Breaking News

ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಭೂ ಅಗೆತ ನಿಷೇಧ: ಆಯುಕ್ತ ಆನಂದ್

 

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜೂನ್ ನಿಂದ ಸೆಪ್ಟೆಂಬರ್ ವರಿಗೆ ಮಳೆ ಇರುವ ಕಾರಣದಿಂದ ಯಾವುದೇ ರೀತಿಯ ಭೂ ಅಗೆತ ಮಾಡುವುದನ್ನು ನಿಷೇಧ ಹಾಕಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಆನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  1.  

ಇದನ್ನು ಮೀರಿ ಯಾರಾದರೂ ಭೂ ಅಗೆತಕ್ಕೆ ಮುಂದಾಗಿ ಕಟ್ಟಡಗಳ ಮೂಲಕ ಯಾವುದೇ ರೀತಿಯ ದುರಂತ ಅಥವಾ ಪ್ರಾಣಪಾಯ ಸಂಭವಿಸಿದಲ್ಲಿ ಕಟ್ಟಡದ ಮಾಲೀಕರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಜೂನ್ 1 ರಿಂದ ಸೆಪ್ಟೆಂಬರ್ ತಿಂಗಳೊಳಗೆ ಪಾಲಿಕೆ ವ್ಯಾಪ್ತಿಯಲ್ಲಿ ಹೊಸದಾಗಿ ಯಾವುದೇ ಕಟ್ಟಡ ನಿರ್ಮಾಣ ಅಥವಾ ಅಭಿವೃದ್ಧಿ ಸಂಬಂಧ ನೆಲವನ್ನು ಅಗೆಯಬಾರದು ಹಾಗೂ ಮಳೆಗಾಲ ಮುಗಿದ ನಂತರ ಕಾಮಗಾರಿಯನ್ನು ಪ್ರಾರಂಭಿಸಬೇಕು. ಗುಡ್ಡವನ್ನು ಅಗೆದು ಜಮೀನ ಅನ್ನು ಸಮತಟ್ಟುಗೊಳಿಸಿ, ಮಣ್ಣು ಸಾಗಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com