Breaking News

ಮೆಸ್ಕಾಂ ದೂರು ಸ್ವೀಕಾರಕ್ಕೆ ಹೆಚ್ಚುವರಿ 56 ಮಂದಿಯ ವಿಶೇಷ ಕಾರ್ಯ ಪಡೆ

 

ಮ೦ಗಳೂರು: ಮೆಸ್ಕಾಂನಲ್ಲಿ ದೂರು ಸ್ವೀಕರಿಸಲು ಮತ್ತೆ ಹೆಚ್ಚುವರಿಯಾಗಿ 56 ಮ೦ದಿ ವಿಶೇಷ ಪಡೆ ಸ್ಥಾಪನೆ ಮಾಡಲಾಗಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಮಳೆಗಾಲದ ಸಂಭವನೀಯ ಅವಘಡಗಳನ್ನು ತಪ್ಪಿಸುವ ಸಲುವಾಗಿ ಮೆಸ್ಕಾಂ ವತಿಯಿಂದ ಈಗಾಗಲೇ 800 ಗ್ಯಾಂಗ್ ಮೆನ್ ಮತ್ತು 56 ವಿಶೇಷ ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಇದೀಗ ಮತ್ತೆ ಹೆಚ್ಚುವರಿಯಾಗಿ 56 ಮ೦ದಿ ವಿಶೇಷ ಪಡೆ ಮ೦ಜೂರು ಮಾಡಲಾಗಿದೆ. ವಿಶೇಷ ಪಡೆ ಅತ್ತಾವರ 4, ಕಾವೂರು 10, ಪುತ್ತೂರು‌ 10, ಬಂಟ್ವಾಳ 7, ಉಡುಪಿ 2, ಕಾರ್ಕಳ 4, ಕುಂದಾಪುರ 8, ಶಿವಮೊಗ್ಗ 8, ಶಿಕಾರಿಪುರ 3 ಮ೦ದಿ ಒಳಗೊ೦ಡಿದೆ.
ಮಳೆಗಾಲದ ಸಂಭವನೀಯ ಅವಘಡಗಳನ್ನು ತಪ್ಪಿಸುವ ಸಲುವಾಗಿ ಮೆಸ್ಕಾಂ ವತಿಯಿಂದ ಈಗಾಲೇ 800 ಗ್ಯಾಂಗ್ ಮೆನ್ ಮತ್ತು 56 ಸಂಖ್ಯೆಯ ವಿಶೇಷ ವಾಹನಗಳು ಕಾರ್ಯನಿರ್ವಹಿಸುತ್ತಿವೆ.

  1.  

ಮೆಸ್ಕಾಂ ಅಪಾಯಕಾರಿ ಸ್ಥಳಗಳನ್ನು ಪತ್ತೆಮಾಡಿ ಕ್ರಮಬದ್ಧಗೊಳಿಸಲು ವಿಶೇಷ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದೆ. ವಿಧಾನಸಭಾ ಅಧ್ಯಕ್ಷರ ಸೂಚನೆ ಮೇರೆಗೆ, ಅಪಾಯಕಾರಿ ಸನ್ನಿವೇಶಗಳ ಮಾಹಿತಿ ಸ್ವೀಕರಿಸುವ ಸಲುವಾಗಿ ಎರಡು ದೂರವಾಣಿ ಸ್ಥಾಪಿಸಲಾಗುವುದು. ಇಂದನಿಂದಲೇ ಕಾರ್ಯಾರಂಭ ಮಾಡಲಿವೆ. ಇದಲ್ಲದೆ 64 ಉಪ ವಿಭಾಗಗಳಲ್ಲಿಯೂ ನಿರಂತರ ಸೇವಾ ಕೇಂದ್ರಗಳು ಗ್ರಾಹಕರ ದೂರುಗಳನ್ನು ಸ್ವೀಕರಿಸಿ ,ಸರಿಪಡಿಸಲು ಕಾರ್ಯಾಚರಿಸುತ್ತಿವೆ ಎಂದು ತಿಳಿಸಿದ್ದಾರೆ.

ಗ್ರಾಹಕರು ತುರ್ತು ಸಂದರ್ಭಗಳಲ್ಲಿ ಮೆಸ್ಕಾಂ ಸಹಾಯವಾಣಿ 1912 ಗೆ ಕರೆ ಮಾಡಬಹುದು. ಮೆಸ್ಕಾಂ ಫೇಸ್ ಬುಕ್‌, ಎಕ್ಸ್, ವಾಟ್ಸ್‌ ಅಪ್‌ ಸಂಖ್ಯೆ 9483041912, ವೆಬ್ ಸೈಟ್ ಹಾಗೂ ಸೇವಾ ಸಿಂಧು ಮೂಲಕ ಮೆಸ್ಕಾಂ ಅನ್ನು ತಲುಪಬಹುದಾಗಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com