Breaking News

ಟಿವಿ 9 ಲೈಫ್ ಸ್ಟೈಲ್ ಆಟೋಮೊಬೈಲ್, ಫರ್ನಿಚರ್ ಎಕ್ಸ್ಪೋಗೆ ಚಾಲನೆ, ಸಖತ್ ರೆಸ್ಪಾನ್ಸ್

 

ಬೆಂಗಳೂರು: ಖಾಸಗಿ ಟಿವಿ ವಾಹಿನಿ ಟಿವಿ9 ಕನ್ನಡ ಆಯೋಜಿಸಿರುವ ಲೈಫ್ ಸ್ಟೈಲ್ ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋಗೆ ನಟಿ ಸಂಜನಾ ಆನಂದ್ ಮತ್ತು ನಟ ಅನಿರುದ್ಧ್ ಚಾಲನೆ‌ ನೀಡಿದರು.

 

  1.  

ಲೈಫ್ ಸ್ಟೈಲ್ ಆಟೋ ಮೊಬೈಲ್ ಫರ್ನಿಚರ್ ಎಕ್ಸ್ಪೋಗೆ ಬೆಂಗಳೂರಿನಲ್ಲಿ 2023 ರಲ್ಲಿ ಭರ್ಜರಿ ಯಶಸ್ವಿ ಕಂಡಿದೆ.  ಜನ ಸಾಮಾನ್ಯರಿಗೆ ಅನುಕೂಲ ಆಗುವಂತಹ ಮತ್ತು ಭವಿಷ್ಯದ ದೃಷ್ಟಿಯಿಂದ ಉಪಯೋಗವಾಗುವಂತಹ ನಿರಂತರವಾದ ಕಾರ್ಯಕ್ರಮಗಳನ್ನು ಮಾಡುತ್ತಲೇ ತನ್ನ ಸಾಮಾಜಿಕ ಕಳಕಳಿಯ ಕೆಲಸವನ್ನು ಮಾಡುತ್ತಿರುವ ಟಿವಿ9 ಎಕ್ಸ್ಪೋಗೆ, ರಾಯಲ್ ಸಿನಿಮಾ ಸೌಂಡ್ ಮಾಡುತ್ತಿರುವ ಹೊತ್ತಲ್ಲೆ ನಟಿ ಸಂಜನಾ ಹಾಗೂ ನಟ ವಿರಾಟ್ ಒಟ್ಟಿಗೆ ಬಂದು ಭೇಟಿ ನೀಡಿದ್ದು ವಿಶೇಷ ಆಗಿತ್ತು.  ಇದರ ಜತೆಗೆ ಹೊಸ ಮಾಡೆಲ್ ಕಾರು ಪರಿಚಯಿಸಿದರು.‌

ಗ್ರಾಹಕರಿಗೆ ಅಗತ್ಯ ವಸ್ತುಗಳು, ಕಾರು ಒಂದೇ ಸೂರಿನಡಿ ಲಭ್ಯವಾಗಿವೆ.  ಅಷ್ಟೇ ಅಲ್ಲದೇ  ತ್ರಿಪುರ ವಾಸಿನಿಯಲ್ಲಿ ಪಾರ್ಕಿಂಗ್ ಗೆ ಕೂಡ ವ್ಯವಸ್ಥೆ ಮಾಡಲಾಗಿದೆ. ಒಂದು ದಿನ ಪೂರೈಸಿರುವ ಎಕ್ಸ್ಪೋ, 5,6 ರಂದು ಇರಲಿದ್ದು, ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇದೆ.  ದಸರಾ ಸಂಭ್ರಮಕ್ಕೆ‌ ಮನೆಗೆ ಹೊಸ ವಸ್ತುಗಳ ಖರೀದಿ ಮಾಡೋ ಯೋಜನೆ ಇದ್ರೆ  ಲೈಫ್ ಸ್ಟೈಲ್ ಆಟೋ ಮೊಬೈಲ್ ಹಾಗೂ ಫರ್ನಿಚರ್ ಎಕ್ಸ್ಪೋಗೆ ಭೇಟಿ ನೀಡಬಹುದು.

  1.  

Leave a Reply

Your email address will not be published. Required fields are marked *