Breaking News

ಸಾನಿಧ್ಯ ವಿಶೇಷ ಮಕ್ಕಳ ಶಾಲೆಯಲ್ಲಿ ಓಣಂ ಸಂಭ್ರಮ ಎಂದಿಗೂ ಮರೆಯಲಾಗದು: ರಾಜೇಶ್‌ಖನ್ನಾ

 

ಮಂಗಳೂರು: ಓಣಂ ಆಚರಣೆಯನ್ನು ದೇಶದ ಎಲ್ಲಾ ಕಡೆಗಳಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ವೈವಿಧ್ಯತೆಯಲ್ಲಿಏಕತೆ ಎಂದರೆ ತಪ್ಪಾಗಲಾರದು. ಸಾನಿಧ್ಯ ವಸತಿಯುತ ಶಾಲೆಯಲ್ಲಿ ವಿಶೇಷ ಮಕ್ಕಳೊಂದಿಗೆ ಶಿಕ್ಷಕ ಸಿಬ್ಬಂದಿ ಸೇರಿ ಓಣಂ ಹಬ್ಬ ಆಚರಣೆ ಮಾಡುತ್ತಿರುವುದು ಕಳೆ ಕಟ್ಟಿದೆ ಎಂದು ಬ್ಯಾಂಕ್‌ ಆಫ್ ಬರೋಡದ ವಲಯ ಮುಖ್ಯಸ್ಥ ಹಾಗೂ ಮಹಾಪ್ರಬಂಧಕ ರಾಜೇಶ್‌ಖನ್ನಾ ಹೇಳಿದರು.

ಇಲ್ಲಿನ ಸಾನಿಧ್ಯ ವಸತಿಯುತ ವಿಶೇಷ ಮಕ್ಕಳ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಓಣಂ ಪೂಕಳಂ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಬ್ಯಾಂಕ್‌ ಆಫ್ ಬರೋಡ ಬ್ಯಾಂಕ್‌ ಸ್ಥಾಪನೆಯ 117 ನೇ ವರ್ಷದ ಸಂದರ್ಭದಲ್ಲಿ ನೀಡಲಾಗುವ ಧ್ವನಿವರ್ಧಕ ವ್ಯವಸ್ಥೆಯ ಸಂಪೂರ್ಣ ಸಾಮಗ್ರಿಗಳನ್ನು ಸಾನಿಧ್ಯ ಶಾಲೆಗೆ ಹಸ್ತಾಂತರಿಸಿದರು.

  1.  

ಸನಿಲ್ ಕುಮಾರ್ ಬಿ. ಅವರು ಮಾತನಾಡಿ, ಬ್ಯಾಂಕ್‌ ಆಫ್ ಬರೋಡಾದ ಪ್ರಾಂತೀಯ ಮುಖ್ಯಸ್ಥ ಹಾಗೂ ಸಹಾಯಕ ಮಹಾಪ್ರಬಂಧಕರು ಮೂಲತ: ಕೇರಳದವರು. ನನ್ನ ಓಣಂ ಆಚರಣೆ ಸಾನಿಧ್ಯದಿಂದ ಪ್ರಾರಂಭವಾಗಿದೆ ಎಂದರು.

ಧ್ವನಿವರ್ಧಕ ಸಾಮಗ್ರಿಗಳನ್ನು ಸಾನಿಧ್ಯದಲ್ಲಿ ಅಳವಡಿಸಿದ ಪ್ರವೀಣ್ ಲೋಬೊ ಅವರನ್ನು ರಾಜೇಶ್‌ ಖನ್ನಾಅವರು ಅಭಿನಂದಿಸಿದರು.
ಬ್ಯಾಂಕ್‌ಆಫ್ ಬರೋಡದ ಮುಖ್ಯ ಪ್ರಬಂಧಕ ವಿಶ್ವನಾಥ್, ಗಣೇಶ್ ಸೇವಾ ಟ್ರಸ್ಟಿನ ಅಧ್ಯಕ್ಷ ಮಹಾಬಲ ಮಾರ್ಲ, ಉಪಾಧ್ಯಕ್ಷ ಎಂ.ಬಿ. ದೇವದತ್ತರಾವ್, ಟ್ರಸ್ಟಿಗಳಾದ ಪ್ರೊ. ರಾಧಾಕೃಷ್ಣ, ಮಹಮ್ಮದ್ ಬಶೀರ್, ಸ್ಟೀವನ್ ಪಿಂಟೋ, ಉಷಾ ಶೆಟ್ಟಿ, ಸಲಹಾ ಸಮಿತಿ ಸದಸ್ಯರಾದ ಸಂತೋಷ್ ಶೆಟ್ಟಿ ಇದ್ದರು.

ಸಾನಿಧ್ಯದ ಶಿಕ್ಷಕಿಯರು ಹಾಗೂ ವಿಶೇಷ ಮಕ್ಕಳು ಓಣಂ ನೃತ್ಯವನ್ನು ನಡೆಸಿಕೊಟ್ಟರು. ವಿಶೇಷ ಶಿಕ್ಷಕಿ ಜುಲಿಯಾನ ಸೋಫಿಯಾ ಡಿಸೋಜ ನಿರೂಪಿಸಿದರು. ಸಾನಿಧ್ಯದ ಆಡಳಿತಾಧಿಕಾರಿ ಡಾ. ವಸಂತ್‌ಕುಮಾರ್ ಶೆಟ್ಟಿ ವಂದಿಸಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com