Breaking News

ಕರಾವಳಿಯ ಮಂಗಳೂರಿನಲ್ಲಿ ಕಂಫರ್ಟ್- ಟೆಕ್ ಬ್ರಾಂಡ್ ದಿ ಸ್ಲೀಪ್ ಕಂಪನಿಯ ನೂತನ ಮಳಿಗೆ ಶುಭಾರಂಭ

 

ಮಂಗಳೂರು: ಕಂಫರ್ಟ್- ಟೆಕ್ ಬ್ರಾಂಡ್ ದಿ ಸ್ಲೀಪ್ ಕಂಪನಿ (ಟಿಎಸ್ ಸಿ) ಕರಾವಳಿಯ ಮಂಗಳೂರಿನಲ್ಲಿ ಮೊದಲ ಮಳಿಗೆಗೆ ಮಂಗಳವಾರ ಶುಭಾರಂಭ ಮಾಡಿದ್ದು, ಇಲ್ಲಿನ ಸಿಟಿ ಸೆಂಟರ್ ಮಾಲ್ 3ನೇ ಮಹಡಿಯಲ್ಲಿ ಸ್ಲೀಪ್ ಕಂಪನಿ ಹೊಸ ಮಳಿಗೆಗೆ ಕಂಪನಿಯ ಸಿಒಒ ಕರಣ್ ಸಿಂಗ್ಲಾ ಚಾಲನೆ ನೀಡಿದರು.

ಈ ವೇಳೆ ಅವರು ಮಾತನಾಡಿ, ಬೆಂಗಳೂರಿನಲ್ಲಿ ಈಗಾಗಲೇ 14 ಮಳಿಗೆಗಳು ಕಾರ್ಯಾರಂಭ ಮಾಡಿದ್ದು, ಮಂಗಳೂರಿನಲ್ಲಿ15ನೇ ನೂತನ ಮಳಿಗೆಯನ್ನು ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವಿನ್ಯಾಸ ಮಾಡಲಾಗಗಿರುವ ಉತ್ಪನ್ನಗಳನ್ನು ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದರು.

ಗ್ರಾಹಕರ ವಿವಿಧ ಅಗತ್ಯ ಪೂರೈಸಲು ವಿನ್ಯಾಸಗೊಳಿಸಲಾದ ಪೇಟೆಂಟ್ ಸ್ಮಾರ್ಟ್ಗ್ರಿಡ್ ಹಾಸಿಗೆಗಳು, ಸ್ಮಾರ್ಟ್ ರಿಕ್ಲೈನರ್ ಹಾಸಿಗೆಗಳು, ದಿಂಬುಗಳು, ಕಚೇರಿ ಉಪಯುಕ್ತಕ್ಕೆ ಬೇಕಾದ ಕುರ್ಚಿಗಳು ಮತ್ತು ರಿಕ್ಲೈನರ್ ಸೋಫಾ ಸೇರಿದಂತೆ ವಿವಿಧ ಉತ್ಪನ್ನಗಳು ಲಭ್ಯ ಇವೆ. ಮಂಗಳೂರು ಮತ್ತು ಸುತ್ತಲಿನ ಗ್ರಾಹಕರು ಯಾವುದೇ ಕಿರಿಕಿರಿ ಹಾಗೂ ಒತ್ತಡ ಮುಕ್ತ ನಿದ್ರೆಗೆ ಕಂಪನಿ ಹೊಸ ವಿನ್ಯಾಸದಲ್ಲಿ ಹಾಸಿಗೆಗಳನ್ನು ಕೇಂದ್ರದಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂದರು.

  1.  

ಆರಾಮದಾಯಕ ನಿದ್ರೆ ಅಗತ್ಯ ಎಂದು ತಜ್ಞರು ಹೇಳುತ್ತಾರೆ. ಆದರೆ ವರ್ಷದಲ್ಲಿ, ಕರ್ನಾಟಕ ಸರಕಾರವು ನಡೆಸುತ್ತಿರುವ ಟೆಲಿ-ಮೆಂಟಲ್ ಆರೋಗ್ಯ ಸಹಾಯವಾಣಿಗೆ ಬಂದ ಸಹಾಯವಾಣಿ ಕರೆಗಳಲ್ಲಿ ಹೆಚ್ಚಿನವು ನಿದ್ರೆಗೆ ಸಂಬಂಧಿಸಿದ್ದೇ ಆಗಿರುವುದು ಬಾರಿ ಆತಂಕಕ್ಕೆ ಕಾರಣ ಎಂದು ಹೇಳಬಹುದು.

‌ ಮಂಗಳೂರಿನಲ್ಲಿ ಸ್ಲೀಪ್ ಕಂಪನಿ ಆರಂಭಿಸಿರುವ ಮೊದಲ ಮಳಿಗೆ ರಾಜ್ಯದಲ್ಲಿ ವ್ಯಾಪ್ತಿಯನ್ನು ವಿಸ್ತರಿಸುವ ಮತ್ತು ಜನರ ಜೀವನ ಗುಣಮಟ್ಟವನ್ನು ಹೆಚ್ಚಿಸುವ ನಮ್ಮ ಬದ್ಧತೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಆಗಿದೆ. ಗುಣಮಟ್ಟದ ನಿದ್ರೆಗೆ ಅಗತ್ಯವಿರುವ ಉತ್ಪನ್ನಗಳು ಮತ್ತು ಆರಾಮದಾಯಕ ಆಸನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿ ದಿ ಸ್ಲೀಪ್ ಕಂಪನಿ ರಾಜ್ಯದಲ್ಲಿ ಇಂತಹ ಮಾರಾಟ ಮಳಿಗೆ ಆರಂಭಿಸುತ್ತಿದೆ ಎಂದರು.

ಸ್ಲೀಪ್ ಕಂಪನಿ ಗಮನಾರ್ಹ ಬೆಳವಣಿಗೆಯನ್ನು ದಾಖಲಿಸುತ್ತಿದ್ದು ಕೇವಲ ನಾಲ್ಕು ವರ್ಷಗಳಲ್ಲಿ ರಾಷ್ಟ್ರದಾದ್ಯಂತ ತನ್ನ ಅಸ್ತಿತ್ವವನ್ನು ವಿಸ್ತರಿಸಿದೆ. 2023ರ ಸೆಪ್ಟೆಂಬರ್‌ಗೆ ಅನ್ವಯವಾಗುವಂತೆ ಕಂಪನಿ 350 ಕೋಟಿಗಳ ವಹಿವಾಟು ನಡೆಸಿದ್ದು, ಎರಡು ವರ್ಷಗಳಲ್ಲಿ ವಹಿವಾಟು ಪ್ರಮಾಣ ಆರು ಪಟ್ಟು ಹೆಚ್ಚಿದೆ. ದಿ ಸ್ಲೀಪ್ ಕಂಪನಿ ಈ ವರ್ಷದ ಅಂತ್ಯದ ವೇಳೆಗೆ ಇನ್ನೂ 150 ಮಳಿಗೆಗಳನ್ನು ತೆರೆವ ಗುರಿ ಹೊಂದಲಾಗಿದೆ ಎಂದರು.

ಈ ವೇಳೆ ಕಂಪನಿಯ ಸಿಬ್ಬಂದಿ ಸೇರಿದಂತೆ ಹಲವರು ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com