Breaking News

ಮಂಗಳೂರು ವಿ.ವಿ ಅಂತರ ಕಾಲೇಜು ಕೊಕ್ಕೊ: ಆಳ್ವಾಸ್ ಕಾಲೇಜಿಗೆ ಚಾಂಪಿಯನ್ ಪಟ್ಟ

 

ಮೂಡುಬಿದಿರೆ: ಇಲ್ಲಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇದೇ 5 ಮತ್ತು 6 ನಡೆದ ಮಂಗಳೂರು ವಿ.ವಿ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಕೊಕ್ಕೊ ಕ್ರೀಡಾಕೂಟದಲ್ಲಿ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿ ಪಡೆದಿದೆ.

  1.  

ಪುರುಷರ ಫೈನಲ್ ಪಂದ್ಯದಲ್ಲಿ ಅತಿಥೇಯ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು ಮಣಿಸಿದ ಆಳ್ವಾಸ್ ಕಾಲೇಜು ಸತತ 16 ನೇ ಬಾರಿ ಚಾಂಪಿಯನ್ ಆಯಿತು.
ಮಹಿಳೆಯರ ವಿಭಾಗದಲ್ಲೂ ಅತಿಥೇಯ ಕಾಲೇಜು ಅನ್ನು ಫೈನಲ್‌ನಲ್ಲಿ ಮಣಿಸಿದ ಆಳ್ವಾಸ್ ಕಾಲೇಜು ಮಹಿಳಾ ತಂಡವು 12 ನೇ ಬಾರಿ ಚಾಂಪಿಯನ್ ಪಟ್ಟವನ್ನು ದಾಖಲಿಸಿತು.

ಪುರುಷರ ವಿಭಾಗದಲ್ಲಿ 20 ತಂಡಗಳು ಹಾಗೂ ಮಹಿಳೆಯರ ವಿಭಾಗದಲ್ಲಿ 18 ತಂಡಗಳು ಭಾಗವಹಿಸಿದ್ದವು. ಚಾಂಪಿಯನ್ ಷಿಪ್ ರೌಂಡ್ ಫೈನಲ್ ಪಂದ್ಯಾಟದಲ್ಲಿ ಆಳ್ವಾಸ್ ಪುರುಷರ ತಂಡವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು
ತಂಡವನ್ನು ಮಣಿಸಿ ಸತತ 16 ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ವಿಜೇತ ತಂಡದ ಆಟಗಾರರ ಅನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com