Breaking News

ಬಸವಣ್ಣನವರ ತತ್ವಗಳು ಎಲ್ಲರಿಗೂ ಮಾದರಿ: ಎಡಿಸಿ ಡಾ.ಸಂತೋಷ್ ಕುಮಾರ್

 

ಮಂಗಳೂರು: ಬಸವಣ್ಣನವರ ವಚನಗಳು, ತತ್ವಗಳು ಪ್ರಸ್ತುತ ಕಾಲಘಟ್ಟಕ್ಕೆ ಅನ್ವಹಿಸುವಂತದ್ದು, ನಾವೆಲ್ಲರೂ ಅವುಗಳನ್ನು ಆದರ್ಶವಾಗಿ ಇಟ್ಟುಕೊಂಡು ಜೀವಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ  ಅವರು ಮಾತನಾಡಿದರು.

12 ನೇ ಶತಮಾನದಲ್ಲಿ  ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸುವ ಮೂಲಕ ಇಂದಿನ ಸಾಮಾಜಿಕ-ಧಾರ್ಮಿಕ ಸಂಸತ್ತು ಆಡಳಿತವನ್ನು ಅಂದಿನ ಕಾಲದಲ್ಲಿಯೇ ಕಾರ್ಯರೂಪಕ್ಕೆ ತಂದರು ಎಂದರು.

ಬಸವಣ್ಣನವರ ವಚನಗಳು, ತತ್ವಗಳು ಕೇವಲ ಒಂದೇ ಸಮಾಜಕ್ಕೆ ಸೀಮಿತವಾದದ್ದಲ್ಲ  ಉತ್ತಮ ಜೀವನಕ್ಕಾಗಿ ಅವರ ತತ್ವಗಳನ್ನು ನಮ್ಮ ಜೀವನದಲ್ಲಿ  ಅಳವಡಿಸಿಕೊಂಡಾಗ ಮಾತ್ರ ಅವರ ಜಯಂತಿಯ ಆಚರಣೆಯ ಉದ್ದೇಶ ನೆರವೇರಿದಂತೆ ಎಂದರು.

  1.  

ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಬಸವ ಜಯಂತಿ ಸರಳವಾಗಿ ಆಚರಿಸಲಾಯಿತು.

ಕರಾವಳಿ ವೀರಶೈವ   ಲಿಂಗಾಯಿತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್. ಎಸ್ ಗುರುಮೂರ್ತಿ,   ಪ್ರಧಾನ ಕಾರ್ಯದರ್ಶಿ   ಚನ್ನಬಸಪ್ಪ ರೋಡ್ಡಿ,  ನಿರ್ದೇಶಕರಾದ ಎಚ್. ಎಸ್ ರುದ್ರಪ್ಪ, ಚೆನ್ನೇಶ್, ಸಿದ್ದೇಶ್ ಎಸ್. ಎಚ್, ಷಣ್ಮುಗ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಬ್ಬಂದಿ ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ  ರಾಜೇಶ್. ಜಿ ಸ್ವಾಗತಿಸಿದರು.

 

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com