Breaking News

ಜುಲ್ಲೈ 4 ರಂದು ದ.ಕ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ, ಭಾರಿ ಮಳೆಯ ಸಾಧ್ಯತೆ

 

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಅಬ್ಬರದ ಮಳೆ ಸುರಿಯುತ್ತಿದ್ದು, ಜುಲೈ 4 ರಂದು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಅನ್ನು ಘೋಷಣೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಹಲವಡೆ ಗುಡುಗು ಸಹಿತ ಗಾಳಿ ಮಳೆಯಾಗಲಿದ್ದು, ಜುಲೈ 5ರಿಂದ ರಾಜ್ಯದಾದ್ಯಂತ ಮುಂಗಾರು ದುರ್ಬಲಗೊಳ್ಳುವ ಮುನ್ಸೂಚನೆ ಇದೇ, ಜುಲೈ 8 ರಿಂದ ಸ್ವಲ್ಪ ಮಟ್ಟಿಗೆ ಮಳೆ ಆಗುವ ಲಕ್ಷಣಗಳಿವೆ.

  1.  

ಮಂಗಳವಾರ ಬೆಳಿಗ್ಗೆಯಿಂದ ಬುಧವಾರ ಬೆಳಿಗ್ಗೆಯವರಿಗೆ ಜಿಲ್ಲೆಯಲ್ಲಿ ಸರಾಸರಿ 19.2 ಮಿಲಿ ಮೀಟರ್‌ ಮಳೆ ದಾಖಲಾಗಿದೆ. ಮುಂದಿನ 48 ಗಂಟೆಗಳಲ್ಲಿ ಕರಾವಳಿ ತೀರ ಪ್ರದೇಶದಲ್ಲಿ ಗಾಳಿ ಪ್ರಮಾಣ ಹೆಚ್ಚಳ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜಿಲ್ಲೆಯ ಗ್ರಾಮೀಣ ಭಾಗ ಸುಳ್ಯ, ಬೆಳ್ಳಾರೆ, ಪುತ್ತೂರು ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಮೂಡುಬಿದಿರೆಯಲ್ಲಿ ಗರಿಷ್ಠ 32 ಮಿ. ಮೀ ಮಳೆ ದಾಖಲಾಗಿದೆ. ಬೆಳ್ತಂಗಡಿ 23 ಮಿ. ಮೀ, ಬಂಟ್ವಾಳ 19.8 ಮಿ.ಮೀ, ಮಂಗಳೂರು 15.8 ಮಿಮೀ, ಪುತ್ತೂರು 14.6 ಮಿ.ಮೀ, ಸುಳ್ಯ 14.2 ಮಿ.ಮೀ, ಕಡಬ 13.9 ಮಿ. ಮೀ. ಮೂಲ್ಕಿಯಲ್ಲಿ 12 ಮಿ.ಮೀ, ಉಳ್ಳಾಲ 25 ಮಿ. ಮೀ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ಪ್ರಕಟಣೆ ತಿಳಿಸಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com