Breaking News

ಕೇರಳ, ಈಶಾನ್ಯ ರಾಜ್ಯಗಳಲ್ಲಿ ಏಕಕಾಲದಲ್ಲಿ ಮುಂಗಾರು ಎಂಟ್ರಿ: ಹವಾಮಾನ ಇಲಾಖೆ

 

ನವದೆಹಲಿ: ಈ ಬಾರಿ ಮುಂಗಾರು ಕೇರಳ ಹಾಗೂ ಈಶಾನ್ಯ ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಒಂದೇ ಬಾರಿಗೆ ಪ್ರವೇಶ ಪಡೆಯಲಿದ್ದು, 24 ಗಂಟೆ ಅಥವಾ ಅದಕ್ಕೂ ಮೊದಲೇ ಮುಂಗಾರು ಪ್ರವೇಶ ಮಾಡುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಪ್ರಕಟಣೆ ತಿಳಿಸಿದೆ.

  1.  

ಮುಂಗಾರು ಮಾರುತ ಸಾಮಾನ್ಯವಾಗಿ ಕೇರಳಕ್ಕೆ ಜೂನ್ 1 ರಂದು ಪ್ರವೇಶ ಪಡೆದ ಬಳಿಕ ಅಂದರೆ ಜೂನ್ 5 ರ ವೇಳೆಗೆ ಈಶಾನ್ಯ ಹಾಗೂ ಇತರ ಪ್ರದೇಶಗಳನ್ನು ಪ್ರವೇಶ ಮಾಡುತ್ತವೆ. ಈಗ ಏಕಕಾಲಕ್ಕೆ ಕೇರಳ ಹಾಗೂ ಈಶಾನ್ಯ ರಾಜ್ಯಗಳನ್ನು ಮುಂಗಾರು ಪ್ರವೇಶ ಮಾಡುವ ವಿದ್ಯಮಾನಗಳು ನಡೆದಿವೆ. ಮೋರಾ ಚಂಡಮಾರುತದಿಂದಾಗಿ ಪೂರ್ವ ಕೇಂದ್ರದ ಬಂಗಾಳ ಕೊಲ್ಲಿಯಲ್ಲಿ ಮುಂಗಾರು ಮಾರುತ ರೂಪುಗೊಂಡಿವೆ. ಈ ಬಾರಿ ಕಳೆದ ವಾರ ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡ ರೇಮಲ್ ಚಂಡಮಾರುತ ಏಕಕಾಲದ ಪ್ರವೇಶಕ್ಕೆ ಕಾರಣ ಎಂದು ಇಲಾಖೆ ತಿಳಿಸಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com