Breaking News

ತಾಲಿಬಾನ್ ಸರಕಾರದ ಆಟಾಟೋಪ ರಾಜ್ಯದಲ್ಲಿ ನಡೆಯಲು ಬಿಜೆಪಿ ಬಿಡಲ್ಲ: ಅಶೋಕ್

 

ಮಂಗಳೂರು: ರಾಜ್ಯದಲ್ಲಿ ತಾಲಿಬಾನ್ ಸರಕಾರ ಅಧಿಕಾರ ನಡೆಸುತ್ತಿದ್ದು, ಗೂಂಡಾಗಳಿ ರಾಜ್ಯದಲ್ಲಿ ಹಬ್ಬದಂತೆ ಆಗಿದೆ.  ಹಿಂದುಗಳೇ ಕಾಂಗ್ರೆಸ್ ಸರಕಾರದ ಟಾರ್ಗೆಟ್ ಆಗಿದ್ದಾರೆ. ತಾಲಿಬಾನ್ ಸರಕಾರವನ್ನು ಬಿಜೆಪಿ ಬಗ್ಗು ಬಡಿಯಲಿದೆ, ಇಡೀ ದೇಶದಲ್ಲಿ ಮೋದಿ ಅವರು ಪ್ರಧಾನಿ ಆಗಿದ್ದಕ್ಕೆ ವಿಜಯೋತ್ಸವ ಆಚರಣೆ ಮಾಡಲಾಗಿದೆ, ಎಲ್ಲಿಯೂ ಕೂಡ ಯಾವುದೇ ಗಲಾಟೆ ಆಗಿಲ್ಲ, ಆದರೆ ದಕ್ಷಿಣ ಕನ್ನಡದಲ್ಲಿ ಮಾತ್ರ ಇಂತಹ ಗಲಾಟೆ ಆಗಿದೆ. ಇದಕ್ಕೆ ಕಾಂಗ್ರೆಸ್ ಸರಕಾರ ಕುಮ್ಮಕ್ಕು ಕಾರಣ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ವಿಜಯೋತ್ಸವ ಆಚರಣೆ ಮಾಡುವಾಗ ಭಾರತ್ ಮಾತಾಕೀ ಜೈ ಎಂದವರನ್ನು ಅಟ್ಟಾಡಿಸಿಕೊಂಡು ಬಂದು ಚಾಕುವಿನಿಂದ ಇರಿಯಲಾಗಿದೆ. ಬೋಳಿಯಾರ್ ನಲ್ಲಿ ನಡೆದ ಘಟನೆ ಪೂರ್ವನಿಯೋಜಿತ ಸಂಚು. ಅಲ್ಲಿ ನಡೆದ ಘಟನೆಯ ಸಂಪೂರ್ಣ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇನೆ, ಜತೆಗೆ ನೋಡಿದ್ದೇನೆ ಕೂಡ, ಭಾರತ್ ಮಾತಾ ಕೀ ಜೈ ಎನ್ನುವ ಘೋಷಣೆ ಬಿಟ್ಟು ಬೇರೆ ಏನು ಕೂಡ ಘೋಷಣೆ ಕೂಗಿಲ್ಲ, ಅಂತಹ ದೃಶ್ಯಾವಳಿ ಇದ್ದರೆ ಬಿಡುಗಡೆ ಮಾಡಬೇಕು. ಅಲ್ಲಿನ ಗುಂಪು ಪೂರ್ ಸಿದ್ಧತೆ ಮಾಡಿಕೊಂಡೆ ಈ ಘಟನೆ ನಡೆಸಿದೆ. ಅಲ್ಲಿದ್ದವರ ಕೈಯಲ್ಲಿ ಎಲಿಂದ ಚಾಕು ಬಂತು, ಇದರ ಬಗ್ಗೆ ಪೊಲೀಸ್ ಅಧಿಕಾರಿಗಳು ಸಮಗ್ರ ತನಿಖೆ ಮಾಡಬೇಕು ಎಂದರು.

ವಿಧಾನಸಭೆಯಲ್ಲಿ ಪಾಕಿಸ್ತಾನಕ್ಕೆ ಜೈ ಅಂದವರಿಗೆ ಬಿರಿಯಾನಿ ಕೊಡಿಸಿ ಜಾಮೀನು ಕೊಡಿಸಿದ ಗಿರಾಕಿಗಳು ಕಾಂಗ್ರೆಸ್ ನವರು.  ಇವರ ಆಟಾಟೋಪಕ್ಕೆ ಕಡಿವಾಣ ಹಾಕುತ್ತೇವೆ. ಈ ಪ್ರಕರಣವನ್ನು ಇಲ್ಲಿಗೆ ಬಿಡುವ ಮಾತೇ ಇಲ್ಲ. ಸ್ಪೀಕರ್ ಅವರ ಕ್ಷೇತ್ರದಲ್ಲಿ ಇಂತಹ ಅಮಾನುಷ ಘಟನೆ ನಡೆದಿದೆ. ಹಲ್ಲೆ ಒಳಗಾದ ಸಂತ್ರಸ್ತರು ಆಸ್ಪತ್ರೆ ಚಿಕಿತ್ಸೆ ಪಡೆಯುಯುತ್ತಿದ್ದು, ಅದೇ ಆಸ್ಪತ್ರೆಗೆ ಆರೋಗ್ಯ ಸಚಿವರು ಕಾರ್ಯಕ್ರಮದ ನಿಮಿತ್ತ ಹೋಗಿದ್ದರು, ಆದರೆ ಹಲ್ಲೆಗೊಳಗಾದವರನ್ನು ಸೌಜನ್ಯಕ್ಕಾದರೂ ಭೇಟಿ ನೀಡಿ ಆರೋಗ್ಯ ವಿಚಾರಣೆ ಮಾಡಬೇಕಿತ್ತು. ಆದರೆ ಒಂದೀಷ್ಟು ಕರುಣೆ ಇಲ್ಲದವರು. ಈ ಬಗ್ಗೆ ವಿಧಾನಸಭೆಯಲ್ಲಿ ಸ್ಪೀಕರ್ ಮುಂದೆ ಹೋರಾಟ ಮಾಡುತ್ತೇವೆ ಎಂದರು.

ಚೂರಿ ಇರದಿದ್ದು ಅಲ್ಲದೇ ನಮ್ಮ ಹಿಂದೂ ಯುವಕರ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸಲಿದೆ. ವಿಡಿಯೊ ದೃಶ್ಯಾವಳಿಯಲ್ಲಿ ಪ್ರಚೋದನೆಕಾರಿ ಹೇಳಿಕೆ ಇದ್ದರೆ ಬಿಡುಗಡೆ ಮಾಡಿ, ಅಮಾಯಕರ ಹಾಕಿರುವ ಪ್ರಕರಣ ವಾಪಸ್ ಪಡೆಯಬೇಕು, ಜಿಲ್ಲಾಡಳಿತವು ಆಸ್ಪತ್ರೆಯಲ್ಲಿ ಇರುವವರ ಖರ್ಚುವೆಚ್ಚ ಭರಿಸಬೇಕು. ಜಿಲ್ಲೆಗೆ ಒಬ್ಬರಂತೆ ಗೃಹ ಸಚಿವರು ಇದ್ದಾರೆ. ಅಪರಾಧ ಪ್ರಕರಣ ಸಂಖ್ಯೆ ಶೇ 40 ಏರಿಕೆ ಆಗಿದೆ. ರಾಜ್ಯವನ್ನು ಗೂಂಡಾ ರಾಜ್ಯ ಆಗೋಕೆ ನಾವು ಬಿಡಲ್ಲ, ಇದರ ವಿರುದ್ಧ ಹೋರಾಟಕ್ಕೆ ಬೆಂಗಳೂರಿನಲ್ಲಿ ನಾಳೆ ಸಭೆ ಸೇರಿಲಿದ್ದೇವೆ. ರಾಜ್ಯದಲ್ಲಿ ಸರಕಾರ ಸತ್ತು ಹೋಗಿದೆ ಎಂದರು.

  1.  

ಆಸ್ಪತ್ರೆಗೆ ಭೇಟಿ ಗಾಯಾಳುಗಳ ಆರೋಗ್ಯ ವಿಚಾರಣೆ

ವಿರೋಧ ಪಕ್ಷದ ನಾಯಕ ಆರ್ . ಅಶೋಕ ಅವರು ಚೂರಿ ಇರಿತಕ್ಕೊಳಗದವರನ್ನು ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಅವರ ಆರೋಗ್ಯ ವಿಚಾರಣೆ ಮಾಡಿದರು.ಚಿಕಿತ್ಸೆ ಪಡೆಯುತ್ತಿರುವ ಹರೀಶ್ ಮತ್ತು ನಂದಕುಮಾರ್ ಅವರಿಗೆ ಧೈರ್ಯ ತುಂಬಿ, ಬಿಜೆಪಿ ಸದಾ ನಿಮ್ಮ ಜತೆಗೆ ಇರಲಿದೆ. ನೀವು ಯಾವುದೇ ಕಾರಣಕ್ಕೂ ದೃತಿಗೆಡಬಾರದು, ಪಕ್ಷ ಹಾಗೂ ಪಕ್ಷದ ಮುಖಂಡರು ನಿಮ್ಮ ಜತೆ ಇರಲಿದ್ದಾರೆ ಎಂದು ಆತ್ಮಸ್ಥೈರ್ಯ ತುಂಬಿದರು.

ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 20 ಪರ್ಸೆಂಟ್‌ ಹಣ ನುಂಗಿದ ಸಚಿವರ ರಾಜೀನಾಮೆ ಪಡೆಯಲಾಗಿದೆ. ಆದರೆ, 80 ಪರ್ಸೆಂಟ್‌ ಹಣ ನುಂಗಿದ ಸಿಎಂ ಸಿದ್ದರಾಮಯ್ಯ ಕೂಡ ರಾಜೀನಾಮೆ ನೀಡಬೇಕು. ಇದಕ್ಕಾಗಿ ಸದನದಲ್ಲಿ ಆಗ್ರಹ ಮಾಡುತ್ತೇವೆ. ತೆಲಂಗಾಣದಲ್ಲೂ ಕಾಂಗ್ರೆಸ್‌ ಸರ್ಕಾರವಿದ್ದು, ಅಲ್ಲಿಗೂ ನಿಗಮದ ಹಣ ಸಂದಾಯವಾಗಿದೆ. ಆದ್ದರಿಂದ ಇದು ದೊಡ್ಡ ಭ್ರಷ್ಟಾಚಾರದ ಪ್ರಕರಣ ಎಂದು ಆರ್ ಅಶೋಕ ಆರೋಪಿಸಿದರು.

ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಡಾ.ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ರಾಜೇಶ್ ನಾಯಕ್, ಹರೀಶ್ ಪೂಂಜ, ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಕಿಶೋರ್ , ಸಂಜಯ್ ಪ್ರಭು, ರವೀಂದ್ರ ಶೆಟ್ಟಿ ಸೇರಿದಂತೆ ಹಲವರು ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com