Breaking News

ಗ್ರಾಮ ಪಂಚಾಯಿತಿ ಸದಸ್ಯರ ಒತ್ತಡ ಮುಕ್ತಿಗೆ ಕ್ರೀಡಾಕೂಟ ಮಾದರಿ: ಸಚಿವ ದಿನೇಶ್‌ ಗುಂಡೂರಾವ್‌

 

ಮಂಗಳೂರು: ಕ್ರೀಡೆಗೆ ಎಲ್ಲರನ್ನು ಒಂದು ಮಾಡುವ, ಬೇಸೆಯು ಶಕ್ತಿ ಇದೆ. ಗ್ರಾಮ ಪಂಚಾಯಿತಿ ಸದಸ್ಯರು ಒತ್ತಡ ಮುಕ್ತವಾಗುವುದಕ್ಕೆ ಇಂತಹ ಕ್ರೀಡಾಕೂಟ ಅತ್ಯಂತ ಸಹಕಾರಿ ಎಂದು ಆರೋಗ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಅಡ್ಯಾರಿನ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ಗ್ರಾಮ ಸ್ವರಾಜ್ ಪ್ರತಿಷ್ಠಾನ ಹಾಗೂ ಸ್ಥಳೀಯ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪಂಚಾಯತ್‌ ರಾಜ್, ನಗರ ಸ್ಥಳೀಯಾಡಳಿತ ಜನಪ್ರತಿನಿಧಿ ಹಾಗೂ ಪಂಚಾಯತ್ ಸಿಬ್ಬಂದಿ ಕ್ರೀಡೋತ್ಸವ – ಸಾಂಸ್ಕೃತಿಕ ಸ್ಪರ್ಧೆ – ‘ಹೊಂಬೆಳಕು -2024’ ಸ್ಥಳೀಯಾಡಳಿತದ ಸಂಭ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪಂಚಾಯತ್ ಸದಸ್ಯರನ್ನು ಸೇರಿಸಿದಾಗ ಒಂದು ಕುಟುಂಬದ ಬಾಂಧವ್ಯದ ಜತೆ ಕ್ರೀಡೆಯಲ್ಲಿ ಭಾಗಿ ಆಗುವದರಿಂದ ಸ್ನೇಹದ ವಾತಾವರಣ ನಿರ್ಮಾಣ ಆಗುತ್ತದೆ. ರಾಜಕೀಯ ಏನೇ ಇದ್ದರೂ ಕೂಡ ಅಂತಿಮವಾಗಿ ಜನ ಸೇವೆ ಮಾಡುವುದೇ ಮುಖ್ಯ. ಚುನಾವಣೆ ಇದ್ದಾಗ ಮಾತ್ರ ರಾಜಕಾರಣ ಮಾಡುವ ಉಳಿದ ಸಮಯ ಅಭಿವೃದ್ದಿ ಬಗ್ಗೆ ಚಿಂತಿಸಿ ಕೆಲಸ ಮಾಡಬೇಕಾದರೆ ನಮ್ಮ ನಡುವೆ ಸ್ನೇಹ ಪರವಾದ ವಾತಾವರಣ ನಿರ್ಮಾಣವಾಗಲು ಕ್ರೀಡೆ ಸಹಕಾರಿ ಆಗಿದೆ ಎಂದರು.

  1.  

ಸ್ಪೀಕರ್‌ ಯು.ಟಿ. ಖಾದರ್ ಅವರು ಕಾರ್ಯಕ್ತಮ ಉದ್ಘಾಟಿಸಿ ಮಾತನಾಡಿ, ಹೊಂಬೆಳಕು ಕಾರ್ಯಕ್ರಮದ ಮೂಲಕ ಎಲ್ಲಾ ಸದಸ್ಯ ಮಿತ್ರರಿಗೆ ಪ್ರೋತ್ಸಾಹ, ಆತ್ಮವಿಶ್ವಾಸ, ಧೈರ್ಯ ತುಂಬುವ ಕೆಲಸ ಆಗಿದೆ. ರಾಜ್ಯದ, ದೇಶದ ಅಭಿವೃದ್ದಿಗೆ ಕಾಣದ ಕೈಗಳಾಗಿ ದುಡಿವ ಮತ್ತು ತಮ್ಮದೇ ಆದ ಪ್ರಾಮಾಣಿಕ ಕೊಡುಗೆ ನೀಡುತ್ತಿದ್ದೀರಿ ಎಂದು ಹೇಳಿದರು.

ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್‌ ಪೂಜಾರಿ, ಶಾಸಕರಾದ ಅಶೋಕ ಕುಮಾರ್‌ ರೈ, ಡಾ. ಮಂಜುನಾಥ ಭಂಡಾರಿ, ಹರೀಶ್‌ ಕುಮಾರ್‌, ಮಾಜಿ ಸಚಿವ ಅಭಯಚಂದ್ರ ಜೈನ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್‌, ಮಮತಾ ಗಟ್ಟಿ, ಸದಾಶಿವ ಉಳ್ಳಾಲ್‌, ಪ್ರವೀಣ್‌ ಚಂದ್ರ ಆಳ್ವ ಸೇರಿದಂತೆ ಹಲವರು ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com