ಕಲಬುರಗಿ: ಎಲೆಕ್ಟ್ರಿಕ್ ಬೈಕ್ ಅನ್ನು ಸರಿಯಾಗಿ ದುರಸ್ತೆ ಮಾಡಿಕೊಡದೇ ಇರುವ ಕಾರಣಕ್ಕೆ ಕೋಪದಿಂದ ಬೈಕ್ ಶೋ ರೂಂಗೆ ಬೆಂಕಿ ಹಚ್ಚಿದ ಆರೋಪ ಕೇಳಿ ಬಂದಿದೆ. ಕಲಬುರಗಿಯ ಹುಮನಾಬಾದ್ ರಸ್ತೆಯಲ್ಲಿನ ಎಲೆಕ್ಟ್ರಿಕ್ ಬೈಕ್ ಶೋ ರೂಂಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ,
ಬೆಳಿಗ್ಗೆ ಶೋ ರೂಂಗೆ ಬೆಂಕಿ ತಗುಲಿತ್ತು. ಆರಂಭದಲ್ಲಿ ಎಲ್ಲರೂ ಶಾರ್ಟ್ ಸರ್ಕೀಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಕೊಂಡಿದ್ದರು. ಆದರೆ ಪೊಲೀಸರ ತನಿಖೆ ವೇಳೆ ಬೆಂಕಿ ಹಚ್ಚಿದ್ದು ಪತ್ತೆ ಆಗಿದೆ. ಮಹಮ್ಮದ್ ನದೀಮ್ ಎಂಬ ವ್ಯಕ್ತಿ ಏಲೆಕ್ಟ್ರಿಕ್ ಬೈಕ್ ಸರಿಯಾಗಿ ರಿಪೇರಿ ಮಾಡಿಕೊಡದೇ ಇರುವುದರಿಂದ ಸಿಬ್ಬಂದಿ ಜತೆ ವಾಗ್ವಾದ ನಡೆಸಿ ಬಳಿಕ ಪೆಟ್ರೋಲ್ ತಂದು ಶೋ ರೂಂ ಒಳಗೆ ಬೆಂಕಿ ಹಚ್ಚಿದ್ದು ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಕಲಬುರಗಿಯ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.