Breaking News

ಉ.ಕ. ಕಾಂಗ್ರೆಸ್‌ ನ ಅಂಜಲಿಗೆ ಕೈ ಕೊಟ್ಟ ಗ್ಯಾರಂಟಿ, ಅರಳಿದ ಕಮಲ, ಕಾಗೇರಿ ದೆಹಲಿಗೆ

 

ಕಾರವಾರ: ರಾಜ್ಯದ ಗಮನ ಸೆಳೆದಿದ್ದ ಉತ್ತರ ಕನ್ನಡ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬಹುತೇಕ ಗೆಲುವಿನ ಹೊಸ್ತಿಲ್ಲಲಿ ಇದ್ದು, ಸುಮಾರು 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಮುಂದಿದ್ದಾರೆ. ಕಾಂಗ್ರೆಸ್‌ ನ ಅಂಜಲಿ ನಿಂಬಾಳಕರ್‌ ಅವರಿಗೆ ತೀವ್ರ ಹಿನ್ನಡೆಯಾಗಿದ್ದು, ಸೋಲು ಬಹುತೇಕ ನಿಶ್ಚಿತ ಎಂದು ಹೇಳಲಾಗುತ್ತಿದೆ.

  1.  

ಉತ್ತರ ಕನ್ನಡ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರಿದ್ದರು ಸೋಲು ಎದುರಾಗಿರುವುದು ಮುಜಗರ ತಂದಿದೆ. ಇನ್ನೂ ಕಾಂಗ್ರೆಸ್‌ ನ ಶಾಸಕರು ಇರುವ ಕಡೆಗಳಲ್ಲಿಯೇ ಕಾಂಗ್ರೆಸ್‌ ಗೆ ಕಡಿಮೆ ಮತಗಳು ಬಿದ್ದಿವೆ. ಕಾಂಗ್ರೆಸ್‌ ಶಾಸಕರು ಇರುವ ಕಡೆಗಳಲ್ಲಿಯೇ ಕಾಗೇರಿ ಅವರಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಅದು ಮತಗಳಾಗಿ ಬದಲಾಗಿದ್ದು, ಅನಂತ ಕುಮಾರ್‌ ಹೆಗಡೆ ಅವರು ಪ್ರಚಾರಕ್ಕೆ ಬಾರದೇ ಇದ್ದಾಗಲು ಬಿಜೆಪಿ ಉತ್ತಮ ಫಲಿತಾಂಶ ದಾಖಲೆ ಆಗಿದೆ. ಬಹುತೇಕ ಉತ್ತರ ಕನ್ನಡ ಬಿಜೆಪಿ ಪಾಲಾಗಿದೆ.
ಕಾಗೇರಿ ಅವರು 11 ನೇ ಸುತ್ತಿನಲ್ಲಿ 4,84,456 ಮತಗಳನ್ನ ಪಡೆದಿದ್ದಾರೆ. ಇನ್ನೂ ಕಾಂಗ್ರೆಸ್‌ ನ ಅಂಜಲಿ ನಿಂಬಾಳಕರ ಅವರು 261038 ಮತ ಪಡೆದಿದ್ದಾರೆ.ಕಾಗೇರಿ ಅವರು 223418 ಮತಗಳ ಅಂತರದಿಂದ ಮುಂದೇ ಇದ್ದಾರೆ.

12 ನೇ ಸುತ್ತಿನಲ್ಲಿ ಬಿಜೆಪಿ ಕಾಗೇರಿ ಅವರಿಗೆ 528718 ಮತಗಳನ್ನು ದಾಖಲಿಸಿದ್ದಾರೆ. ಇನ್ನೂ ಕಾಂಗ್ರೆಸ್‌ ನ ಅಂಜಲಿ ನಿಂಬಾಳಕರ್‌ ಅವರು 282781 ಮತ ಪಡೆದಿದ್ದಾರೆ. ಸುಮಾರು 245937 ಮತಗಳ ಅಂತರ ಇದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com