Breaking News

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಇನ್ ಸೈಟ್ಸ್ ಕೇರ್ ನಿಂದ ಪ್ರತಿಷ್ಠಿತ ಪ್ರಶಸ್ತಿ, ವೈದ್ಯರ ತಂಡದ ಸಾಧನೆ

 

ಮಣಿಪಾಲ: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆ ಸಂತಾನೋತ್ಪತ್ತಿ ಔಷಧ ಮತ್ತು ಶಸ್ತ್ರಚಿಕಿತ್ಸೆ ವಿಭಾಗಕ್ಕೆ ಇನ್ ಸೈಟ್ಸ್ ಕೇರ್ ನಿಂದ ಅತ್ಯಂತ ದೇಶದ ವಿಶ್ವಾಸಾರ್ಹ ಐವಿಎಫ್ ಮತ್ತು ಫರ್ಟಿಲಿಟಿ ಫಲವತ್ತತೆ ಕೇಂದ್ರಗಳಲ್ಲಿಒಂದು ಎಂಬ ಪ್ರಶಸ್ತಿಗೆ ಭಾಜನವಾಗಿದೆ.

ಆಸ್ಪತ್ರೆ ಆರೋಗ್ಯ ಸೇವೆ, ವೈದ್ಯಕೀಯ ಸಂಶೋಧನೆಗಳು ಮತ್ತು ಆರೋಗ್ಯ ವಿತರಣೆ ಹಾಗೂ ಸಹಾನುಭೂತಿ ವಿಧಾನದಲ್ಲಿ ಗಮನಾರ್ಹ ಪ್ರಗತಿ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಮಣಿಪಾಲದ ಫಾರ್ಚೂನ್ ಇನ್ ವ್ಯಾಲಿ ವ್ಯೂನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿವಿಧ ಕಾರ್ಯವಿಧಾನಗಳ ಮೂಲಕ 10 ಸಾವಿರಕ್ಕೂ ಹೆಚ್ಚು ಶಿಶುಗಳ ಜನನವನ್ನು ಸುಲಭಗೊಳಿಸುವಲ್ಲಿ ಮಾರ್ಕ್ ಪ್ರಮುಖ ಪಾತ್ರ ವಹಿಸಿದೆ. ಮೊದಲ ಐವಿಎಫ್‌ ಮಗುವಿಗೆ ಈಗ 25 ವರ್ಷ. ಇನ್‌ಸೈಟ್ಸ್ ಕೇರ್ ಪ್ರಶಸ್ತಿ ಆರೋಗ್ಯ ಸೇವಾ ಸಂಸ್ಥೆಗಳಿಗೆ ನೀಡಲಾಗುವ ಪ್ರತಿಷ್ಠಿತ ಮನ್ನಣೆ ಆಗಿದ್ದು, ಆರೋಗ್ಯ ಸೇವೆಗಳು, ವೈದ್ಯಕೀಯ ಸಂಶೋಧನೆ ಮತ್ತು ಆರೋಗ್ಯ ವಿತರಣೆಯಲ್ಲಿ ಸಹಾನುಭೂತಿ ಸಂಸ್ಕೃತಿ ಬೆಳೆಸುವಲ್ಲಿ ಅಸಾಧಾರಣ ಕಾರ್ಯಕ್ಷಮತೆ ಪ್ರದರ್ಶಿಸಿದೆ. ಈ ಪ್ರಶಸ್ತಿ ಆಯಾ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧನೆ ಮಾಡಿದ ಸಂಸ್ಥೆಗಳನ್ನು ಗುರುತಿಸಿ ನೀಡಲಾಗುತ್ತದೆ.

  1.  

ಮಾಹೆ ಮಣಿಪಾಲ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಕೇಂದ್ರದ ಸಾಧನೆಗಳ ಬಗ್ಗೆ ನಮಗೆ ಅಪಾರ ಹೆಮ್ಮೆ ಇದೆ. ತಂಡದ ಸಮರ್ಪಣೆ ಮತ್ತು ವೈದ್ಯರ ಪರಿಣತಿ ಸಾವಿರಾರು ಕುಟುಂಬಕ್ಕೆ ಬೆಳಕು ನೀಡಿದೆ. ಇನ್‌ಸೈಟ್ಸ್ ಕೇರ್‌ ಈ ಮನ್ನಣೆಯು ಅವರ ಕಠಿಣ ಪರಿಶ್ರಮ ಮತ್ತು ಅವರು ಒದಗಿಸುವ ಸಹಾನುಭೂತಿ ಕಾಳಜಿಗೆ ಸಾಕ್ಷಿ ಎಂದು ಹೇಳಿದರು.

ಸಂತಾನೋತ್ಪತ್ತಿ ಔಷಧ ಮತ್ತು ಶಸ್ತ್ರಚಿಕಿತ್ಸೆ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಪ್ರತಾಪ್ ಕುಮಾರ್ ಪ್ರಾಸ್ತಾವಿಕ ಮಾತನಾಡಿ, 1990 ರಲ್ಲಿ ಪ್ರಾರಂಭವಾದಾ ಗಿನಿಂದ ಮಾರ್ಕ್ ಕೇಂದ್ರವು ಬಂಜೆತನದ ಕ್ಷೇತ್ರದಲ್ಲಿ ನೀಡಿರುವ ಗಮನಾರ್ಹ ಸಾಧನೆಗಳ ಕುರಿತು ಮಾಹಿತಿ ನೀಡಿದರು.
ಮಾರ್ಕ್ ಮೂಲಭೂತ ಕಾರ್ಯವಿಧಾನಗಳೊಂದಿಗೆ ಪ್ರಾರಂಭವಾಯಿತು ಮತ್ತು 1998 ರಲ್ಲಿ ಟೆಸ್ಟ್ ಟ್ಯೂಬ್ ಬೇಬಿ ವಿಧಾನವನ್ನು ಪರಿಚಯಿಸಿತು ಎಂದರು.

ಮಾರ್ಕ್ ನಲ್ಲಿ ಪ್ರಾದ್ಯಾಪಕ ಮತ್ತು ಮುಖ್ಯ ಭ್ರೂಣಶಾಸ್ತ್ರಜ್ಞ ವಿಭಾಗದ ಡಾ. ಸತೀಶ್ ಅಡಿಗ ಅವರು ಮಾತನಾಡಿ, ನುರಿತ ಭ್ರೂಣಶಾಸ್ತ್ರಜ್ಞರ ತಂಡದೊಂದಿಗೆ ಟೆಸ್ಟ್ ಟ್ಯೂಬ್ ಬೇಬಿ ಕಾರ್ಯವಿಧಾನಗಳ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದರು.
ಮಾಹೆ ಮಣಿಪಾಲದ ಸಿಒಒ ಸಿ.ಜಿ.ಮುತ್ತಣ್ಣ, ಮಾಹೆ ಮಣಿಪಾಲದ ಭೋದನಾ ಆಸ್ಪತ್ರೆಗಳ ಸಿಒಒ ಡಾ.ಆನಂದ್ ವೇಣುಗೋಪಾಲ್, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಹಾಗೂ ಮಾರ್ಕ್ ತಂಡದವರು ಇದ್ದರು.

ಪ್ರಾಧ್ಯಾಪಕ ಡಾ.ಪ್ರಶಾಂತ್ ಕೆ ಅಡಿಗ, ಸಹಪ್ರಾಧ್ಯಾಪಕಿ ಡಾ.ಅಂಜಲಿ ಸುನೀಲ್ ಮುಂಡ್ಕೂರ್, ಸಹಪ್ರಾಧ್ಯಾಪಕಿ ಡಾ.ವಿದ್ಯಾಶ್ರೀ ಜಿ ಪೂಜಾರಿ ಸೇರಿದಂತೆ ತಂಡದ ಇತರ ಪ್ರಮುಖ ಸದಸ್ಯರನ್ನು ವಿಶ್ವವಿದ್ಯಾಲಯ ಮತ್ತು ಆಸ್ಪತ್ರೆಯ ಅಧಿಕಾರಿಗಳು ಅಭಿನಂದಿಸಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com