Breaking News

ಶಾಲೆಯ ಆವರಣಗೋಡೆ ಕುಸಿದು ಬಿದ್ದು ಬಾಲಕಿ ಸಾವು, ಸ್ಥಳಕ್ಕೆ ತಹಶೀಲ್ದಾರ್‌ ಭೇಟಿ

 

ಮಂಗಳೂರು: ಹರೇಕಳ ಗ್ರಾಮದ ನ್ಯೂಪಡ್ಪು ಶಾಲೆಯ ಆವರಣ ಗೋಡೆ ಕುಸಿದ ಪರಿಣಾಮ ಬಾಲಕಿ ಮೃತಪಟ್ಟ ಘಟನೆ ಸಂಭವಿಸಿದೆ‌.

  1.  

ಮೃತ ಬಾಲಕಿ ಸಿದ್ದೀಕ್ ಎಂಬುವವರ ಪುತ್ರಿ ಶಾಝಿಯಾ ಬಾನು (7) ಎಂದು ಗುರುತಿಸಲಾಗಿದೆ.
ಹರೇಕಳದ ನ್ಯೂಪಡ್ಪು ಎಂಬಲ್ಲಿ ಹರೇಕಳ ಹಾಜಬ್ಬರ ಪ್ರಯತ್ನದಿಂದ ಆರಂಭಗೊಂಡ ಈ ಸರ್ಕಾರಿ ಶಾಲೆಯಲ್ಲಿ ಮುಡಿಪು ಕಾಲೇಜು ವಿದ್ಯಾರ್ಥಿಗಳಿಂದ ಎನ್ ಎಸ್ ಎಸ್ ಶಿಬಿರ ನಡೆಯುತ್ತಿತ್ತು. ಇದೇ ಶಾಲೆಯಲ್ಲಿ ಈಕೆ 3 ನೇ ತರಗತಿ ವಿದ್ಯಾರ್ಥಿನಿ ಆಗಿದ್ದು ಗೇಟ್ ನಲ್ಲಿ ಈಕೆ ಆಟವಾಡುತ್ತಿದ್ದಾಗ ಗೇಟ್ ಸಮೇತ ಆವರಣ ಗೋಡೆ ಈಕೆ ಮೇಲೆ ಬಿದ್ದಿದೆ. ಕೂಡಲೇ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು, ಆದರೆ ಚಿಕಿತ್ಸೆಗೆ ಸ್ಪಂದಿಸದೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ‌ ಉಳ್ಳಾಲ ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com