Breaking News

ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಕೆ, ಗೋವಾ ಸಿಎಂ ಸಾವಂತ, ರೂಪಾಲಿ ನಾಯ್ಕ್ ಸಾಥ್

 

ಕಾರವಾರ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಸಿದರು. ಮೆರವಣಿಗೆಯೊಂದಿಗೆ ತೆರಳಿ ಅವರು ನಾಮಪತ್ರ ಸಲ್ಲಿಸಿದ್ದು, ಈ ವೇಳೆ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ರಾಜ್ಯ ಪ್ರಧಾ‌ನ ಕಾರ್ಯದರ್ಶಿ ಸುನೀಲ್‌ಕುಮಾರ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ರೂಪಾಲಿ ನಾಯ್ಕ್ , ಕುಮಟಾ ಶಾಸಕ ದಿನಕರ ಶೆಟ್ಟಿ ಖಾನಾಪುರ ಶಾಸಕ ವಿಠ್ಠಲ ಹಲಗೇಕರ, ಸುನೀಲ್ ಹೆಗಡೆ ನಾಮಪತ್ರ ಸಲ್ಲಿಸುವ ವೇಳೆ ಇದ್ದರು.

  1.  

ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಾಮಪತ್ರ ಸಲ್ಲಿಕೆ ವೇಳೆ ಒಟ್ಟು 16.76 ಕೋಟಿ ರೂ. ಮೌಲ್ಯದ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ, ವಾರ್ಷಿಕ ಆದಾಯ ವೈಯಕ್ತಿಕ 36. 31 ಲಕ್ಷ ರೂಪಾಯಿ, ಅವಿಭಕ್ತ ಕುಟುಂಬದ ಆದಾಯ 45,18 ಲಕ್ಷ ರೂ, ಎರಡನೇ ಪುತ್ರಿ ರಾಜಲಕ್ಷ್ಮೀ ಆದಾಯ 5,51,540 ರೂಪಾಯಿ ಇದೆ. ಕೈಯಲ್ಲಿ ಇರುವ ಹಣ 5 ಲಕ್ಷ ರೂ, ಅವಿಭಕ್ತ ಕುಟುಂಬದ ಬಳಿ 1 ಲಕ್ಷ ರೂ, ವಿವಿಧ ಬ್ಯಾಂಕುಗಳಲ್ಲಿರುವ ಎಫ್‌ಡಿ- 1,11,48,727 ರೂ, ಪತ್ನಿ ಬಳಿ 4,72,053 ರೂ, ಅವಿಭಕ್ತ ಕುಟುಂಬಕ್ಕೆ ಸೇರಿದ್ದು 1,08,69,516 ರೂ, ಎರಡನೇ ಪುತ್ರಿ ರಾಜಲಕ್ಷ್ಮೀ ಬಳಿ 8,53,776 ರೂಪಾಯಿ ಇದೆ ಎಂದು ಅಫಿಡವಿಟ್ ನಲ್ಲಿ ಮಾಹಿತಿ ಸಲ್ಲಿಸಿದ್ದಾರೆ.

ಕಾಗೇರಿ ಅವರ ಉಳಿತಾಯ ಖಾತೆಯಲ್ಲಿ 3,04,81,874 ರೂ., ಪತ್ನಿ ಖಾತೆಯಲ್ಲಿ 8,07,552, ಅವಿಭಕ್ತ ಕುಟುಂಬದ್ದು 2,15,34,528, ಅವಿಭಕ್ತ ಕುಟುಂಬದ ಚಾಲ್ತಿ ಖಾತೆಯಲ್ಲಿ 23,50,458 ಇರುವುದಾಗಿ ತಿಳಿಸಿದ್ದಾರೆ. ವಿವಿಧ ಬಾಂಡ್‌ಗಳಲ್ಲಿನ ಹೂಡಿಕೆ 5 ಲಕ್ಷ, ಪೋಸ್ಟ್ ಹೂಡಿಕೆ 27,400 ರೂಪಾಯಿ, ಇನ್ಶುರೆನ್ಸ್ ಪಾಲಿಸಿ 21,25,219, ನೀಡಿರುವ ಸಾಲ(ದೀನದಯಾಳ್ ಟ್ರಸ್ಟ್ ಶಿರಸಿ) 24,50,000 ರೂಪಾಯಿ ಇದೆ.

ಇನ್ನೋವಾ ಕಾರು, 79,303 ರೂ. ಸ್ಕೂಟಿ ಹೊಂದಿದ್ದು, 72,69,500 ರೂ. ಮೌಲ್ಯದ ಆಭರಣ ಹೊಂದಿದ್ದು, ಪತ್ನಿ ಬಳಿ- 61,60,000 ರೂ. ಮೌಲ್ಯದ ಆಭರಣ ಹೊಂದಿರುವುದಾಗಿ ತಿಳಿಸಿದ್ದಾರೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com