೆಗೆ ಹೊರಟು – ಮುರುಡೇಶ್ವರ ದೇವಸ್ಥಾನ – ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಕುಂಭಾಶಿ – ಆನೆಗುಡ್ಡೆ ಗಣಪತಿ ದೇವಸ್ಥಾನ ಕುಂಭಾಶಿ – ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಪ್ರವಾಸ ಕೈಗೊಂಡು ರಾತ್ರಿ 7ಗಂಟೆಗೆ ಮಂಗಳೂರು ಬಸ್ಸ್ ನಿಲ್ದಾಣಕ್ಕೆ ಹಿಂದಿರುಗಲಾಗುತ್ತದೆ. (ಊಟ, ಉಪಹಾರ ಹೊರತುಪಡಿಸಿ) ವಯಸ್ಕರಿಗೆ ರೂ.550  ಮಕ್ಕಳಿಗೆ (6 ವರ್ಷದಿಂದ 12 ವರ್ಷದವರಿಗೆ) ರೂ.450 ರೂಪಾಯಿ ದರ ನಿಗದಿ ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

  1.  

Leave a Reply

Your email address will not be published. Required fields are marked *