Breaking News

ಕರಾವಳಿ ರಿಯಲ್ ಎಸ್ಟೇಟ್ ನಲ್ಲಿ ಛಾಪು ಮೂಡಿಸಿರುವ ಅಭೀಷ್ ಸ್ಕ್ವೇರ್ ಲೋಕಾರ್ಪಣೆ ಇಂದು

 

ಮಂಗಳೂರು: ಕರಾವಳಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿರುವ ಅಭೀಷ್ ಬಿಲ್ಡರ್ಸ್ ಸಂಸ್ಥೆಯ ಕನಸಿನ ವಸತಿ ಸಮುಚ್ಛಯ ಯೋಜನೆ ಅಭೀಷ್ ಸ್ಕ್ವೇರ್  ವಸತಿ ಸಮುಚ್ಛಯ ಪೂರ್ಣಗೊಂಡಿದ್ದು, ಅ. 4 ರಂದು ಲೋಕಾರ್ಪಣೆ ಆಗಲಿದೆ. ವಸತಿ ಸಮುಚ್ಚಯ ಪೂರ್ಣಗೊಂಡ ಬಳಿಕ ಮಾರಾಟಕ್ಕಾಗಿ ಮೀಸಲಿಟ್ಟಿದ್ದ ಶೇ10 ರಷ್ಟು ವಸತಿಗಳನ್ನು ಉದ್ಘಾಟನೆಯ ನಂತರ ಮಾರಾಟ ಮಾಡಲಾಗುವುದು ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಪುಷ್ಪರಾಜ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರದ ಹೃದಯ ಭಾಗ ಕೆಪಿಟಿ ಸಮೀಪ ವಿಮಾನ ನಿಲ್ದಾಣ ರಸ್ತೆಯಲ್ಲಿ ಅಭೀಷ್ ಸ್ಕ್ವೇರ್ ನಿರ್ಮಾಣ ಆಗಿದೆ. ಮೂರು ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ ರಸ್ತೆ, ಮಂಗಳೂರು ನಗರವನ್ನು ಸಂಪರ್ಕಿಸುವ ಸಮೀಪದಲ್ಲೇ ನಿರ್ಮಾಣ ಆಗಿದೆ. ಈ ಯೋಜನೆ ಪೂರ್ಣಗೊಂಡಿದ್ದು, ಶೇ 40 ರಷ್ಟು ಖರೀದಿದಾರರು ಈಗಾಗಲೇ ವಾಸ್ತವ್ಯ ಮಾಡಿದ್ದಾರೆ. ಇದೀಗ ಅಧಿಕೃತವಾಗಿ ಕಟ್ಟಡವನ್ನು ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕೋವಿಡ್ ನಂತರ  ರಿಯಲ್ ಎಸ್ಟೇಟ್ ಉದ್ಯಮ ನಿಂತಿದ್ದ ವೇಳೆ ಯೋಜನೆ ಭೂಮಿ ಪೂಜೆ ಹಾಗೂ ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ವಿಶೇಷ ಕೊಡುಗೆ ಘೋಷಣೆ ಮಾಡಿ, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಂಚಲನ ಮೂಡಿಸಿದ ಯೋಜನೆ ಇದಾಗಿತ್ತು. ಈ ಯೋಜನೆಯಲ್ಲಿ ಮನೆ ಖರೀದಿಗೆ ಸಂಬಂಧಿಸಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳೊಂದಿಗೆ ಅಭೀಷ್ ಬಿಲ್ಡರ್ಸ್ ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿದ್ದು, ಇದರಿಂದಾಗಿ ಮನೆ ಖರೀದಿಗೆ ಸುಲಭವಾಗಿ ಗ್ರಾಹಕರಿಗೆ ಹಣಕಾಸು ಸೌಲಭ್ಯ ಸಿಗಲಿದೆ. ನವರಾತ್ರಿ ಹಾಗೂ ದೀಪಾವಳಿ ಸಂದರ್ಭದಲ್ಲಿ ಹಲವು ಸಂಕಲ್ಪಗಳು ಇರುತ್ತವೆ. ಅದರಲ್ಲಿ ಮನೆ ಖರೀದಿ ಒಂದು. ಆದರೆ ಹಣಕಾಸಿನ ಹೊಂದಾಣಿಕೆ ಕೊರತೆಯಿಂದ ಅದೆಷ್ಟೋ ಮಂದಿ ಕನಸು ನನಸಾಗಿರುವುದಿಲ್ಲ. ಆದರೆ ಈ ವರ್ಷ ಕನಸು ನನಸಾಗಿಸುವ ಕ್ಷಣವನ್ನು ಅಭೀಷ್ ಸಂಸ್ಥೆಯು ಗ್ರಾಹಕರಿಗೆ ನೀಡುತ್ತಿದೆ ಎಂದು ತಿಳಿಸಿದ್ದಾರೆ.

  1.  

ಅಭೀಷ್‌ನ ವಿಶೇಷತೆ:  10 ಲೆವೆಲ್‌ನಲ್ಲಿ 100 ಫ್ಲ್ಯಾಟ್ 3 ಲೆವೆಲ್‌ನ ಪಾರ್ಕಿಂಗ್ ಸೌಲಭ್ಯ, ಚತುಷ್ಪಥ ಕಾಂಕ್ರಿಟ್ ರಸ್ತೆಗೆ ತಾಗಿಕೊಂಡು ವಸತಿ ಸಮುಚ್ಛಯ ರಾಷ್ಟ್ರೀಯ ಹೆದ್ದಾರಿ 75 ಹಾಗೂ 66 ಕ್ಕೆ ಸುಲಭದಲ್ಲಿ ಸಂಪರ್ಕ, ಅತ್ಯಾಧುನಿಕ ಸೌಲಭ್ಯ, ಸಂಚಾರ ಜಂಜಾಟದಿಂದ ಮುಕ್ತಿ, ಸ್ವಚ್ಛಂದ ಜೀವನಕ್ಕೆ ಪರಿಪೂರ್ಣ ಸಮುಚ್ಚಯ

ಎಲ್ಲ ಮನೆಗಳನ್ನು ವಾಸ್ತು ರೀತಿಯಲ್ಲಿಯೇ ವಿನ್ಯಾಸ, ಮಲ್ಟಿ ಜಿಮ್, ಮೆಡಿಟೇಷನ್ ಸೆಂಟರ್, ಪಾರ್ಟಿ ಹಾಲ್, ಮಕ್ಕಳ ಪ್ಲೇ ಏರಿಯಾ, ಅತಿಥಿಗಳು ಹಾಗೂ ಮಾಲೀಕರಿಗೆ ಪ್ರತ್ಯೇಕ ಕಾರು ಪಾರ್ಕಿಂಗ್, ಆಧುನಿಕ ಪರಿಕರಗಳೊಂದಿಗೆ ಆಕರ್ಷಕ ವಿನ್ಯಾಸ, ಕಡಿಮೆ, ಮಧ್ಯಮ ಆದಾಯದ ಕುಟುಂಬಕ್ಕೆ ಸೂಕ್ತ ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮಂಗಳೂರಿನ ಕೆ.ಕೆ.ಆರ್.ರಸ್ತೆಯ ಕುಶೆ ಸದನದ 3ನೇ ಮಹಡಿಯಲ್ಲಿರುವ ಅಭೀಷ್ ಕಚೇರಿಗೆ ಭೇಟಿ ನೀಡಬೇಕು. ಇಲ್ಲಿ ಅಭೀಷ್‌ನ ತಾಂತ್ರಿಕ ತಂಡ ಸ್ಥಳದಲ್ಲೇ ಇರುತ್ತಾರೆ. ವಸತಿ ಸಮುಚ್ಛಯದ ನಿರ್ಮಾಣ ಕಾಮಗಾರಿಯ ಗುಣಮಟ್ಟವನ್ನು ಖಚಿತ ಪಡಿಸಿ ಗ್ರಾಹಕರು ಖರೀದಿ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

 

  1.  

Leave a Reply

Your email address will not be published. Required fields are marked *