Breaking News

ಮಂಗಳೂರಿನ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದಿಂದ ಮಣ್ಣು ಕುಸಿತ. ಒಬ್ಬ ಕಾರ್ಮಿಕ ಸಾವು, ಒಬ್ಬನ ರಕ್ಷಣೆ

 

ಮಂಗಳೂರು: ಕಳೆದ ಕೆಲ ದಿನಗಳಿಂದ ಅಬ್ಬರದ ಮಳೆಯಿಂದಾಗಿ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಜನಜೀವನ ಅಸ್ತವ್ಯಸ್ಥವಾಗಿದ್ದು, ಪರಿಣಾಮ ಮಂಗಳೂರಿನ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರ ನಿರ್ಮಾಣ ಹಂತದ ವೇಳೆ ಮಣ್ಣು ಕುಸಿದ ಪರಿಣಾಮ ಇಬ್ಬರು ಕಾರ್ಮಿಕರು ಸಿಕ್ಕು ಹಾಕಿಕೊಂಡಿದ್ದು, ಒಬ್ಬ ಕಾರ್ಮಿಕನ ರಕ್ಷಣೆ ಮಾಡುವಲ್ಲಿ ರಕ್ಷಣಾ ಪಡೆಯ ತಂಡವು ಯಶಸ್ಸು ಆಗಿದೆ.

ಇನ್ನೊಬ್ಬ ಕಾರ್ಮಿನ ರಕ್ಷಣಾ ಕಾರ್ಯಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ , ಅಗ್ನಿಶಾಮಕ ದಳದ ಸಿಬ್ಬಂದಿಯ ಅವಿರತ ಪ್ರಯತ್ನದ ಫಲವಾಗಿ ಮೃತ ಕಾರ್ಮಿಕನ ಮೃತ ದೇಹವನ್ನು ಮಣ್ಣಿನಿಂದ ಹೊರ ತೆಗೆಯಲಾಗಿದೆ ಎಂದು ಜಿಲ್ಲಾಡಳಿತವು ತಿಳಿಸಿದೆ.

  1.  

ಬಿಹಾರದ ಮೂಲದ ರಾಜ್ ಕುಮಾರ್ (18) ಎಂಬುವವರನ್ನು ರಕ್ಷಣೆ ಮಾಡಲಾಗಿದೆ. ಆತನ ಜತೆಗೆ ಕೆಲಸ ಮಾಡುತ್ತಿದ್ದ ಚಂದನ್‌ ಕುಮಾರ್ (30) ದೇಹವನ್ನು ಮಣ್ಣಿನ ಅವಶೇಷದಿಂದ ಹೊರತೆಗೆದಾಗ ಅರೆಪ್ರಜ್ಞಾವಸ್ಥಿತಿಯಲ್ಲಿತ್ತು. ತಜ್ಞ ವೈದ್ಯರ ತಂಡದ ಸತತ ಪ್ರಯತ್ನದಿಂದಾಗಿಯೂ ಚಂದನ್‌ ಕುಮಾರ್‌ ಬದುಕಿಳಿಯಲಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.

ಕಬ್ಬಿಣದ ರಾಡ್‌ಗಳು ಮಣ್ಣಿನ ರಾಶಿಯಲ್ಲಿ ಸಿಕ್ಕು ಹಾಕಿಕೊಂಡಿರುವುದರಿಂದ ಚಂದನ್‌ ಕುಮಾರ್‌ ಅವರನ್ನು ರಕ್ಷಣೆ ಮಾಡುವ ಕಾರ್ಯವೂ ಅಷ್ಟೊಂದು ಸುಲಭ ಆಗಿರಲಿಲ್ಲ. ತಜ್ಞ ವೈದ್ಯರ ತಂಡ ತುರ್ತು ಕಾರ್ಯಾಚರಣೆಗೆ ಸ್ಥಳದಲ್ಲಿಯೇ ಮುಕ್ಕಾಂ ಹೂಡಿವೆ.

ರಾಜ್‌ ಕುಮಾರ್‌ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಫಾದರ್‌ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com