Breaking News

ಮಂಗಳೂರಿನಲ್ಲಿ ಇದೇ 20 ರಿಂದ ನಿರ್ದಿಗಂತ ರಂಗೋತ್ಸವ, ನಟ ನಾನಾ ಪಾಟೇಕರ್ ಉದ್ಘಾಟನೆ: ಪ್ರಕಾಶ್ ರಾಜ್

 

ಮಂಗಳೂರು: ನಾಟಕ, ಸಂಗೀತ, ಸಿನಿಮಾ, ಸಾಹಿತ್ಯ ಕ್ಷೇತ್ರಗಳ ಸಾಧಕರು ಮತ್ತು ಕಲಾವಿದರ ಸಮ್ಮಿಲನದೊಂದಿಗೆ ನೇಹದ ನೇಯ್ಗೆ, ನಿರ್ದಿಗಂತ ರಂಗೋತ್ಸವ ಇದೇ 20 ರಿಂದ 25 ರವರಿಗೆ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಎಲ್ ಸಿಆರ್ ಐ ಸಭಾಂಗಣದಲ್ಲಿ ನಡೆಯಲಿದ್ದು, ನಟ ನಾನಾ ಪಾಟೇಕರ್ ಉದ್ಘಾಟನೆ ಮಾಡಲಿದ್ದಾರೆ ಎಂದು ಬಹುಭಾಷಾ  ನಟ ಪ್ರಕಾಶ್ ರಾಜ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಟ, ನಿರ್ದೇಶಕ ರಂಗಭೂಮಿ ಕಲಾವಿದ ನಾನಾ ಪಾಟೇಕರ್ ಅವರು ಮಾರ್ಷ್  20 ರಂದು ಸಂಜೆ 5. 30ಕ್ಕೆ ರಂಗೋತ್ಸವ’ಕ್ಕೆ ಚಾಲನೆ ನೀಡಲಿದ್ದಾರೆ. ಅದೇ ದಿನ ರಾತ್ರಿ 7 ಗಂಟೆಗೆ ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ಪ್ರಥಮ ದಿನದ ನಾಟಕ ಪ್ರದರ್ಶನ ಸಮಾರಂಭದ ವೇದಿಕೆಯಲ್ಲಿ ನಡೆಯಲಿದೆ ಎಂದರು.

ನೇಹ’ ಪದವು ಸಂವಿಧಾನದ ಪೀಠಿಕೆಯಲ್ಲಿಯನ ಮೈತ್ರಿ ಪದದಿಂದ ಪ್ರೇರಿತವಾಗಿದ್ದರೆ, ‘ನೇಯ್ಗೆ ‘ಪದವು ರಂಗಕಾರ್ಯಗಳ ಕಟ್ಟುವಿಕೆ, ಭಿನ್ನ ಕಾಲ ದೇಶಗಳ ಸಹೋದರತೆಯ ಹೆಣೆಯುವಿಕೆ ಮುಂತಾದ ಅರ್ಥಗಳನ್ನು ಹೊಂದಿದೆ. ರಂಗೋತ್ಸವದಲ್ಲಿ ಸ್ಥಳೀಯ ಜನಪದ ಮಹಾಕಾವ್ಯದ ನಾಯಕ ಮಂಟೇಸ್ವಾಮಿ, ಫುಟ್ಬಾಲ್ ಆಟಗಾರ ಓಝಿಲ್, ಹಾಡುಗಾರ ಬಾಬ್ ಮಾರ್ಲೆ, ಬರಹಗಾರ ಕಾಮು ಮುಂತಾದ ಹಲವರ ಕಥನಗಳು ನಾಟಕವಾಗಿ ಪ್ರದರ್ಶನಗೊಳ್ಳಲಿದೆ ಎಂದರು.

  1.  

ಕಲಾವಿದ ಶ್ರೀಪಾದ್ ಭಟ್ ಅವರು ಮಾತನಾಡಿ, ಪ್ರಸಕ್ತ ಯುವಜನತೆ ಜಗತ್ತಅನ್ನು ಹೇಗೆ ನೋಡುತ್ತಿದೆ ಎಂಬುದನ್ನ ಅರ್ಥ ಮಾಡಿಕೊಳ್ಳಲು ನಿರ್ದಿಗಂತ ಯುವ ರಂಗ ನಿರ್ದೇಶಕರಿಗೆ ಫೆಲೋಶಿಪ್ ನೀಡಿದ್ದು, ಈ ಮೂಲಕ ಅವರಿಂದ ಸಿದ್ದಗೊಂಡ ಆರು ನಾಟಕಗಳು ಈ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಸರ್ಕಸ್, ಬೀದಿ ನಾಟಕ, ಆಪ್ತ ರಂಗಭೂಮಿ ಎಲ್ಲ ಸಾಧ್ಯತೆಗಳನ್ನು ಬಳಸಿಕೊಂಡು ಈ ನಾಟಕ ರಚನೆ ಆಗಿದೆ ಎಂದರು.

ರಂಗೋತ್ಸವದಲ್ಲಿ ದೇಶದ ಮತ್ತು ನಾಡಿನ ರಂಗಕರ್ಮಿಗಳು ಸಾಹಿತಿಗಳು ವಿವಿಧ ಕ್ಷೇತ್ರದ ಕಲಾವಿದರು ಭಾಗವಹಿಸಲಿದ್ದಾರೆ. ಈ ಪೈಕಿ ನಾನಾ ಪಾಟೇಕರ್, ಎಚ್.ಎಸ್.ಶಿವಪ್ರಕಾಶ್, ಪ್ರಕಾಶ್ ರಾಜ್, ಕೃಪಾಕರ ಸೇನಾನಿ, ಶಕೀಲ್ ಅಹ್ಮದ್, ಅಚ್ಯುತ್ ಕುಮಾರ್, ಶಶಿಧರ ಅಡಪ, ಶ್ವೇತಾ ರಾಣಿ, ಅರುಣ್ ಲಾಲ್, ಕೆಪಿ ಲಕ್ಷ್ಮಣ್, ಸುಧಾ ಆಡುಕಳ, ಐ.ಕೆ.ಬೊಳುವಾರು, ಕೆ.ವೈ. ನಾರಾಯಣ ಸ್ವಾಮಿ, ಶಶಾಂಕ್ ಸೌಗಲ್, ಕೆ ರಾಮಯ್ಯ, ಸವಿತಾ ರಾಣಿ, ಡಾ ಶ್ರೀಪಾದ ಭಟ್, ಅಭಯಸಿಂಹ, ಸುಮನಾ ಕಿತ್ತೂರು, ಮಂಸೋರೆ, ಹೇಮಂತ್ ರಾವ್, ಈರೇಗೌಡ ಶ್ವೇತಾ ರಾಣಿ ಪಾಲ್ಗೊಳ್ಳಲಿದ್ದಾರೆ ಎಂದರು.

ರೆ. ಫಾ.ಆಲ್ವಿನ್ ಸೆರಾವೋ, ಚಂದ್ರಹಾಸ್ ಉಳ್ಳಾಲ, ಕ್ರಿಸ್ಟೋಫರ್ ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com