Breaking News

499 ಮಂದಿ ಫಲಾನುಭವಿಗಳಗೆ ಹಕ್ಕು ಪತ್ರ ವಿತರಿಸಿದ: ಶಾಸಕ ಸತೀಸ್ ಸೈಲ್

 

ಕಾರವಾರ: ಗ್ರಾಮ ಪಂಚಾಯಿತಿಗಳಲ್ಲಿನ ವಸತಿ ರಹಿತ ಫಲಾನುಭವಿಗಳ ಪಟ್ಟಿ ಮಾಡಿ ಪಂಚಾಯಿತಿಯಲ್ಲಿ ಠರಾವು ಮಾಡಿ, ವರದಿ ನೀಡಿದಲ್ಲಿ ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಿಸುವ ಕೆಲಸ ಮಾಡಲಾಗುವುದು ಎಂದು  ಶಾಸಕ ಸತೀಶ ಕೆ ಸೈಲ್ ಹೇಳಿದರು.

ಕಾರವಾರ ರಂಗಮಂದಿರದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ  ವತಿಯಿಂದ ಆಯೋಜಿಸಿದ್ದ, ಬಸವ ವಸತಿ ಯೋಜನೆ ಮತ್ತು ಡಾ. ಅಂಬೇಡ್ಕರ್ ವಸತಿ ಯೋಜನೆ ಅಡಿ ಆಯ್ಕೆಯಾದ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

  1.  

ಕಾರವಾರ ತಾಲೂಕಿನ 18 ಗ್ರಾಮ ಪಂಚಾಯತಗಳಲ್ಲಿ, ಬಸವ ಯೋಜನೆ ಅಡಿ 486 ಮತ್ತು ಡಾ. ಅಂಬೇಡ್ಕರ್ ಯೋಜನೆ ಅಡಿ 13 ಸೇರಿದಂತೆ ಒಟ್ಟು 499 ಫಲಾನುಭವಿಗಳು 2022-23 ನೇ ಸಾಲಿನಲ್ಲಿ ಆಯ್ಕೆಯಾಗಿದ್ದು, ಆಯ್ಕೆಯಾಗಿರುವ ಎಲ್ಲಾ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಲು ಹಂತ ಹಂತವಾಗಿ ಸಹಾಯಧನ ಬಿಡುಗಡೆಯಾಗಲಿದ್ದು, ಬಹು ದಿನಗಳ ತಮ್ಮ ಸ್ವಂತ ಮನೆ ನಿರ್ಮಾಣದ ಕನಸನ್ನು ಸಾಕಾರಗೊಳಿಸಿಕೊಳ್ಳುವಂತೆ ಹೇಳಿದರು.

ತಾಲೂಕು ಪಂಚಾಯಿತಿ ಇಒ ಈರಣ್ಣ ಗೌಡ, ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು ವಿವಿಧ ಗ್ರಾಮಗಳ ಗ್ರಾಮಸ್ಥರು ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com