Breaking News

ಮಂಗಳೂರಿನಲ್ಲಿಇದೇ 4 ರಿಂದ ಅಂತರ ರಾಷ್ಟ್ರೀಯ ವಿದೂಷಕ ಉತ್ಸವ, 10 ದೇಶಗಳ 25 ವಿದೂಷಕರ ಹಾಸ್ಯ, ಕಾಮಿಡಿ

 

ಮಂಗಳೂರು:  ಇದೇ 4, 5 ಮತ್ತು 6 ರಂದು ಮೂರು ದಿನ  ಅಂತರ ರಾಷ್ಟ್ರೀಯ ವಿದೂಷಕ ಉತ್ಸವ ಆಯೋಜನೆ ಮಾಡಲಾಗಿದೆ. 10 ದೇಶಗಳ 25 ವಿದೂಷಕರೊಂದಿಗೆ 120 ನಿಮಿಷಗಳ ನಿರಂತರ ಹಾಸ್ಯ, ಕಾಮಿಡಿ, ಜಗ್ಲಿಂಗ್ ಮತ್ತು ಸಂಗೀತದೊಂದಿಗೆ ನಡೆವ ಕಾರ್ಯಕ್ರಮವು ಬೆಳಿಗ್ಗೆ 11, ಮಧ್ಯಾಹ್ನ 3 ಮತ್ತು ಸಂಜೆ 7 ಗಂಟೆಗೆ ಇಲ್ಲಿನ ಫಾದರ್ ಮುಲ್ಲರ್ ಸಭಾಂಗಣದಲ್ಲಿ ನಡೆಯಲಿದೆ.

  1.  

ಅಂತರ ರಾಷ್ಟ್ರೀಯ ವಿದೂಷಕರ ಉತ್ಸವ 10 ನೇ ವಾರ್ಷಿಕೋತ್ಸವ ಆಚರಿಸುತ್ತಿದೆ. ಹಬ್ಬವನ್ನು ಪ್ರಶಸ್ತಿ ವಿಜೇತ ಅಂತರ ರಾಷ್ಟ್ರೀಯ ವಿದೂಷಕ ಕಲಾವಿದ, ವರ್ಲ್ಡ್ ಕ್ಲೌನ್ ಅಸೋಸಿಯೇಷನ್ ಮಾಜಿ ಉಪಾಧ್ಯಕ್ಷ ಮತ್ತು ಅಂತರ ರಾಷ್ಟ್ರೀಯ ಕ್ಲೌನ್ ಆಫ್ ದಿ ಇಯರ್ ಪ್ರಶಸ್ತಿ ವಿಜೇತ ಮಾರ್ಟಿನ್ ಫ್ಲಬ್ಬರ್ ಡಿಸೋಜ ಅವರು ನಿರ್ವಹಿಸಲಿದ್ದಾರೆ.  ಫ್ಲಬ್ಬರ್ ಅವರು 7 ದೇಶಗಳಲ್ಲಿನ ದೊಡ್ಡ ಹಾಸ್ಯ ಸ್ಟೇಜ್‌ಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಈಗ ಅವರು ಮಂಗಳೂರಿನಲ್ಲಿ ಅಂತರ ರಾಷ್ಟ್ರೀಯ ಮನೋರಂಜನೆ ನೀಡಲಿದ್ದಾರೆ.

ಈ ವರ್ಷದ ಕಾರ್ಯಕ್ರಮದಲ್ಲಿ 10 ಪ್ರತಿಭಾವಂತ ಮಹಿಳಾ ವಿದೂಷಕ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಅಮೆರಿಕ, ಕೆನಡಾ, ಬ್ರೇಜಿಲ್, ಪೆರು, ಅರ್ಜೆಂಟಿನಾ, ಇಟಲಿ, ಫ್ರಾನ್ಸ್, ಜರ್ಮನಿ, ರಷ್ಯಾ, ಸ್ಪೇನ್ ಮತ್ತು ಭಾರತ ಮುಂತಾದ ರಾಷ್ಟ್ರಗಳ ವಿಶ್ವದಾದ್ಯಂತ ಅಂತರ ರಾಷ್ಟ್ರೀಯ ವಿದೂಷಕ ಕಲಾವಿದರ ಸಮಾವೇಶವಾಗಿದೆ. ಇದುವರೆಗೆ 100ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ.

  1.  

Leave a Reply

Your email address will not be published. Required fields are marked *