Breaking News

ಸಿರಸಿ ಮಾರಿಕಾಂಬೆ ಜಾತ್ರೆಗೆ ಹರಿದು ಬಂತು ಭಕ್ತರಿಂದ ಕಾಣೆಕೆ, ಬರೊಬ್ಬರಿ 1.75 ಕೋಟಿ ಸಂಗ್ರಹ

 

ಸಿರಸಿ: ರಾಜ್ಯದ ಅತೀ ದೊಡ್ಡ  ಸಿರಸಿಯ ಮಾರಿಕಾಂಬಾ ಜಾತ್ರೆ 9 ದಿನಗಳನ್ನು ಪೂರೈಸಿದ್ದು, ಅಪಾರ ಸಂಖ್ಯೆಯ ಮಾರಿಕಾಂಬೆ ಭಕ್ತರು ದೇವಿಯ ದರ್ಶನ ಪಡೆದುಕೊಂಡಿದ್ದಾರೆ. ಈ ಬಾರಿ ಮಾರಿಕಾಂಬಾ ಜಾತ್ರೆಯಲ್ಲಿ ಮಾರಿಕಾಂಬಾ ದೇವಸ್ಥಾನಕ್ಕೆ ಅಪಾರ ಪ್ರಮಾಣದಲ್ಲಿ ಕಾಣಿಕೆಗೆ ಹಾಕಿದ್ದು, ಭಕ್ತರು ಹಾಕಿರುವ ಕಾಣಿಕೆಯ ಮೊತ್ತವು ಬರೊಬ್ಬರಿ 1.75 ಕೋಟಿ ಹೆಚ್ಚು ಸಂಗ್ರಹವಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.

ಮಾರ್ಚ್ 19 ರಿಂದ ಜಾತ್ರೆಯ ವೈಭವ ನಡೆದಿದ್ದು, 20 ರಿಂದ ಮಾರಿಕಾಂಬೆಯ ದರ್ಶನ ಆರಂಭವಾಯಿತು. 1. 75 ಕೋಟಿ ಕಾಣಿಕೆ ಸಂಗ್ರಹ 27 ರವರೆಗಿಂದು ಹೇಳಲಾಗುತ್ತಿದ್ದು, ಬಿಡಕಿಬೈಲ್ ಜಾತ್ರಾ ಗದ್ದುಗೆಯಲ್ಲಿ ಇಡಲಾಗಿದ್ದ ಕಾಣಿಕೆ ಹುಂಡಿಗಳಲ್ಲಿ ಭಕ್ತರು ಹರಕೆಯ ಕಾಣಿಕೆ ಸಲ್ಲಿಸಿದ್ದಾರೆ.  ಜಾತ್ರೆ ಮುಕ್ತಾಯದ ನಂತರ ಕಾಣಿಕೆ ಹುಂಡಿಗಳನ್ನು ದೇವಸ್ಥಾನದಲ್ಲಿ ತೆರೆದು ಎಣಿಕೆ ಮಾಡಲಾಗಿದೆ. ನೂರಕ್ಕೂ ಹೆಚ್ಚು ಸ್ವಯಂ ಸೇವಾ ಕಾರ್ಯಕರ್ತರು, ದೇವಸ್ಥಾನ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ ಎಣಿಕೆ ಕಾರ್ಯ ನಡೆಸಿದರು.

  1.  

ಬೆಳ್ಳಿ, ಬಂಗಾರ ಸೇರಿದಂತೆ ಹಣವು ಸಂಗ್ರಹ ಆಗಿದೆ. 2.60 ಲಕ್ಷ ಲಾಡು ಖಾಲಿಯಾಗಿವೆ. 1 ಲಕ್ಷ ಭಕ್ತರಿಗೆ ಉಚಿತ ಅನ್ನ ಪ್ರಸಾದ ವಿತರಿಸಲಾಗಿದೆ. ತಲಾ 2 ಲಕ್ಷಕ್ಕೂ ಹೆಚ್ಚಿನ ಉಡಿ, ಕುಂಕುಮ ಪ್ರಸಾದ ದೇವಿಗೆ ಸಮರ್ಪಣೆ ಆಗಿವೆ.

 

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com