Breaking News

ನೈಜೇರಿಯಾ ಪ್ರಜೆಯಿಂದ 6 ಕೋಟಿ ಮೌಲ್ಯ 6 ಕೆ.ಜಿ ಡ್ರಗ್ಸ್ ವಶ: ಕಮಿಷನರ್ ಅನುಪಮ್ ಅಗ್ರವಾಲ್

 

ಮಂಗಳೂರು: ಇಲ್ಲಿನ ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ನೈಜೀರಿಯಾ ಪ್ರಜೆಯನ್ನು ವಶಕ್ಕೆ ಪಡೆದು, ಬರೋಬ್ಬರಿ 6 ಕೋಟಿ ರೂಪಾಯಿ ಮೌಲ್ಯದ ಆರು ಕೆ.ಜಿಗೂ ಅಧಿಕ ಎಂಡಿಎಂಎ ಡ್ರಗ್ಸ್‌ ವಶ ಪಡಿಸಿಕೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಂಗಳೂರು ಕಮಿಷನರೇಟ್ ವ್ಯಾಪ್ತಿ ಇತಿಹಾಸದಲ್ಲಿಯೇ ಇದೊಂದು ದೊಡ್ಡ ಮೌಲ್ಯದ ಡ್ರಗ್ಸ್ ದಂಧೆಯನ್ನು ಬಯಲಿಗೆಳೆದ ಪ್ರಕರಣ ಇದಾಗಿದ್ದು, ಪೊಲೀಸ್ ತಂಡವನ್ನು ಅಭಿನಂದಿಸಲಾಗುವುದು ಎಂದರು.

  1.  

ಆರು ಕೋಟಿ ರೂಪಾಯಿ ಮೌಲ್ಯದ ಆರು ಕೆ.ಜಿಯ ಎಂಡಿಎಂ ಡ್ರಗ್ ವಶಕ್ಕೆ ಪಡೆಯಲಾಗಿದೆ. ವಾರದ ಹಿಂದೆಯಷ್ಟೇ ಹೈದರ್ ಅಲಿ ಎಂಬುವವರನ್ನು ವಶಕ್ಕೆ ಪಡೆದು 15 ಗ್ರಾಂ ಎಂಡಿಎಂ ಡ್ರಗ್ಸ್ ವಶಕ್ಕೆ ಪಡೆಯಲಾಗಿತ್ತು. ಈತನನ್ನ ವಶಕ್ಕೆ ಪಡೆದು ತನಿಖೆ ನಡೆಸಿದಾಗ ಮಾಹಿತಿ ಲಭ್ಯವಾಗಿತ್ತು. ಇದರ ಆಧಾರದ ಮೇಲೆ ಡ್ರಗ್ಸ್ ಧಂದೆಯ ಜಾಡು ಹಿಡಿದು ನೈಜೇರಿಯಾ ಆರೋಪಿಯನ್ನು ಬಂಧನ ಮಾಡಲಾಗಿದೆ ಎಂದರು.

ಆರೋಪಿಯಿಂದ 35 ಡೆಬಿಟ್ ಕಾರ್ಡ್ ಗಳು, 10 ಬ್ಯಾಂಕ್ ಪಾಸು ಪುಸ್ತಕ, 17 ಇನ್ ಆಕ್ಟಿವ್ ಮೊಬೈಲ್ ಸಿಮ್ ಕಾರ್ಡ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಅತನ ಪಾಸ್‌ಪೋರ್ಟ್ ಸಹಿತ ಎಲ್ಲಾ ದಾಖಲೆ ವಶಕ್ಕೆ ಪಡೆಯಲಾಗಿದೆ. ಡ್ರಗ್ಸ್ ಅನ್ನು ಸಣ್ಣ ಪ್ಯಾಕೇಟ್ ಗಳ ಮೂಲಕ ರಾಜ್ಯದ ಹಲವಡೆ ಆತ ಡ್ರಗ್ ಪೂರೈಕೆ ಮಾಡುತ್ತಿದ್ದ. ನಗರದಲ್ಲಿ ಬಿಸ್ಕೇಟ್ ಪಾಕೇಟ್ , ಗುಟ್ಕಾ, ಚಿಪ್ಸ್ ನ ಪಾಕೇಟ್ ಗಳಲ್ಲಿ ಕಸ ಎಸೆಯೋ ಜಾಗದಲ್ಲಿ ಎಸೆದು, ಬಳಿಕ ಪೆಡ್ಲರ್ ಅದರ ಫೋಟೊ ತೆಗೆದು ಪೂರೈಕೆದಾರನಿಗೆ ಮಾಹಿತಿ ರವಾನೆ ಆಗುತ್ತಿತ್ತು. ಅ ಬಳಿಕ ಅವರು ಅಲ್ಲಿಂದ ಅದನ್ನು ತೆಗೆದುಕೊಂಡು ಗ್ರಾಹಕರಿಗೆ ಪೂರೈಕೆ ಮಾಡಲಾಗುತ್ತಿರುವುದು ತನಿಖೆಯಿಂದ ಪತ್ತೆಯಾಗಿದೆ ಎಂದು ತಿಳಿಸಿದರು.

ಮಂಗಳೂರು ನಗರದಲ್ಲಿ 50 ಕ್ಕೂ ಹೆಚ್ಚು ಕಡೆಗೆ ಪಾಕೇಟ್ ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿ ವಿಸಾ ಅವಧಿ ಮುಕ್ತಾಯ ಆಗಿದೆ. ಸಿಸಿಬಿ ತಂಡಕ್ಕೆ ಡಿಜಿಪಿ ಅವರು ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಕಮಿಷನರೇಟ್ ನಿಂದ ಪ್ರತ್ಯೇಕ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಲಾಗುತ್ತದೆ. ಇಷ್ಟು ದೊಡ್ಡ ಮಟ್ಟದ ಡ್ರಗ್ಸ್ ವಶಕ್ಕೆ ಪಡೆದು ಕಾರ್ಯಾಚರಣೆ ನಡೆಸಿದ ತಂಡಕ್ಕೆ ಗೃಹ ಸಚಿವರಿಂದ ಕೂಡ ಪ್ರಶಂಸೆ ವ್ಯಕ್ತವಾಗಿದೆ. ಇದು ರಾಜ್ಯದಲ್ಲಿ ದೊಡ್ಡ ಮಟ್ಟದ ಪತ್ತೆ ಆಗಿರುವ ಪ್ರಕರಣ ಎಂದರು.

  1.  

Leave a Reply

Your email address will not be published. Required fields are marked *