Breaking News

ಕ್ಯಾಂಪ್ಕೊ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಡಾ. ಬಿ. ವಿ. ಸತ್ಯನಾರಾಯಣ

 

ಮಂಗಳೂರು: ಪ್ರತಿಷ್ಠಿತ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಡಾ. ಬಿ. ವಿ. ಸತ್ಯನಾರಾಯಣ ಅವರು ನೇಮಕವಾಗಿದ್ದಾರೆ.

ಹಾಲಿ ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ.ಕೃಷ್ಣಕುಮಾರ್ ಅವರ ಅಧಿಕಾರ ಅವಧಿ ಏಪ್ರಿಲ್ 30 ಕ್ಕೆ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಡಾ.ಬಿ.ವಿ.ಸತ್ಯನಾರಾಯಣ ಅವರನ್ನು ನೇಮಕ ಮಾಡಲಾಗಿದೆ. ಮೇ 1 ರಿಂದ ಅನ್ವಯ ಆಗುವಂತೆ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

  1.  

50 ವರ್ಷಗಳಿಂದ ರೈತರ ಹಿತರಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವ ಕ್ಯಾಂಪ್ಕೊದ ಆಡಳಿತ ಮಂಡಳಿಯು ಏ.23 ರಂದು ನಡೆದ ತನ್ನ ಮಂಡಳಿ ಸಭೆಯಲ್ಲಿ ಸಂಸ್ಥೆ ಮುನ್ನಡೆಸುವ ಮಹತ್ತರ ಜವಾಬ್ದಾರಿಯನ್ನು ಡಾ.ಬಿ.ವಿ. ಸತ್ಯ ನಾರಾಯಣ ಅವರಿಗೆ ವಹಿಸುವ ನಿರ್ಣಯ ಅವಿರೋಧವಾಗಿ ತೆಗೆದುಕೊಂಡಿದೆ.

ಡಾ. ಸತ್ಯನಾರಾಯಣ ಅವರು ಈ ಮೊದಲು ಕೆಎಂಎಫ್ ಘಟಕ ಬೆಂಗಳೂರಿನ ಮದರ್ ಡೇರಿ ನಿರ್ದೇಶಕರಾಗಿ, ಕೆ.ಎಂ.ಎಫ್  ಜಂಟಿ ನಿರ್ದೇಶಕರಾಗಿ, ದ.ಕ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತು ಐಡಿಯಲ್ ಐಸ್ ಕ್ರೀಂನ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷರಾಗಿ ಉದ್ಯಮ ಕ್ಷೇತ್ರದಲ್ಲಿ ಅಗಾಧ ಜ್ಞಾನ ಹೊಂದಿರುತ್ತಾರೆ. ಜನವರಿ 2024 ರಲ್ಲಿ ಕ್ಯಾಂಪ್ಕೊದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಡಾ.ಬಿ.ವಿ.ಸತ್ಯನಾರಾಯಣ ನೇಮಕಗೊಂಡಿದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com