Breaking News

ಉ.ಕ. ಲೋಕಸಭಾ ಚುನಾವಣೆಗೆ ಸಿಬ್ಬಂದಿ ಸಜ್ಜು, ಮತದಾನಕ್ಕೆ ಸ್ವಾಗತಿಸಿದ ಡಿಸಿ ಗಂಗೂಬಾಯಿ ಮಾನಕರ

 

ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಮತಗಟ್ಟೆ ಅಧಿಕಾರಿಗಳು, ಮತಯಂತ್ರ ಸೇರಿದಂತೆ ಇನ್ನಿತರೆ ಸಾಮಗ್ರಿಗಳ ಜತೆಗೆ, ಪೊಲೀಸ್ ಬಂದೋಬಸ್ತ್ ಜತೆಗೆ ನಿಯೋಜಿತ ಮತಗಟ್ಟೆಗಳಿಗೆ ಸೋಮವಾರ ಸುರಕ್ಷಿತವಾಗಿ ತಲುಪಿದ್ದು, ಮೇ 7 ರಂದು ಎಲ್ಲಾ ಮತದಾರರು ತಪ್ಪದೇ ಮತದಾನದ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

ಕಾರವಾರದ ಸಂತ್ ಮೈಕಲ್ ಶಾಲೆಯಲ್ಲಿ ನಡೆದ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿ ಉದ್ದೇಶಿಸಿ ಮಾತನಾಡಿ, ಸುಗಮ ರೀತಿಯಲ್ಲಿ ,ಯಶಸ್ವಿಯಾಗಿ ಚುನಾವಣಾ ಕರ್ತವ್ಯವನ್ನು ನಿರ್ವಹಿಸುವಂತೆ ಸಿಬ್ಬಂದಿ   ಪ್ರೋತ್ಸಾಹಿಸಿದರು. ಮಸ್ಟರಿಂಗ್ ಕೇಂದ್ರದಲ್ಲಿ ಸಿಬ್ಬಂದಿಗೆ ಉತ್ತಮ ಭೋಜನ ವ್ಯವಸ್ಥೆ ಒದಗಿಸಲಾಗಿತ್ತು. ಮತದಾನದ ಪರಿಕರಗಳೊಂದಿಗೆ ತೆರಳಿದ ಸಿಬ್ಬಂದಿಗೆ ಶುದ್ದ ಕುಡಿವ ನೀರಿನ ಕ್ಯಾನ್, ದೈನಂದಿನ ಬಳಕೆ ಕಿಟ್ ಹಾಗೂ ತುರ್ತು ಆರೋಗ್ಯ ರಕ್ಷಣೆ ಕಿಟ್ ನೀಡಲಾಯಿತು.

  1.  

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆಗಾಗಿ 303 ಮೈಕ್ರೋ ವೀಕ್ಷಕರು, 200 ಮಂದಿ ಸೆಕ್ಟರ್ ಅಧಿಕಾರಿಗಳು, 1977 ಅಧ್ಯಕ್ಷಾಧಿಕಾರಿ, 1977 ಸಹಾಯಕ ಅಧ್ಯಕ್ಷಾಧಿಕಾರಿ, 3954 ಮತಗಟ್ಟೆ ಅಧಿಕಾರಿಗಳು ಹಾಗೂ 1977 ಡಿ ದರ್ಜೆ ನೌಕರರನ್ನು ನೇಮಿಸಲಾಗಿದೆ.

ಲೋಕಸಭಾ ಕ್ಷೇತ್ರದಲ್ಲಿನ ಒಟ್ಟು 1977 ಮತಗಟ್ಟೆಗಳಲ್ಲಿ 8,23,604 ಪುರುಷರು, 8,17,536 ಮಹಿಳೆಯರು ಮತ್ತು 16 ಇತರರು ಸೇರಿದಂತೆ ಒಟ್ಟು 16,41,156 ಮಂದಿ ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದು, ಇದರಲ್ಲಿ 42,404 ಮಂದಿ ಯುವ ಮತದಾರರಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ವಿಶೇಷ ಆಕರ್ಷಣೆಯಾಗಿ 66 ವಿಶೇಷ ಮತಗಟ್ಟೆಗಳನ್ನು ಸಿದ್ದಪಡಿಸಲಾಗಿದ್ದು, ಮಹಿಳಾ ಮತಗಟ್ಟೆ , ವಿಶೇಷಚೇತನ ಮತಗಟ್ಟೆ ಮತ್ತು ಯುವ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ವಿಶೇಷ ರೀತಿಯ ಸಮವಸ್ತ್ರಗಳನ್ನು ನೀಡಲಾಗಿದೆ.

ಮೇ 7 ರಂದು ನಡೆವ ಮತದಾನ ಕಾರ್ಯಕ್ಕೆ ಮತದಾರರು ಚುನಾವಣಾ ಆಯೋಗ ತಿಳಿಸಿರುವ ಪರ್ಯಾಯ ಗುರುತಿನ ದಾಖಲೆಗಳಾದ ಆಧಾರ್ ಕಾರ್ಡ್ ಸೇರಿದಂತೆ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದಾಗಿದೆ. ಮತಗಟ್ಟೆಗಳಲ್ಲಿ ವಿಶೇಷ ಚೇತನ ಮತದಾರರಿಗಾಗಿ ಗಾಲಿ ಕುರ್ಚಿ, ಆದ್ಯತೆ ಮೇಲೆ ಪ್ರವೇಶ, ವಾಹನ ವ್ಯವಸ್ಥೆ ಸಿದ್ಧತೆ ಮಾಡಲಾಗಿದ್ದು, ಸಾರ್ವಜನಿಕರಿಗೆ ಮತಗಟ್ಟೆಗಳಲ್ಲಿ ಸೂಕ್ತ ನೆರಳಿ ವ್ಯವಸ್ಥೆ, ಕುಡಿವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಎಂದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com