Breaking News

ಉ.ಕ ಜಿಲ್ಲೆಯಲ್ಲಿ ಲೋಕ ಸಮರ: ಚೆಕ್ ಪೋಸ್ಟ್ ಗಳ ಫ್ಯಾಕ್ಟ್ ಚೆಕ್ ಗೆ ಮುಂದಾದ ಡಿಸಿ ಮಾನಕರ

 

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಲೋಕ ಸಮರಕ್ಕೆ ವೇದಿಕೆ ಸಜ್ಜಾಗಿದ್ದು, ಕಟ್ಟುನಿಟ್ಟಿನ ನೀತಿ ಸಂಹಿತೆ ಜಾರಿಗೊಳಿಸಿರುವ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ತಪಾಸಣೆಗೆ ಖುದ್ದು ತಾವೇ ಫಿಲ್ಡಿಗೆ ಇಳಿದಿದ್ದಾರೆ. ಚುನಾವಣಾ ಹಿನ್ನಲೆಯಲ್ಲಿ ಮಾಜಾಳಿ ಹಾಕಲಾಗಿರುವ ಚೆಕ್ ಪೋಸ್ಟ್ ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪೊಲೀಸರಿಂದ ಮಾಹಿತಿ ಪಡೆದರು.

ಚೆಕ್ ಪೋಸ್ಟ್ ನಲ್ಲಿ ನಿರಂತರ ಸಿಬ್ಬಂದಿ ಹೆಚ್ಚಿನ ನಿಗಾ ವಹಿಸಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ತಿಳಿಸಿ, ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ಮಾಡುವ  ಸಿಬ್ಬಂದಿಗೆ  ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.

  1.  

ಅಕ್ರಮ ಹಣ ಸಾಗಣೆ ಹಾಗೂ ಚುನಾವಣಾ ನೀತಿ ಸಂಹಿತೆ ಪಾಲನೆ ಮಾಡದೇ ಇರುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದ್ದು, ಮೊದಲ ದಿನವೇ ಅಧಿಕಾರಿಗಳ ಕಾರ್ಯವೈಖರಿಯನ್ನು ಪರೀಕ್ಷೆಯ ಫ್ಯಾಕ್ಟ್ ಚೆಕ್ ಗೆ ಇಳಿದಿದ್ದಾರೆ.

ಜಿಲ್ಲೆಯ ಹಲವು ಕಡೆಗಳಲ್ಲಿ ನಾಕಾಬಂಧಿ ಹಾಕಲಾಗಿದ್ದು, ಗಡಿ ಭಾಗಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.  ಅನಮೋಡ್ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಬಿಗಿ ಕ್ರಮ‌ಕ್ಕೆ ಮುಂದಾಗಿದ್ದು, ಹಾವೇರಿಯಿಂದ ಗೋವಾಕ್ಕೆ ರಾಮನಗರದ ಮಾರ್ಗದ ಮೂಲಕ ತರಕಾರಿ ಮಾರಾಟ ಮಾಡಿ ಮರಳುತಿದ್ದ ವ್ಯಾಪಾರಿಯನ್ನು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ತಪಾಸಣೆ ಮಾಡಿ ದಾಖಲೆ ಇಲ್ಲದೇ ಇರುವ ಹಣವನ್ನು  ವಶಕ್ಕೆ ಪಡೆದು ಹಳಿಯಾಳ ಪೊಲೀಸರಿಗೆ ಒಪ್ಪಿಸಲಾಯಿತು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com